ಪತ್ನಿ ಶೀಲ ಶಂಕಿಸಿ ಕೊಲೆಗೈದ ಪತಿರಾಯ: ಪೊಲೀಸರಿಗೆ ತಾನೆ ಶರಣಾದ

0
214

ಹಾಸನ ಜೂ.13: 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಲೋಹಿತ್‍ಕುಮಾರ ಮತ್ತು ನಯನ ಹಾಸನ ಜಿಲ್ಲೆಯ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಜಗಳ ಮಾಮೂಲಿಯಾಗಿತ್ತು. ಸಂಬಂಧಿಕರು ಹಲವು ಬಾರಿ ಬುದ್ಧಿವಾದ ಹೇಳಿ ರಾಜಿ ಮಾಡಿಸಿದ್ದರು. ಆದರೆ ಲೋಹಿತ್‍ಕುಮಾರ ಪತ್ನಿಯ ಶೀಲ ಶಂಕಿಸಿ ಮನೆಯಲ್ಲಿ ಯಾವಾಗಲೂ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಇಬ್ಬರ ಜಗಳ ತಾರಕಕ್ಕೇರಿದೆ. ಲೋಹಿತ್‍ಕುಮಾರ ತನ್ನ ಹೆಂಡತಿಯನ್ನು ಆಕೆಯ ವೇಲಿನಿಂದಲೇ ಕುತ್ತಿಗೆಗೆ ಬಲವಾಗಿ ಬಿಗಿದು ಉಸಿರು ಕಟ್ಟಿಸಿ ಕೊಲೆಮಾಡಿದ್ದಾನೆ. ನಂತರ ತಾನೆ ಪೊಲೀಸರಿಗೆ ಶರಣಾಗಿದ್ದಾನೆ. ಇವರ ಜಗಳದಲ್ಲಿ ಇಬ್ಬರು ಮುದ್ದಾದ ಮಕ್ಕಳು ಈಗ ಬೀದಿ ಪಾಲಾಗಿದ್ದಾರೆ.


 

ambedkar image

LEAVE A REPLY

Please enter your comment!
Please enter your name here