ಭಾರತಕ್ಕೆ ಎರಡನೇಯ ರಾಜ್ಯದಾನಿ ಅವಶ್ಯಕತೆ ಇದೇಯೇ! ಎಂಬುದರ ಕುರಿತು ಅಂದೇ ಡಾ. ಅಂಬೇಡ್ಕರ್ ಯೋಚಿಸಿದ್ದರು.!

0
176

ಒಂದೊಂದು ಸಲ ನಿಸರ್ಗವು ತ್ರಿಕಾಲ ಜ್ಞಾನಿಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಡಾ ಅಂಬೇಡ್ಕರರೇ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಅತೀಶಯೋಕ್ತಿ ಆಗಲಾರದು. ಡಾ ಅಂಬೇಡ್ಕರರು ವಿದ್ಯಾವಂತರು, ಬುದ್ದಿಂತರು, ರಾಜಕೀಯಪಟುಗಳು, ಪತ್ರಕರ್ತರು ಹೆಚ್ಚಾಗಿಯೂ ಅವರೊಬ್ಬ ವಿಶ್ವಮಾನವ ಕೂಡಾ ಹೌದು. ಇಂದು ವಿಶ್ವವೇ ಅವರ ಹುಟ್ಟಿದ ದಿನವನ್ನು ವಿಶ್ವಜ್ಞಾನಿಗಳ ದಿನವನ್ನಾಗಿ ಆಚರಿಸುತ್ತದೆ. ಇಂತಹ ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದು ಪ್ರತಿಯೊಬ್ಬರ ಸುದೈವ ಅಂತಾನೇ ಕರೀಬೇಕು.

ಡಾ|| ಅಂಬೇಡ್ಕರರ ಚಿಂತನೆಯೂ ಎಷ್ಟರ ಮಟ್ಟಿಗೆ ಇತ್ತು ಎಂದು ಹೇಳಲು ನಮ್ಮಲ್ಲಿ ಯಾವುದೇ ಮಾಪನಗಳು ಇಲ್ಲಾ. ಇದ್ದರೇ ಮಾಪನ ಮಾಡಿ ಹೇಳಬಹುದಿತ್ತು. ಸಂವಿದಾನ ಬರೆಯುದವಕ್ಕಿಂತ ಇಪ್ಪತ್ತು ವರ್ಷ ಮೊದಲೇ ಸಂವಿದಾನದ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಚರ್ಚೆ ಮಾಡಿದ್ದ ಅವರೂ, ಕೊನೆಗೆ, ಅವರೇ ಈ  ದೇಶದ ಸಂವಿಧಾನ ಬರೆಯುವದರಲ್ಲಿ ಪ್ರಮುಖರಾಗಿದ್ದು ಮತ್ತು ಅದು ಇಂದು ದಂತಕತೆಯಾಗಿ ನಮ್ಮ ಪಾಲಿಗೆ ಉಳಿದಿದೆ. ಡಾ|| ಅಂಬೇಡ್ಕರರು ಯಾವಾಗಲು ದೇಶದ ಒಳಿತನ್ನೇ ಯೋಚನೇ ಮಾಡಿದ್ದಲ್ಲದೇ ನಾನೊಬ್ಬ ಪ್ರಥಮ ಕೊನೆಯ ಭಾರತೀಯ’ ಮಾತೂ ಕೂಡಾ ಹೇಳಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ.

ದೇಶ ಸ್ವತಂತ್ರವಾದ ನಂತರ ದೇಶದಲ್ಲಿ ಉಂಟಾಗಬಹುದಾದ ಅನೇಕ ಸಮಸ್ಯೆಗಳ ಬಗ್ಗೆ ಅಂದೇ ಹೇಳಿದ್ದಾರೆ. ಕೆಲವೊಂದು ತಮ್ಮ ಪತ್ರಿಕೆಗಳ ಮೂಲಕ ಹೇಳಿದ್ದರೆ, ಇನ್ನೂ ಕೆಲವೊಂದನ್ನು ಸಂಸತ್ತಿನಲ್ಲೇ ಘಟ್ಟಿಯಾಗಿ ಹೇಳಿದ್ದು ಇದೆ. ಅದರಲ್ಲಿ “ಸಂವಿದಾನ ಮತ್ತು ಪ್ರಜಾಪ್ರಭುತ್ವ ಇದು ಅಂತ್ಯವಾದರೆ ನಮ್ಮ ದೇಶ ಮತ್ತೇ ಸಾವಿರಾರು ವರ್ಷಗಳು ಹಿಂದಕ್ಕೆ ಹೋಗುತ್ತದೆ ಪ್ರಜಾಪ್ರಭುತ್ವ ಮತ್ತು ಸಂವಿದಾನವನ್ನು ಉಳಿಸಲು ರಕ್ತಕೊಟ್ಟಾದರೂ ಉಳಿಸಿಕೊಳ್ಳಬೇಕು” ಎಂದು ಅಂದೇ ಕರೆ ನಿಡಿದ್ದು ಇದೆ. ಸಾಹೇಬರ ದೇಶದ ಮುಂದಿನಗಳಲ್ಲಿ ಎದುರಾಗುವ ಸಮಸ್ಯೆ ಯಾವುದೆಂದರೆ ಈ ಭರತ ಖಂಡದ ದೇಶಕ್ಕೆ ಎರಡನೇಯ ರಾಜ್ಯಧಾನಿ ಅವಶ್ಯಕತೆ ಇದೆ ಎಂಬುದರ ಬಗ್ಗೆ ಅಂದೇ ಚಿಂತಿಸಿದಲ್ಲದೇ ಸರಕಾರಕ್ಕೆ ಸಲಹೆ ಕೂಡಾ ಮಾಡಿದ್ದರು ಅದು ಇನ್ನೂ ಕನಸಾಗಿಯೇ ಉಳಿದಿದೆ.

ಭಾರತದಲ್ಲಿ ಮೊದಲಿಂದಲು ಎರಡೆರಡು ರಾಜ್ಯದಾನಿಗಳಿದ್ದವು. ಮೊಘಲರಿಂದ ಹಿಡಿದು ಬ್ರಿಟಿಷರವರೆಗೆ ಎರಡು ರಾಜ್ಯದಾನಿಗಳಿದ್ದವು. ಅವು ಆಡಳಿತದ ಅನಕೂಲಕ್ಕಾಗಿಯೂ ಹೌದು ಮತ್ತು ವಾತಾವರಣದ ಅನಕೂಲಕ್ಕಾಗಿಯೂ ಮಾಡಿಕೊಂಡಿದ್ದು ಇತ್ತು. ಈಗ ನಮ್ಮಲ್ಲಿ ಜನಪರ ಸರಕಾರವಾಗಿದ್ದರಿಂದ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ದೇಶಕ್ಕೆ ಎರಡು ರಾಜ್ಯದಾನಿಗಳು ಬೇಕೇ ಬೇಕು ಎಂದಿದ್ದರು.

ಇಗಿರುವ ದೆಹಲಿ ಅನಕೂಲವಲ್ಲವೇ ಎಂಬುದಕ್ಕೆ ಸಾಹೇಬರು ಉತ್ತರ ಹೀಗಿದೆ, ದಕ್ಷಿಣದ ಜನರಿಗೆ ಉತ್ತರದವರು ನಮ್ಮನ್ನು ಆಳುತ್ತಾರೆಂಬ ಅತೃಪ್ತಿ ಇದ್ದೆ ಇರುತ್ತದೆ. ಅದರಂತೆ, ದೆಹಲಿ ಬೇಸಿಗೆಯಲ್ಲಿ ಹೆಚ್ಚು ಬಿಸಿಲು, ಹೆಚ್ಚು ಶೀತ ಮತ್ತು ಹೆಚ್ಚು ಮಳೆಯಾದಾರಿತವಾಗಿದೆ. ಸುರಕ್ಷತೆಯ ದೃಷ್ಠಿಯಿಂದ ದೆಹಲಿ ಉತ್ತಮ ಪ್ರದೇಶವಾಗಿಲ್ಲಾ, ಅಕ್ಕ-ಪಕ್ಕದ ರಾಷ್ಟಗಳ ಜೊತೆ ಭಾರತ ಉತ್ತಮ ಬಾಂಧವ್ಯಕ್ಕಾಗಿ ಪ್ರಯತ್ನಸುತ್ತಿದೆ. ಆದರೆ, ಯುದ್ದ ನಡೆಯುದಿಲ್ಲಾ ಎಂದು ನಂಬಿ ಕೂಡ್ರಲು ಅಸಾದ್ಯ. ಅವಾಗೊಮ್ಮೆ ಯುದ್ದ ನಡೆದರೆ ಭಾರತ ಸರಕಾರವು ದೆಹಲಿಯನ್ನು ಬಿಟ್ಟು ಹೊಸ ನೆಲೆಯನ್ನು ಹುಡಕಲೇಬೇಕಾಗುತ್ತದೆ ಎಂಬುದನ್ನು ಚಿಂತಿಸಿದ್ದರು.

ಹಾಗೊಮ್ಮೆ ದೇಶಕ್ಕೆ ಎರಡನೇಯ ರಾಜ್ಯದಾನಿ ಬೇಕಾದರೆ ಯಾವದನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಒಂದು ಪಟ್ಟಿಯನ್ನೇ ತಯಾರಿ ಮಾಡಿಕೊಂಡಿದ್ದರು. ಮೊದಲನೇಯದ್ದಾಗಿ ಕಲ್ಕತ್ತಾದ ಬಗ್ಗೆ, ಕಲ್ಕತ್ತಾದ ಮೇಲೆ ಟಿಬೇಟ್ ಬಾಂಬ ದಾಳಿ ಮಾಡಬಹುದಾದ ಅಂತರದಲ್ಲಿ ಇದೆ. ಇನ್ನೂ ಚೀನಾ ಈಗ [ಆಗ] ಮಿತ್ರ ರಾಷ್ಟವಾಗಿದ್ದರಿಂದ ಮುಂದೆ ಎಲ್ಲಿಯವರೆಗೆ ಮಿತ್ರರಾಷ್ಟ್ರವಾಗಿರುತ್ತದೆ ಎಂಬುದನ್ನು ನಿಶ್ಚಯ ಮಾಡಲಾಗುವದಿಲ್ಲಾ ಅಂದಿದ್ದರು ಅದೇ ರೀತಿ, ಅವರು ಅಂದಂತೆ 1962 ರಲ್ಲಿ ಚೀಣಾದ ಜೊತೆ ಒಂದು ಯುದ್ದ ನಡದೇ ಹೊಯಿತು. ಇದು ಗೊತ್ತಿರುವ ವಿಷಯ. ಹೀಗಾಗಿ ಕಲ್ಕತ್ತಾ ಸರಿಯಾದ ಸ್ಥಳವಲ್ಲಾ ಎಂದಿದ್ದರು. ನಂತರ ಇನ್ನೂ ಬೊಂಬೆಯ ಕುರಿತು, ಇದು ಒಂದು ಬಂದರು, ಇಲ್ಲೊಮ್ಮೆ ಕೇಂದ್ರ ಸರಕಾರ ಇಲ್ಲಿ ಬಂದರೆ ಇದನ್ನು ಸಂರಕ್ಷಿಸುವಷ್ಟು ನೌಕಾಬಲ ನಮ್ಮಲ್ಲಿ ಇಲ್ಲಾ. ಹೀಗಾಗಿ, ಬಾಂಬೆ ಸರಿಯಾದ ಸ್ಥಳವಲ್ಲಾ ಎಂದಿದ್ದರು. ಇನ್ನೂ ಎರಡನೇಯ ರಾಜ್ಯದಾನಿಯಾಗಲು ನಾಲ್ಕನೇಯ ಜಾಗ ಹುಡಕಬೇಕಾದರೆ ಅದಕ್ಕೆ ಯೋಗ್ಯವಾದ ಸ್ಥಳ ‘ಹೈದರಾಬಾದ’ ಎಂದಿದ್ದರು.

ದಕ್ಷಿಣದಲ್ಲಿರುವ ಹೈದರಾಬಾದ ದೇಶಕ್ಕೆ ಎರಡನೇಯ ರಾಜ್ಯದಾನಿಯಾಗಲು ಉತ್ತಮ ಸ್ಥಳವೆಂದು ಮತ್ತು ಹೈದರಾಬಾದ ಸಿಕಂದರಾಬಾದ ಮತ್ತು ಬೊಲರಾಮಗಳನ್ನು ಸೇರಿಸಿ ಪ್ರಧಾನ ಕಮಿಷನರ್ ಪ್ರಾಂತವನ್ನು ರಚಿಸಿ ಆ ಸ್ಥಳವನ್ನು ಎರಡನೇಯ ರಾಜ್ಯದಾನಿಯನ್ನಾಗಿ ಮಾಡಬೇಕು ಎಂದು ಚಿಂತಿಸಿದ್ದರು. ಹೈದರಾಬಾದ ದೇಶ ಸಂರಕ್ಷಷಣೆಯ ದೃಷ್ಟಿಯಿಂದ ಹಾಗೂ ಎಲ್ಲಾ ರಾಜ್ಯಗಳಿಂದ ಇಲ್ಲಿಗೆ ಬರಲು ಹೈದರಾಬಾದ ಒಂದು ಉತ್ತಮ ಪ್ರದೇಶವಾಗಿದೆ. ಭಾರತ ಸರಕಾರವು ಚಳಿಗಾಲದಲ್ಲಿ ದೆಹಲಿಯಲ್ಲಿದ್ದು ಉಳಿದ ಸಮಯದಲ್ಲಿ ಹೈದರಾದನಲ್ಲಿ ಇರಬಹುದು. ಹೈದರಾಬಾದ ದೆಹಲಿಗಿಂತ ಉತ್ತಮ ನಗರ. ದೆಹಲಿಯಲ್ಲಿರುವ ಎಲ್ಲಾ ವೈಭವ ಇಲ್ಲಿ ಇದೆ. ಭವನಗಳ ಬೆಲೆ ಕೂಡಾ ಕಡಿಮೆ ಇದೆ. ಭವನಗಳು ದೆಹಲಿಗಿಂತಲೂ ಇಲ್ಲಿರುವ ಭವನಗಳು ಚೆನ್ನಾಗಿವೆ ಮತ್ತು ಶ್ರೇಷ್ಠವಾಗಿವೆ ಎಂದು ಹೇಳುತ್ತಾರೆ. ಇದನ್ನು ಕೇಂದ್ರ ಸರಕಾರವು ಕೇಂದ್ರ ಸರಕಾರ ರಾಜ್ಯಗಳ ಪುಣರ್ವಿಂಗಡಣೆ ಸಮಯದಲ್ಲಿ ಎರಡನೇ ರಾಜ್ಯದಾನಿ ಮಾಡಬೇಕು ಎಂದಿದ್ದರು.

ಆದರೆ, ಸಾಹೇಬರ ದೇಶಕ್ಕೆ ಎದುರಾಗುವ ಸಮಸ್ಯೆಯನ್ನು ಅಂದು ಕೊಂಡಂತೆ ಕೇಂದ್ರ ಸರಕಾರ ಮಾಡಿದ್ದರೆ ಇಂದು ದಕ್ಷಿಣದ ರಾಜ್ಯಗಳಲ್ಲಿ ಯಾವದೇ ಕೊರತೆ ಅನ್ನೊದೆ ಇರುತಿರಲಿಲ್ಲಾ. ಆದರೂ, ದಕ್ಷಿಣದ ಎರಡನೇ ರಾಜ್ಯದಾನಿ ಸಮಸ್ಯೆ ಹಾಗೇ ಉಳಿದಿದೆ ಮತ್ತು ಯವಾಗ ಕೆಂಡದಂತೆ ಉರಿಯುತ್ತದೆ ಅನ್ನೊದು ಗೊತ್ತಿಲ್ಲಾ. ಸಾಹೇಬರ ಚಿಂತನೆಯು ಅದೊಮ್ಮೆ ಕೆಂಡವಾಗಬೇಕಾದರೆ ದಕ್ಷಿಣದ ತಮಿಳರಿಂದ ಮಾತ್ರ ಸಾದ್ಯ. ಕಾರಣ ತಮಿಳರು ಯಾವಾಗಲೂ ಉತ್ತರದ ಆಡಳಿತ ನಿರಾಕರಿಸುತ್ತಾ ತಮ್ಮದೇ ಪ್ರಾಭಲ್ಯ ಮೇರೆಯುವ ಜನ ಅದು ಎಂದು ನಾನು ಇಲ್ಲಿ ಹೇಳಬಲ್ಲೆ.

 ಸುರೇಂದ್ರ ಉಗಾರೆ – ನ್ಯಾಯವಾದಿಗಳು, ಬೆಳಗಾವಿ.


LEAVE A REPLY

Please enter your comment!
Please enter your name here