Vijayapura News : ವಿಠ್ಠಲ ಎಮ್. ಗಣಿ ಹೃದಯಸ್ಪರ್ಶಿ ಅಭಿನಂದನ ಸಮಾರಂಭ

ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಿಸೋಣ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ವಿಠ್ಠಲ ಎಮ್. ಗಣಿ ಮಾತನಾಡಿದರು.

0
92
managoli image
ವಿಜಯಪುರ: ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ (managoli) ಪಟ್ಟಣದ ಕ್ರೀಯಾಶೀಲ ಶಿಕ್ಷಕರಾದ ವಿಠ್ಠಲ ಎಮ್. ಗಣಿ ಕೌಟಿಲ್ಯ ಶಿಕ್ಷಣ ಸಂಸ್ಥೆ ಇವರಿಗೆ ಜನಸಿರಿ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶಿಕ್ಷಕರ ಹಬ್ಬ-2024 ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ಮನಗೂಳಿಯ ಕೌಟಿಲ್ಯ ಶಿಕ್ಷಣ ಸಂಸ್ಥೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಗ್ರಾಮದ ಗಣ್ಯರು ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೃಷ್ಟಿ ಕಾರಜೋಳ 9ನೇ ತರಗತಿ ವಿದ್ಯಾರ್ಥಿ ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಚಂದ್ರಶೇಖರ ಮಾಗಣಗೇರಿ ಮುಖ್ಯ ಗುರುಗಳು ಗ್ರಾಮದ ಗಣ್ಯರನ್ನು ಶಾಲೆಯ ಸಿಬ್ಬಂದಿ ಅವರನ್ನು ಎಲ್ಲ ಎಲ್ಲ ಮುದ್ದು ಮಕ್ಕಳನ್ನು ಸ್ವಾಗತಿಸಿದರು. ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿಠ್ಠಲ ಎಮ್. ಗಣಿ ಗುರುಗಳು ಕಾಯಾ,ವಾಚಾ, ಮನಸಾ ಹೀಗೆ ಶೈಕ್ಷಣಿಕ ಸೇವೆ ಸಲ್ಲಿಸುತ್ತ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಿಸೋಣ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸುಭಾಸ ಮುತ್ತಗಿ ಗಣ್ಯರು ವಿದ್ಯೆ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವು ಮುಖ್ಯ ಇಲ್ಲಿಯ ಮಕ್ಕಳಲ್ಲಿ ಸಂಸ್ಕಾರವು ತುಂಬಿ ತುಳುಕುತ್ತಿದೆ ಎಂದು ಮಾತನಾಡಿದರು.
(managoli) ಶ್ರೀಮತಿ ಪ್ರಿಯಾಂಕ ಹಡಪದ, ಶ್ರೀಮತಿ ನೀಲಮ್ಮ ಹಳ್ಳಿ, ಶ್ರೀಮತಿ ಪೂಜಾ ಜಾನಕರ, ಗುರುಮಾತೆಯರು ಹಾಡಿನ ಮೂಲಕ ಹಾರೈಸಿದರು. ಶ್ರೀಮತಿ ಉಷಾ ಮಾಗಣಗೇರಿ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಗುಣಕಿ  ಆರತಿ ಮಾಡಿದರು. ಕುಮಾರಿ ಶಿವಾನಿ ಹಜೇರಿ, ಕುಮಾರ ಹಾಜಿಸಾಬ ಬಾಗವಾನ ಮತ್ತು ಕುಮಾರ ಬಸವರಾಜ ತಳೇವಾಡ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯ ಭಾವಚಿತ್ರವನ್ನು ನೀಡಿ ಅಭಿನಂದಿಸಿದರು.
ಶ್ರೀಮತಿ ಅನ್ನಪೂರ್ಣ ಪಾಟೀಲ ಗುರುಮಾತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ವರ್ಷಾ ಉಕ್ಕಲಿ ಕುಮಾರಿ ಅಲ್ಪತಜಹಾ ಬರಿಇನಾಮದಾರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ರಾಜು ಕೊತಿ ಶಿಕ್ಷಕರು ಇದೇ ಸಂಸ್ಥೆಯಲ್ಲಿ ಕಲಿತು ಇಂದು ಇಲ್ಲೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಹೆಮ್ಮೆಯಿದೆ ಎಂದು ಮಾತನಾಡಿದರು.
ಶ್ರೀಮತಿ ಸವಿತಾ ಮುಳಸಾವಳಗಿ ಗುರುಮಾತೆ ನಿರೂಪಣೆ ಮಾಡಿದರು. ಲಕ್ಷ್ಮಣ ಮಬ್ರುಕರ, ಶಂಕರ ಶಿವಮತ, ಸಂಗಮೇಶ ತೋನಶ್ಯಾಳ, ಮನಸೂರಸಾಬ ಬಾಗವಾನ, ಡಾ. ಸಂಗಮೇಶ ಮಾಗಣಗೇರಿ, ಗುರುನಾಥಗೌಡ ಪಾಟೀಲ, ಶಿವಾನಂದ ವಾಲಿ, ಶಿವಾನಂದ ಮುತ್ತಗಿ ಉಪಸ್ಥಿತರಿದ್ದರು.
ಶ್ರೀಮತಿ ಶೋಭಾ ಅಗಸರ ಮತ್ತು ಶ್ರೀ ರಾಮಜಿ ಕರಾಬಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು. ಶಂಕರಗೌಡ ಬಗಲಿ ಗುರುಗಳು ನಗೆಹನಿ ಮೂಲಕ ಮಕ್ಕಳನ್ನು ನಕ್ಕು ನಲಿಸಿ ವಂದಿಸಿದರು.
 


LEAVE A REPLY

Please enter your comment!
Please enter your name here