ನವದೆಹಲಿ ಮೇ 07: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಕೊರೊನಾ ವಿರುದ್ದ ದೇಶದ ಹೋರಾಟವನ್ನು ಬೆಂಬಲಿಸಲು 2 ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ.
Anushka and I have started a campaign on @ketto, to raise funds for Covid-19 relief, and we would be grateful for your support.
Let’s all come together and help those around us in need of our support.
I urge you all to join our movement.
Link in Bio! 🙏#InThisTogether pic.twitter.com/RjpbOP2i4G
— Virat Kohli (@imVkohli) May 7, 2021
ಅಂತರ್ ಜಾಲದ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಭಾರತದ ಬೃಹತ್ ಅಂತರ್ಜಾಲ ಸೈಟ್ ಆಗಿರುವ ‘ಕೆಟೊ’ ಮೂಲಕ ಅವರಿಬ್ಬರು ದೇಣಿಗೆ ಸಂಗ್ರಹಿಸುತ್ತಿದ್ದು, ದೇಶದಲ್ಲಿನ ಕೋವಿಡ್-19 ಪರಿಹಾರಕ್ಕಾಗಿ 7 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಈ ಉದ್ದೇಶಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸಿರುವುದಾಗಿ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಕೆಟೊನಲ್ಲಿ ಏಳು ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಅಭಿಯಾನದಿಂದ ಸಂಗ್ರಹಿಸಿದ ಹಣವನ್ನು ಆಕ್ಸಿಜನ್, ವೈದ್ಯಕೀಯ
ಮಾನವ ಸಂಪನ್ಮೂಲ, ಲಸಿಕೆ ಬಗ್ಗೆ ಅರಿವು ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಕೋವಿಡ್-19 ಸಾಂಕ್ರಾಮಿಕ ಕಾಣಿಸಿಕೊಂಡಾಗಿನಿಂದಲೂ ನಮ್ಮ ಆರೋಗ್ಯ ಸವಾಲು ಎದುರಿಸುತ್ತಿದ್ದು, ನಾವೆಲ್ಲ ಒಗ್ಗೂಡುವ ಅಗತ್ಯವಿದೆ ಮತ್ತು ನಮ್ಮ ದೇಶಕ್ಕಾಗಿ ನೆರವು ನೀಡಬೇಕಾಗಿದೆ ಎಂದು ಕೊಹ್ಲಿ ಇನ್ಸಾಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದು, ಕೋವಿಡ್-19 ಪರಿಹಾರಕ್ಕಾಗಿ ನಿಧಿ ಸಂಗ್ರಹ ಅಭಿಯಾನವನ್ನು ಘೋಷಿಸಿದ್ದೇವೆ. ನಮ್ಮ ಬೆಂಬಲಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.