ವಿಜಯಪುರ: ಮದುವೆ ವಿಷಯವಾಗಿ ಕೊಲೆ; ಜಲನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ

0
137

ವಿಜಯಪುರ ಮೇ. 31: ಗುಮ್ಮಟನಗರಿಯಲ್ಲಿ ರಾತ್ರಿ ವೇಳೆ ಅಳಿಯಂದಿರೇ ಮಾವನನ್ನು ಬೀಕರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ ಜಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಸ್ಮಾನ್ ಪಾಷಾ ಇನಾಂದಾರ (71) ಕೊಲೆಗೀಡಾದ ವ್ಯಕ್ತಿ. ಜಿಲಾನಿಪಾಷಾ ಜಾಗೀರದರ (45), ಖಾದ್ರಿ ಜಾಗೀರದಾರ (38), ನದೀಂ ಜಾಗೀರದಾರ (40) ಕೊಲೆ ಮಾಡಿದ ಆರೋಪಿಗಳು. ಕೊಲೆಗೀಡಾದ ವ್ಯಕ್ತಿಯ ಅಕ್ಕನ ಮಕ್ಕಳು.

ಜಮೀಲ್‍ನ ಮದುವೆಯ ವಿಷಯವಾಗಿ ಇವರ ಮತ್ತು ಆರೋಪಿತರ ನಡುವೆ ಜಗಳ ಇದ್ದು, ಪಿರ್ಯಾದಿದಾರರ ತಂದೆಯವರು ಆರೋಪಿತನ ಪರವಾಗಿ ವಹಿಸಿಕೊಂಡು ಮಾತನಾಡುತಿದ್ದುದ್ದರಿಂದ ಅವರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು ಆರೋಪಿತನ ಪರವಾಗಿ ಅವರ ಮನೆಯ ಅಣ್ಣತಮ್ಮಂದಿರ ನ್ಯಾಯದಲ್ಲಿ ಹಿರಿಯರಾಗಿ ಮಾತನಾಡಲು ಹೋಗಿದ್ದರಿಂದ ಈ ಮೂರು ಜನರು ಉಸ್ಮಾನ್‍ಪಾಷಾನ ಮೇಲೆ ಸಿಟ್ಟಾಗಿ ರಾತ್ರಿ 8.45 ಗಂಟೆಗೆ ಕಾರಿನಲ್ಲಿ ಹಿಟ್ಟಿನ ಗಿರಣಿಯ ಮುಂದೆ ಬಂದು ಆರೋಪಿತರು ಮೂರು ಜನರು ಉಸ್ಮಾನ್‍ಪಾಷಾನನ್ನು ಗಿರಣಿ ಒಳಗಿನಿಂದ ಎಳೆದುಕೊಂಡು ಹೊರಗೆ ಬಂದು ಒತ್ತಿ ಹಿಡಿದು, ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು, ರಕ್ತಗಾಯ ಮಾಡಿ ಮೂರು ಜನರು ಕಾರಿನಲ್ಲಿ ಎತ್ತಿ ಹಾಕಿಕೊಂಡು ಹೋಗಿ ಬಾರಾಕುಟ್ರಿ ತಾಂಡಾ ಕ್ರಾಸ್‍ದಿಂದ ಸ್ವಲ್ಪ ಮುಂದೆ ಕೋಲಾರ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ಶವವನ್ನು ಬಿಸಾಕಿ ಪರಾರಿಯಾಗಿದ್ದಾರೆ ಎಂದು ಉಸ್ಮಾನಪಾಷಾ ಪುತ್ರ ಮಹಮ್ಮದ ಯುನೂಸ್ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

LEAVE A REPLY

Please enter your comment!
Please enter your name here