ಕಂಗಾನಾ ರಾಣಾವತ್ ಗೆ ಕೊರೊನಾ ಪಾಸಿಟಿವ್:‌ ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡುತ್ತಿದೆಯೋ ಏನೋ ಗೊತ್ತಿಲ್ಲ.

0
139

ಬಾಲಿವುಡ್ ನಟಿ ಕಂಗನಾ ರಾಣಾವತ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಕಂಗನಾ ಪದೇ ಪದೇ ನಿಯಮ ಉಲ್ಲಂಘನೆಯ ಕಾರಣಕ್ಕೆ ಅವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಅವರು ಸಧ್ಯ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

“ಕಳೆದ ಕೆಲವು ದಿನಗಳಿಂದ ಸುಸ್ತು ಮತ್ತು ನಿಶ್ಯಕ್ತಿ ಕಾಡುತ್ತಿತ್ತು. ಕಣ್ಣುಗಳು ಉರಿಯುತ್ತಿದ್ದವು. ಹಿಮಾಚಲ ಪ್ರದೇಶಕ್ಕೆ ಹೋಗುವುದಕ್ಕಾಗಿ ನಿನ್ನೆ ನಾನು ಕೊರೊನಾ ಟೆಸ್ಟ್‌ ಮಾಡಿಸಿದ್ದು, ಇಂದು ಪಾಸಿಟಿವ್ ವರದಿ ಬಂದಿದೆ. ನಾನು ಕ್ವಾರಂಟೈನ್ ಆಗಿದ್ದೇನೆ” ಎಂದು ಕಂಗನಾ ರಾಣಾವತ್ ತಿಳಿಸಿದ್ದಾರೆ.

“ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡುತ್ತಿದೆಯೋ ಏನೋ ಗೊತ್ತಿಲ್ಲ. ಆದರೆ ನಾನು ಅದನ್ನು ನಾಶಗೊಳಿಸುತ್ತೇನೆ ಎಂಬುದು ನನಗೆ ಗೊತ್ತು. ನೀವು ಭಯಪಟ್ಟರೆ ಅದು ನಿಮ್ಮನ್ನು ಮತ್ತಷ್ಟು ಭಯಪಡಿಸುತ್ತದೆ. ಹಾಗಾಗಿ ಬನ್ನಿ ಈ ವೈರಸ್ ಅನ್ನು ನಾಶಗೊಳಿಸೋಣ. ಕೋವಿಡ್ 19 ಸಣ್ಣ ಜ್ವರವಲ್ಲದೇ ಬೇರೆನೂ ಅಲ್ಲ. ಅದು ಈಗ ಜನರಲ್ಲಿ ತುಂಬಾ ಒತ್ತಡ ಉಂಟು ಮಾಡಿ ಭಯಗೊಳಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ.


LEAVE A REPLY

Please enter your comment!
Please enter your name here