ಮಹಾಮಾರಿ ಕರೋನಾ ವೈರಸ್ : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯಹಸ್ತ ನೀಡಿದ ಗಣ್ಯರು

0
229

ಉದ್ಯಮಿ ಶ್ರೀ ಮಂಜುನಾಥಗೌಡ ಪಾಟೀಲ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿಯ ಚೆಕ್‍ನ್ನು ಉಪ ಮುಖ್ಯಮಂತ್ರಿ ಶ್ರೀ ಗೋವಿಂದ ಕಾರಜೋಳ ಅವರಿಗೆ ಶುಕ್ರವಾರದಂದು ಹಸ್ತಾಂತರಿಸಿದರು.


ಕೊವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿಜಯಪುರದ ಡಿಸ್ಟ್ರಿಕ್ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್ ವತಿಯಿಂದ 2.5ಲಕ್ಷ ರೂ. ಗಳ ಚೆಕ್‍ನ್ನು ಇಂದು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭಧಲ್ಲಿ ಅಸೋಸಿಯೇಶನ್ ಅಧ್ಯಕ್ಷರಾದ ಡಾ.ಕೆ.ಆರ್.ಕುಲ್ಲೊಳ್ಳಿ, ಅರುಣ ಹುಂಡೇಕಾರ, ರಾಜು ಇಜೇರಿ, ಎಚ್.ಆರ್.ತಿವಾರಿ, ಶ್ರೀನಿವಾಸ ಬಾಹೇತಿ, ಆನಂದ ಮಂಗಳವೇಡೆ, ಈರಣಗೌಡ ಪಾಟೀಲ ಹಾಗೂ ಸುನೀಲ ಇಜೇರಿ ಉಪಸ್ಥಿತರಿದ್ದರು.


ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿಜಯಪುರದ ಸಾಯಿನಾಥ ಸೆಕ್ಯೂರಿಟಿ ಪೋರ್ಸ್ ವತಿಯಿಂದ ಇಂದು 1 ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮನೋಹರ, ಸದಸ್ಯರುಗಳಾದ ರಾಜು ಬಿರಾದಾರ, ಭೀಮಣ್ಣ ಹಳೆಮನಿ ಮತ್ತು ಅಶೋಕ ಬೆಳ್ಳನ್ನವರ ಉಪಸ್ಥಿತರಿದ್ದರು.


ವೈಯಕ್ತಿಕವಾಗಿ 1 ಲಕ್ಷ ರೂ. ನೀಡಿದ ಕೋವಿಡ್ -19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವೈಯಕ್ತಿಕವಾಗಿ 1ಲಕ್ಷ ರೂ. ಗಳನ್ನು ವಿಜಯಪುರದ ನಿವೃತ್ತ ನರ್ಸಿಂಗ್ ಸೂಪರಿಟೆಂಡೆಂಟ್ ಶ್ರೀಮತಿ ವಿಮಲಾ ಗಂ.ತಿಮ್ಮಣ್ಣ ಬಿದರಿ 83 ವರ್ಷದ ವೃದ್ಧೆ ಪರಿಹಾರ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರೆ. ಇಂತಹ ಜನರು ಮುಂದೆ ಬಂದಾಗ ಜನರಲ್ಲಿ ಆಶಾಭಾವನೆ ವ್ಯಕ್ತವಾಗಲಿದ್ದು, ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿದೆ.
ಇಂದು ವಿಜಯಪುರ ಜಿಲ್ಲಾಧಿಕಾರಿಗಳಿಗೆ 1 ಲಕ್ಷ ರೂ. ಚೆಕ್‍ನ್ನು ಶ್ರೀಮತಿ ವಿಮಲಾ ಗಂ.ತಿಮ್ಮಣ್ಣ ಬಿದರಿ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಮಗಳಾದ ಡಾ.ಅಂಜಲಿ ಬಿದರಿ, ಅಳಿಯ ರಾಜು ಬಿರಾದಾರ ಹಾಗೂ ಅರುಣ ಹುಂಡೇಕಾರ ಅವರು ಉಪಸ್ಥಿತರಿದ್ದರು.


 

ambedkar image

LEAVE A REPLY

Please enter your comment!
Please enter your name here