ವಿಜಯಪುರ: ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೂಡಲೇ ನೀರು ಬಿಡಲು ಸೂಚನೆ

0
116

ವಿಜಯಪುರ ಎ.26 : ಜಿಲ್ಲೆಯ 17 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ 296 ಜನವಸತಿಗಳು, ಐಬಿಸಿ ಯೋಜನೆಯಡಿ ಉಮರಜ, ದಸೂರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನೀರಿನ ತೊಂದರೆಯಾಗುತ್ತಿದ್ದು, ಕಾಲುವೆಗಳ ಮೂಲಕ ನೀರು ಅತ್ಯವಶ್ಯಕವಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

ಅದರಂತೆ ಈ 17 ಬಹುಹಳ್ಳಿ ಕುಡಿಯುವ ನೀರು ಯೋಜನೆಗಳಲ್ಲಿ 296 ಜನವಸತಿಯ ಯೋಜನೆಯ ಉಮರಜ, ದಸೂರ, ನಂದರಗಿ, ರೇವಂತಗಾವ, ಹತ್ತಳ್ಳಿ, ಹಾವಿನಾಳ್, ನೀವರಗಿ, ಟಾಕಳಿ, ಮರಗೂರ, ಧೂಳಖೇಡ, ಉಮರಾಣಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನೀರಿನ ಅಭಾವದಿಂದಾಗಿ ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು, ಕಾಲುವೆಗಳ ಮೂಲಕ ಕೂಡಲೇ ನೀರು ಹರಿಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಐಬಿಸಿ ಮೂಲಕ 131.89 ಎಮ್‍ಸಿಎಫ್‍ಟಿ, ಎನ್‍ಎಲ್‍ಬಿಸಿ ಮೂಲಕ 5.13 ಎಮ್‍ಸಿಎಫ್‍ಟಿ, ಚಿಮ್ಮಲಗಿಯಿಂದ 76.68 ಎಮ್‍ಸಿಎಫ್‍ಟಿ, ಗುತ್ತಿ ಬಸವಣ್ಣ, ಐಎಲ್‍ಸಿ ಮೂಲಕ 10.29 ಎಮ್‍ಸಿಎಫ್‍ಟಿ ನೀರನ್ನು ಹರಿಸುವ ಮೂಲಕ ಜಿಲ್ಲೆಯ ನೀರನ್ನು ಅವಲಂಬಿಸಿರುವ ಈ 17 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ಐಆರ್ ಕಾಲುವೆಗಳ ಮೂಲಕ ಒಟ್ಟು 280 ಎಮ್‍ಸಿಎಫ್‍ಟಿ ನೀರು ಬಿಡುವ ಅವಶ್ಯಕತೆಯಿದ್ದು, ಕೂಡಲೇ ನೀರು ಬಿಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.


 

LEAVE A REPLY

Please enter your comment!
Please enter your name here