ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಟಾಟಾ ಅವರು ಒಂದು ಸಾರಿ ಜರ್ಮನ್ ದೇಶದ ಹೋಟೆಲ್ ಒಂದಕ್ಕೆ ತಮ್ಮ ಸ್ನೇಹಿತರೊಬ್ಬರ ಜೊತೆ ಊಟಕ್ಕೆ ಹೋಗುತ್ತಾರೆ.ಇವರು ಹೋಟೆಲ್ ಒಳಗಡೆ ಹೋಗುತ್ತಿರಬೇಕಾದರೆ ಬಹಳಷ್ಟು ಟೇಬಲ್ ಗಳು ಖಾಲಿಯಾಗಿರುತ್ತವೆ. ಒಂದು ಟೇಬಲ್ ನಲ್ಲಿ ಇಬ್ಬರು ನವದಂಪತಿಗಳು ಕುಳಿತುಕೊಂಡಿದ್ದರೆ ಇನ್ನೊಂದು ಮೂಲೆಯಲ್ಲಿ ವಯಸ್ಸಾದ ಮೂರ್ನಾಲ್ಕು ಜನ ಮಹಿಳೆಯರು ಕುಳಿತುಕೊಂಡಿರುತ್ತಾರೆ. ಅಲ್ಲಿ Serve ಮಾಡುತ್ತಿದ್ದ ಯುವಕ ಯಾವುದೇ ಟೇಬಲ್ ನಲ್ಲಿ ಮಿಕ್ಕಿ ಉಳಿದ ಆಹಾರವನ್ನು ಅಚ್ಚುಕಟ್ಟಾಗಿ ಎತ್ತಿ ಆ ಮಹಿಳೆಯರಿಗೆ ತಂದು ಕೊಡುತ್ತ ಇದ್ದರೆ ಆ ಮಹಿಳೆಯರು ಅದನ್ನು ತಿನ್ನುತ್ತ ಇರುತ್ತಾರೆ. ಇತ್ತ ಕುಳಿತಿದ್ದ Young couple ಟೇಬಲ್ ಮೇಲೆ ತಾವು Order ಮಾಡಿದ್ದ ಎರಡೇ ಎರಡು ಚಿಕ್ಕ ಪ್ಲೇಟ್ ನಲ್ಲಿದ್ದ ಊಟವನ್ನು ಸೇವನೆ ಮಾಡುತ್ತಿರುತ್ತಾರೆ. ಆ Young couple ನ ನೋಡಿದ ಟಾಟಾ ಅವರಿಗೆ ಆ ಕ್ಷಣದಲ್ಲಿ ಅನಿಸಿದ್ದು ಏನೆಂದರೆ ಇಂಥ ಜಿಪುಣ ಹುಡುಗನೊಂದಿಗೆ ಆ ಹುಡುಗಿ ತುಂಬ ದಿವಸ ಇರಲಾರಳು ಅನ್ಕೊಂಡು Server ನ ಕರೆದು ತಮ್ಮ ಊಟ Order ಮಾಡುತ್ತಾರೆ. ಭಾರತೀಯರು ತುರ್ತಾಗಿ ತಿಳಿದುಕೊಳ್ಳಬೇಕಾದ ವಿಷಯವಾಗಿದೆ. Importance of Food for Indians

ತುಂಬ ಹಸಿದಿದ್ದ ಟಾಟಾ ಅವರಿಗಾಗಿ ಟಾಟಾ ಅವರ ಸ್ನೇಹಿತ ವಿವಿಧ ಬಗೆಯ ಊಟವನ್ನು Order ಮಾಡುತ್ತಾರೆ. ಊಟ ಮುಗಿಸಿದ ಟಾಟಾ ಮತ್ತು ಅವರ ಸ್ನೇಹಿತ Bill Pay ಮಾಡಿ ಹೊರಡಲು ರೆಡಿಯಾಗುತ್ತಿದ್ದಂತೆ Server ಇವರ ಟೇಬಲ್ ಮೇಲಿದ್ದ ಮಿಕ್ಕುಳಿದ ಊಟವನ್ನು ಎತ್ತಿ ಮೂಲೆಯಲ್ಲಿ ಕುಳಿತ ಆ ಮಹಿಳೆಯರಿಗೆ ಒಯ್ದು ಕೊಡುತ್ತಾನೆ ಆಗ ಅಲ್ಲಿದ್ದ ಮಹಿಳೆಯರಲ್ಲಿ ಒಬ್ಬ ಮಹಿಳೆ ಟಾಟಾ ಅವರನ್ನು ಕುರಿತು ಅನಗತ್ಯ ಆಹಾರವನ್ನು Order ಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಾಳೆ ತಕ್ಷಣ ಟಾಟಾ ಅವರ ಸ್ನೇಹಿತ ಮಧ್ಯೆ ಪ್ರವೇಶ ಮಾಡಿ ತಾವು Order ಮಾಡಿದ್ದ ಎಲ್ಲ ಆಹಾರಕ್ಕೆ ಬಿಲ್ಲು ಪಾವತಿಸಿದ್ದು ಇದು ನಿನಗೆ ಸಂಬಂಧಪಡದೇ ಇರುವ ವಿಷಯ ಎಂದು ಆ ಮಹಿಳೆಗೆ ಜೋರಾಗಿ ಮಾತನಾಡಿದಾಗ ಕೆರಳಿದ ಆ ಮಹಿಳೆ ತನ್ನ ಬ್ಯಾಗ್ ನಲ್ಲಿದ್ದ ಮೋಬೈಲ್ ಹೊರತೆಗೆದು ಯಾರಿಗೋ ಕಾಲ್ ಮಾಡುತ್ತಾಳೆ, ಕೇವಲ 5-10 ನಿಮಿಷದಲ್ಲಿ Uniform ನಲ್ಲಿದ್ದ ಸಂಬಂಧ ಪಟ್ಟ ಅಧಿಕಾರಿಯೊಬ್ಬರು ಸ್ಥಳಕ್ಕೆ ಬರುತ್ತಾರೆ. ಭಾರತೀಯರು ತುರ್ತಾಗಿ ತಿಳಿದುಕೊಳ್ಳಬೇಕಾದ ವಿಷಯವಾಗಿದೆ. Importance of Food for Indians

ಆಗ ಆ ಮಹಿಳೆ ನಡೆದ ಘಟನೆಯನ್ನು ಆ ಅಧಿಕಾರಿ ಮುಂದೆ ವಿವರಿಸಿದಾಗ ಆ ಅಧಿಕಾರಿ ಮಹಿಳೆಯ ಮಾತನ್ನು ಪುರಸ್ಕರಿಸುತ್ತ ಟಾಟಾ ಮತ್ತು ಅವರ ಸ್ನೇಹಿತನಿಗೆ 50 ಯುರೋಗಳ ದಂಡವನ್ನು ವಿಧಿಸುತ್ತಾ ದುಡ್ಡು ನಿಮ್ಮದಿರಬಹುದು ಆದರೇ ಸಂಪನ್ಮೂಲ ನಿಮ್ಮದಲ್ಲ ಯಾವುದೇ ಸಂಪನ್ಮೂಲವನ್ನು ನಿಮ್ಮ ಹಣದಿಂದ ಹಾಳು ಮಾಡುವ ಅಧಿಕಾರ ನಿಮಗಿಲ್ಲ ಎನ್ನುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಹೊರಟು ಹೋಗುತ್ತಾನೆ.
ಈ ಘಟನೆ ಟಾಟಾ ಅವರ ಮೇಲೆ ಅದೆಷ್ಟು ಪರಿಣಾಮ ಬೀರಿತ್ತು ಎಂದರೆ ಸ್ವತಃ ಟಾಟಾ ಅವರೇ ಈ ಘಟನೆಯನ್ನು ಟ್ವಿಟ್ ಮಾಡುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಅನ್ನವನ್ನು ಕೇವಲ ಸಂಪನ್ಮೂಲ ಎಂದುಕೊಳ್ಳುವ ಒಂದು ದೇಶ ತನ್ನ ಸಂಪನ್ಮೂಲ ಹಾಳಾಗದಂತೆ ಯಾವ ರೀತಿ ಕಾಪಾಡಿಕೊಳ್ಳುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಸಂಪನ್ಮೂಲ, ಕೃಷಿ, ಆಹಾರದ ವಿಷಯ ಬಂದಾಗ USA ನಂತರ ಜಗತ್ತಿನ ಎರಡನೆ ದೊಡ್ಡ ರಾಷ್ಟ್ರ ಭಾರತ ಇಲ್ಲಿ 159.7 ಮಿಲಿಯನ್ ಹೆಕ್ಟೇರ್ ಅಥವಾ 394.6 ಮಿಲಿಯನ್ ಎಕರೆಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತವೆ.

ಪ್ರತಿ ವರ್ಷ ಭಾರತದಲ್ಲಿಉತ್ಪಾದಿಸಲಾಗುವ ಆಹಾರ 295.67 MT ಮಿಲಿಯನ್ ಟನ್ ಇದು ಸಣ್ಣ ಪ್ರಮಾಣದ ಉತ್ಪಾದನೆ ಏನಲ್ಲ ಇಷ್ಟಿದ್ದರೂ ಸಹ ಭಾರತದಲ್ಲಿ ಹಸಿವಿನಿಂದ ಸಾಯುವ ಜನರ ಪ್ರಮಾಣ ಒಂದು ದಿನಕ್ಕೆ 7000 ಒಂದು ವರ್ಷಕ್ಕೆ ಕನಿಷ್ಟ 25 ಲಕ್ಷ ಜನ ಹಸಿವಿನಿಂದ ಸಾಯುತ್ತಾರೆ ಎಂದರೆ ಎಂತಹವರಿಗೂ ಕೂಡ ಆಶ್ಚರ್ಯ ಎನಿಸಬಹುದು. ಇಷ್ಟು ಮಾತ್ರ ಅಲ್ಲ ಭಾರತದಲ್ಲಿ Malnutrition (ಅಪೌಷ್ಟಿಕತೆ) ನಿಂದ ಸಾಯುವ ಮಕ್ಕಳ ಸಂಖ್ಯೆ 69% . ಒಂದು ಅಂಕಿ ಅಂಶದ ಪ್ರಕಾರ 2018 ರಲ್ಲಿ ಭಾರತದಲ್ಲಿ Malnutrition ನಿಂದ ಸತ್ತ ಮಕ್ಕಳ ಸಂಖ್ಯೆ 8,82000 , ಅದೇ ನಮ್ಮ ಪಕ್ಕದ ರಾಷ್ಟ್ರ ಪಾಕಿಸ್ತಾನ ದಲ್ಲಿ Malnutrition ನಿಂದ ಸತ್ತ ಮಕ್ಕಳ ಸಂಖ್ಯೆ 4,0900(2019) ಅಂದರೆ ಯೋಚನೆ ಮಾಡಿ.

ಇದೆಲ್ಲಕ್ಕಿಂತಲೂ ಆಘಾತಕಾರಿ ವಿಷಯ ಎಂದರೆ ಭಾರತದಲ್ಲಿ ಪ್ರತಿವರ್ಷ ಹಾಳಾಗುವ ಆಹಾರದ ಪ್ರಮಾಣ ಎಷ್ಟು ಗೊತ್ತೆ ? 67 MT ಅಂದರೆ ಸುಮಾರು 92 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಆಹಾರ ಹಾಳಾಗುತ್ತದೆ. ಇದು ಆಸ್ಟ್ರೇಲಿಯಾ ದೇಶದ ಒಂದು ವರ್ಷದ ನಿವ್ವಳ ಆಹಾರ ಉತ್ಪಾದನೆಗೆ ಸಮ. ಇಷ್ಟು ಪ್ರಮಾಣದ ಆಹಾರ ಇದ್ದರೂ ಸಹ ಭಾರತದಲ್ಲಿ ಲಕ್ಷ ಲಕ್ಷ ಜನ ಹಸಿವಿನಿಂದ ಸಾಯುತ್ತಾರೆ ಅಂದರೆ ಕಾರಣ ಏನು? ಇದು ಪ್ರತಿಯೊಬ್ಬ ನಾಗರಿಕ ಯೋಚಿಸುವ ವಿಷಯ. ಭಾರತೀಯರು ತುರ್ತಾಗಿ ತಿಳಿದುಕೊಳ್ಳಬೇಕಾದ ವಿಷಯವಾಗಿದೆ. Importance of Food for Indians
ಇದನ್ನೂ ಓದಿ: ಹೆಣ್ಣು: ಹೆಣೆಯಲೇಬೇಕು ನೂರಾರು ಕಾಲಿನ ಜಡೆ..

ಇದಕ್ಕೆ ಕಾರಣಗಳೇನು? ಎನ್ನುವುದರ ಮೇಲೆ ದೃಷ್ಟಿ ಹಾಯಿಸಿದರೆ ಕಾರಣಗಳು ತುಂಬ ಸ್ಪಷ್ಟವಾಗಿ ಕಾಣುತ್ತವೆ ಮೊದಲನೆಯ ಕಾರಣ ಆಹಾರ ಸರಬರಾಜು ಮತ್ತು ನಿರ್ವಹಣೆ ಮಾಡಬೇಕಾದ ಸರ್ಕಾರ, ಎರಡನೆಯ ಕಾರಣ ಬಂಡವಾಳ ಶಾಹಿಗಳು, ಮತ್ತು ಕೊನೆಯದಾಗಿ ಅನ್ನದ ಬೆಲೆ ತಿಳಿಯದ ನಾಗರೀಕರು. ಇಲ್ಲಿ ಯಾರಿಗೂ ಕೂಡ ಇದು ಗಂಭೀರ ವಿಷಯ ಎಂದು ಅನಿಸುತ್ತಲೇ ಇಲ್ಲ. ಇಲ್ಲಿ ಯಾರೂ ಕೂಡ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಹಾಗಾದರೆ ಇದಕ್ಕೆ ಪರಿಹಾರವೇನು ? ಯೋಚಿಸಲೇ ಬೇಕಲ್ಲವೇ ? ಇದಕ್ಕೆ ಪರಿಹಾರ ಇಲ್ಲ ಅಂತೇನೂ ಇಲ್ಲ ಪರಿಹಾರ ಇದೆ.

ಒಂದು ಸರ್ಕಾರ ಸರಿಯಾದ ನೀತಿ ನಿಯಮಗಳನ್ನು ಜಾರಿಗೆ ತಂದು ಆಹಾರ ಹಾಳಾಗುವ/ಹಾಳುಮಾಡುವುದನ್ನು ನಿಯಂತ್ರಿಸಬೇಕು. ಎರಡು ಚಿಕ್ಕ ಪುಟ್ಟ ಹೊಟೇಲ್ ಗಳ ಜೊತೆ ಬೃಹತ್ ರೆಸ್ಟೋರೆಂಟ್ ಗಳನ್ನು ನಿಯಂತ್ರಿಸುವ ಬಂಡವಾಳ ಶಾಹಿಗಳು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಆಹಾರ ಪೂರೈಸಬೇಕು ಮತ್ತು ಹೆಚ್ಚುವರಿ ಉಳಿದ ಆಹಾರವನ್ನು ಆಹಾರ ಕೊರತೆ ಇರುವ ಜನಗಳಿಗೆ ತಲುಪಿಸುವ ನಿಯಮ ಅಳವಡಿಸಿಕೊಳ್ಳಬೇಕು, ಕೊನೆಯಲ್ಲಿ ನಾಗರಿಕರು ಅವರ ಪಾತ್ರ ಇಲ್ಲಿ ತುಂಬ ಮುಖ್ಯ ಮದುವೆ, ಗೃಹ ಪ್ರವೇಶ, ರಾಜಕೀಯ ಕಾರ್ಯ ಕ್ರಮ ಇತ್ಯಾದಿಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಆಹಾರ ವಸ್ತುಗಳ ಬಳಕೆ ಮಾಡುವುದು ಮತ್ತು ಮಿಕ್ಕುಳಿದ ಆಹಾರ ವಸ್ತುಗಳನ್ನು ಸಂಘ ಸಂಸ್ಥೆಗಳ ಸ್ವಯಂ ಸೇವಕರ ಮೂಲಕ ಆಹಾರದ ಅಗತ್ಯ ಇರುವ ಜನಗಳಿಗೆ ತಲುಪಿಸುವ ಕಾರ್ಯ ಕಡ್ಡಾಯವಾಗಿ ಮಾಡಬೇಕು.

ಯಾರೇ ಆಗಲಿ ಹೊಟೇಲು, ಢಾಬಾ, ರೆಸ್ಟೋರೆಂಟ್ ಗಳಿಗೆ ಹೋದಾಗ ಹಸಿವಿಗೆ ತಕ್ಕಷ್ಟು Order ಮಾಡುವುದು, ದೊಡ್ಡಸ್ತಿಕೆಗೆ ಸಿಕ್ಕ ಸಿಕ್ಕಿದ್ದನ್ನೆಲ್ಲ Order ಮಾಡಿ style ಗಾಗಿ ಪ್ಲೇಟಲ್ಲಿ ಅರ್ಧ ಉಳಿಸಿ ಎದ್ದು ಹೋಗುವುದು, ಮನೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಅಡುಗೆ ಮಾಡುವುದು ಅಥವಾ ಮಿಕ್ಕಿ ಉಳಿದ (ಚನ್ನಾಗಿರುವ) ಆಹಾರವನ್ನು ಪುನರ್ಬಳಕೆ ಮಾಡದೇ ಬಿಸಾಕುವುದು ಇತ್ಯಾದಿ ವರ್ತನೆಗಳನ್ನು ಮಾಡದಿರುವುದು ಇವೇ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸಂಪನ್ಮೂಲವನ್ನು ಉಳಿಸಬಹುದು.

ಇಲ್ಲಿ ಪ್ರತಿಯೊಬ್ಬ ನಾಗರೀಕರೂ ಒಂದು ವಿಷಯ ನೆನಪಿನಲ್ಲಿಡಬೇಕು ದುಡ್ಡನ್ನು ಸಂಪಾದಿಸಬಹುದು ಆದರೆ ಆಹಾರವನ್ನು ಸಂಪಾದಿಸುವುದಕ್ಕೆ ಆಗಲ್ಲ, ಆಹಾರವನ್ನು ಬೆಳೆಯಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಶ್ರಮ ಮತ್ತು ಸಮಯ ಎರಡೂ ಬೇಕು. ಅಂತಹ ಅಮೂಲ್ಯವಾದ ಆಹಾರವನ್ನು ಲಕ್ಷ್ಮಿ.ಬ್ರಹ್ಮ..etc ದೇವರುಗಳಿಗೆ ಹೋಲಿಸಿ ಹುಸಿ ಭಕ್ತಿ ತೋರಿಸಿ ಹಾಳು ಮಾಡದೇ ಆಹಾರವನ್ನು ಕೇವಲ ಒಂದು ಸಂಪನ್ಮೂಲ ಅಂತ ತಿಳ್ಕೊಂಡು ಉಳಿಸಿದರೆ ಭಾರತದಲ್ಲಿ ಹಸಿವಿನಿಂದ ಸಾಯುವ ಜನಗಳ ಸಂಖ್ಯೆ ಕಡಿಮೆ ಆಗಬಹುದು. ಇವತ್ತು ಅಕ್ಟೋಬರ್ 16 ವಿಶ್ವ ಆಹಾರ ದಿನ. ಇವತ್ತಿನ ದಿವಸ ಭಾರತೀಯರಾದ ನಾವು ಆಹಾರದ ಮಹತ್ವ ಅರಿಯುವ ಪ್ರಯತ್ನ ತುರ್ತಾಗಿ ಮಾಡಲೇಬೇಕಾಗಿದೆ.
ಲೇಖಕರು – ರವೀಂದ್ರ ಎನ್.ಎಸ್
advertisement





















