ಬಡವರ ಹಸಿವು ನೀಗಿಸಿದ ಕ್ರಾಂತಿ ಅಸೋಸಿಯೇಷನ್

0
200

ವಿಜಯಪುರ ಜೂನ್‌ 17: ವಿಜಯಪುರ ನಗರದಲ್ಲಿ ಲಾಕಡೌನ್ ಹಿನ್ನೆಲೆಯಲ್ಲಿ ಕ್ರಾಂತಿ ಅಸೋಸಿಯೇಷನ್ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ, ಬೇರೆ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಸಿದ್ಧ ಶುಚಿ-ರುಚಿಯಾದ ಆಹಾರ ಹಾಗೂ ಬಡಜನರಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡುವ ಮೂಲಕ ಬಡವರ ಹಸಿವು ನಿಗಿಸುವಲ್ಲಿ ಕ್ರಾಂತಿ ಅಸೋಸಿಯೇಷನ್‌ ದಿನವಿಡಿ ತಮ್ಮ ಸಮಾಜಿಕ ಕಾರ್ಯ ನಡೆಸುತ್ತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರಾಂತಿ ಅಸೋಸಿಯೇಷನ್ ಅಧ್ಯಕ್ಷ, ಸಮಾಜ ಸೇವಕ ಅಬ್ದುಲ್‍ಅಜೀಮ್ ಇನಾಮದಾರ, ಕಳೆದ ಮೂರು ವರ್ಷಗಳಿಂದಲೂ ದಿನವೂ ಎರಡು ಹೊತ್ತು ಊಟ ಪೂರೈಸುತ್ತಿರುವ ಈ ಅಸೋಸಿಯೇಷನ್ ಈಗ ಕೊರೊನಾ ಸಂದರ್ಭದಲ್ಲಿ ತನ್ನ ಕಾರ್ಯವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಪ್ರಸ್ತುತ ಸ್ಪರ್ಧಾತ್ಮಕ ತರಬೇತಿ ಪಡೆದುಕೊಳ್ಳಲು ವಿಜಯಪುರದಲ್ಲಿ ವಾಸ್ತವ್ಯ ಮಾಡಿರುವ ವಿದ್ಯಾರ್ಥಿಗಳು ಊಟವಿಲ್ಲದೇ ಪರದಾಡುತ್ತಿದ್ದರು,

ಈ ಹಿನ್ನೆಲೆಯಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವ ಕಾರ್ಯ ಸಂಸ್ಥೆ ಮಾಡಿದೆ, ಅದೇ ತೆರನಾಗಿ ಪ್ರತಿದಿನವೂ ಎರಡು ತಂಡಗಳು ವಿಜಯಪುರ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಮೀನಾಕ್ಷಿ ಚೌಕ್, ಗಾಂಧಿ ಚೌಕ್, ಜಾಮೀಯಾ ಮಸೀದಿ, ಶಹಾಪೂರ ಅಗಸಿ, ಇಬ್ರಾಹಿಂಪೂರ ರೋಡ್, ಪೈಲ್ವಾನ ಗಲ್ಲಿ ಹೀಗೆ ಅನೇಕ ಸ್ಥಳಗಳಲ್ಲಿ ನೆಲೆಸಿರುವ ನಿರ್ಗತಿಕರಿಗೆ, ಕಡುಬಡವರಿಗೆ ಪ್ರತಿದಿನ ನಿರ್ದೀಷ್ಟ ಸಮಯಕ್ಕೆ ಊಟ ಕಳುಹಿಸಲಾಗುತ್ತಿದೆ. ಸ್ವಯಂ ಸೇವಕರ ಎರಡು ತಂಡಗಳು ಈ ಸ್ಥಳಗಳಿಗೆ ಭೇಟಿ ಕೊಟ್ಟು ಫಲಾನುಭವಿಗಳಿಗೆ ಊಟ ವಿತರಿಸುವ ಕಾರ್ಯ ಮಾಡಲಾಗುತ್ತಿದೆ.

ವಿವಿಧ ದಾನಿಗಳ ನೆರವಿನಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್‍ಗಳನ್ನು ವಿತರಿಸಲಾಗಿದೆ, ಈ ಸೇವಾ ಕೈಂಕರ್ಯಕ್ಕೆ ಅನೇಕರು ಕೈ ಜೋಡಿಸಿ ಪ್ರೋತ್ಸಾಹಿಸುತ್ತಿದ್ದಾರೆ, ಅವರೆಲ್ಲರ ಸಹಕಾರ ಫಲದಿಂದ ಕ್ರಾಂತಿ ಅಸೋಸಿಯೇಷನ್ ಲಾಕಡೌನ್ ಅವಧಿಯಲ್ಲಿ ಇನ್ನಷ್ಟೂ ಪರಿಣಾಮಕಾರಿಯಾಗಿ ಸಮಾಜ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಯಿತು ಎಂದು ಅಜೀಮ್ ಇನಾಮದಾರ ಸಂತೋಷ ಹಂಚಿಕೊಂಡರು.

ಜನರ ಪ್ರೋತ್ಸಾಹ, ಮಾರ್ಗದರ್ಶನದಿಂದ ಈ ಕಾರ್ಯ ನಡೆಯುತ್ತಿದೆ, ನನ್ನ ಸ್ನೇಹಿತರು, ಹಿತೈಷಿಗಳು ಈ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಪರಿಣಾಮ ಈ ಸೇವೆ ಸಾಧ್ಯವಾಗುತ್ತಿದೆ ಎಂದರು.


ambedkar image

LEAVE A REPLY

Please enter your comment!
Please enter your name here