ವಿಜಯಪುರ: ಹೆಣ್ಣು ಶಿಶು ಪತ್ತೆ

0
78

ವಿಜಯಪುರ ಸೆ.19: ನಗರದ ಪದ್ಮಾವತಿ ನಗರದಲ್ಲಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ದಿನಾಂಕ: 18-09-2020 ರಂದು ಅಂದಾಜು 05 ದಿನಗಳ ಅನಾಮದೆಯ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದು, ಹೆಣ್ಣು ಶಿಶುವಿನ ಜೈವಿಕ ಪಾಲಕರು ಇದ್ದರೆ, ದಿನ ಪತ್ರಿಕೆಯಲ್ಲಿ ಪ್ರಕಟಣೆಯಾದ 60 ದಿನಗಳೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ4/3 ವಿವೇಕ ನಗರ ಪಶ್ಚಿಮ, ವಿಜಯಪುರ ದೂರವಾಣಿ ಸಂಖ್ಯೆ: 08352-276354, ಮೊ.ನಂ: 9538940669 ಇವರನ್ನು ಸಂಪರ್ಕಿಸಬೇಕು. ಶಿಶು ಅಂದಾಜು 1.6 ಕೆ.ಜಿ. ಕೆಂಪು ಬಣ್ಣ, ಸಾಧಾರಣ ಮೈಕಟ್ಟು ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here