Motivational: ಆತ್ಮೀಯ ಸ್ನೇಹ ಜಿವಿಗಳೇ

ಒಂದು ವೇಳೆ ಈ ಮನುಷ್ಯ ಸಂಬಂಧಗಳನ್ನು ಮಾಡಿಕೊಳ್ಳದಿದ್ದರೆ ಸಮಾಜದ ಗತಿ ಬದಲಾಗುತ್ತಿತ್ತು. ಆದಷ್ಟು ಸ್ವಾರ್ಥ ಮನೋಭಾವ ಬೆಳೆಯುತ್ತಿತ್ತು.

0
454
motivational iamge
ಸಾಂದರ್ಭಿಕ ಚಿತ್ರ

ಜೀವನ ಸುಗಮವಾಗಿ ಸಾಗಬೇಕಾದರೆ, ಒಬ್ಬರಿಗೊಬ್ಬರು ಸಹಕರಿಸಬೇಕು. ಸಹಕಾರ ಮನೋಭಾವನೆಯೊಂದು ಇದ್ದು ಬಿಟ್ಟರೆ, ಮನುಷ್ಯ ಎಲ್ಲಿ ಬೇಕಾದರೂ ಬದುಕುತ್ತಾನೆ. ಮನುಷ್ಯ ಜೀವನವನ್ನು ಒಬ್ಬಂಟಿಗನಾಗಿ ಕಳೆಯುವುದು ಸಾಧ್ಯವಿಲ್ಲವೆಂದು ತನ್ನ ಅನುಕೂಲಕ್ಕಾಗಿ ಏನೆಲ್ಲ ಸಂಬಂಧಗಳನ್ನು ಮಾಡಿಕೊಂಡಿದ್ದಾನೆ. ಪ್ರತಿಯೊಂದು ಸಂಬಂಧಗಳನ್ನು ಕಡೆಗಣಿಸುವಂತಿಲ್ಲ. ಎಲ್ಲಕ್ಕೂ ಅಷ್ಟೇ ಮಹತ್ವ ಕೊಡಲಾಗಿದೆ.motivational

ಒಂದು ವೇಳೆ ಈ ಮನುಷ್ಯ ಸಂಬಂಧಗಳನ್ನು ಮಾಡಿಕೊಳ್ಳದಿದ್ದರೆ ಸಮಾಜದ ಗತಿ ಬದಲಾಗುತ್ತಿತ್ತು. ಆದಷ್ಟು ಸ್ವಾರ್ಥ ಮನೋಭಾವ ಬೆಳೆಯುತ್ತಿತ್ತು. ಅದೇನೆ ಇರಲಿ ಮನುಷ್ಯ ಮಾಡಿಕೊಂಡ ‘ಗಂಡ ಹೆಂಡತಿ’ ಸಂಬಂಧ ಬಹಳ ಮಹತ್ವವಾದದ್ದು. ಮನುಷ್ಯನ್ನೆಲ್ಲ ಸಂಬಂಧಗಳಲ್ಲಿ ಇದು ತೀರ ಭೀನ್ನವಾದ, ವಿಶಿಷ್ಟವಾದ ಹಾಗೂ ಮಹತ್ವವಾದ ಸಂಬಂಧ.

ಇದನ್ನೂ ಓದಿ: ಹೆಣ್ಣು ಮಾಯಾ ಜಿಂಕೆಯಾದರೆ,ಗಂಡೇನು…….?

ಜೀವನದ ಸಂಸಾರ ದೋಣಿ ಸುಗಮವಾಗಿ ಸಾಗಬೇಕಾದರೆ, ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಗಿ ಅರಿತುಕೊಂಡಿರಬೇಕು. ಮದುವೆಯಾಗದೆ ಹಾಗೆ ಇದ್ದರೆ, ಮನುಷ್ಯನ ಜೀವನ ಪೂರ್ಣವಾಗಲಾರದು. ಅದು ಹಸಿ ಬಿಸಿಯಾಗಿ ಸುಟ್ಟಂತ ಆಹಾರದಂತೆ ಇರುವುದು. ಹಾಗೆಂದ ಮಾತ್ರಕ್ಕೆ ಮದುವೆಯಾದ ಮೇಲೆ ಜೀವನ ಪರಿಪೂರ್ಣವೆಂದು ಹೇಳಲಾಗದು. ಮದುವೆಯಾದ ಮೇಲೆ ಏನೋ ಒಂದು ಹೊಸ ಅನುಭವ ಬಂದಂತೆ ಆಗುವುದು. ಗಂಡಿನ ಜೀವನದಲ್ಲಿ ಹೆಣ್ಣು ಮುಖ್ಯ. ಹೆಣ್ಣಿನ ಜೀವನದಲ್ಲಿಯೂ ಗಂಡು ಮುಖ್ಯ. “ಒಬ್ಬರ ಜೀವನದಲ್ಲಿ ಇನ್ನೊಬ್ಬರು ಮುಖ್ಯವಾದಾಗಲೇ ಜೀವನಕ್ಕೆ ಒಂದು ನೆಲೆ ಸಿಕ್ಕಂತೆ”.

motivational image
ಸಾಂದರ್ಭಿಕ ಚಿತ್ರ

ಹೆಂಡತಿ ಎನ್ನುವ ಪದದಲ್ಲಿ, ಹುಡುಕುವವರಿಗೆ ಹಲವಾರು ಅರ್ಥಗಳು. ಹುಡುಕದವರಿಗೆ ಒಂದೇ ಅರ್ಥ. ‘ಹೆಂಡತಿ’ ಪದದಲ್ಲಿ ಸಂಸಾರದ ಅರ್ಥ ಅದರೊಳಗಡೆ ಅಡಗಿದೆ. ಹೆಂಡತಿಯಾದವಳು ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ಅನುಕಂಪ ತುಂಬಿಕೊಂಡವಳಿದ್ದರೆ ಒಂದು ಕುಟುಂಬವನ್ನು ಸುಗಮವಾದ ದಾರಿಗೆ ಒಯ್ಯಬಲ್ಲಳು. ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಬೇಜವಾಬ್ದಾರಿಯವಳಾಗಿದ್ದರೆ, ಒಂದು ಕುಟುಂಬವನ್ನು ನುಂಗಿ ನೀರು ಕುಡಿಯಬಲ್ಲಳು. ಹೆಂಡತಿ ಕುಟುಂಬದ ಸಂತೋಷ, ಹೆಂಡತಿ ಕುಟುಂಬದ ನೋವಿನಲ್ಲೇ ಎರಡು ಆಗ ಬಲ್ಲಳು.

ಇದನ್ನೂ ಓದಿ: ನಿನ್ನೊಳಗೊಂದು ಎನೋ ಕದನವಿದೆಯಲ್ಲ.

ಮದುವೆಯಾದ ಮೇಲೆ ನಾನೆಂದೂ ದುಃಖವನ್ನೆ ಕಂಡಿಲ್ಲವೆಂದು ಯಾವುದೇ ಒಬ್ಬ ಪುರುಷ ಹೇಳಿದರೆ, ಅವನ ಹೆಂಡತಿಯು ಅವನನ್ನು ಹಾಗೂ ಅವನ ಕುಟುಂಬವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆಂದೇ ಅದರ ಅರ್ಥ. “ಗಂಡನ ಶ್ರೀಮಂತಿಕೆಯ ಬದುಕೆಲ್ಲ ಹೆಂಡತಿಯೊಳಗೆ ಅಡಗಿದೆ”. ಹೆಂಡತಿ ಗಂಡನ ಚೇತನ, ಅಧ್ಯಾತ್ಮಿಕ ಶಕ್ತಿಯ ಕೇಂದ್ರ ಬಿಂದು. ಗಂಡನಾದವನಿಗೆ ಎಂಥ ಕಷ್ಟಕರ ಸನ್ನಿವೇಷಗಳಿಗೆ ಎದುರಾಗಲಿ, ಅವುಗಳನ್ನು ಮೆಟ್ಟಿ ನಿಲ್ಲುವ ಹಾಗೂ ಜೀವನವನ್ನು ನಗುವಿನಿಂದ ಗೆಲ್ಲುವ ಚೇತನ., ಸಾಧನ ಹೆಂಡತಿಯಾಗಬಲ್ಲಳು. ಅಲ್ಲದೇ ಅದೇ ಹೆಂಡತಿ ಗಂಡನಿಗೆ ಸವಾಲಾಗಿ ನಿಲ್ಲಬಲ್ಲಳು. ಹೇಣ್ಣನ್ನು ಪ್ರೇಯಸಿಯನ್ನಾಗಿ ಮತ್ತು ಹೆಂಡತಿಯನ್ನಾಗಿ ಸ್ವೀಕರಿಸುವಲ್ಲಿ ಬಹಳ ವ್ಯತ್ಯಾಸವಿದೆ. ಪ್ರೇಯಸಿ ನೀಡಿದ ಅನುಭವ ಹೆಂಡತಿ ನೀಡಲಾರಳು. ಹೆಂಡತಿ ನೀಡಿದ ಅನುಭವ ಪ್ರೇಯಸಿ ನೀಡಲಾರಳು.

motivational image
ಸಾಂದರ್ಭಿಕ ಚಿತ್ರ

ಯಾಕೆಂದರೆ ಹೆಣ್ಣನ್ನು ಅನುಭವಿಸುವ ವಿಧಾನಗಳು ಬೇರೆ ಬೇರೆಯಾಗಿ ಬಿಡುತ್ತವೆ. ಹೆಂಡತಿ ಸ್ವಲ್ಪ ಜಗಳಗಂಟಿಯಾಗಿದ್ದರೆ, ಜೀವನ ಹೆಚ್ಚು ಸ್ವಾರಸ್ಯದಿಂದ ಕೂಡಿರುತ್ತದೆ. ಅತೀ ಹೆಚ್ಚು ಜಗಳಗಂಟಿಯಾಗಿದ್ದರೆ, ಜೀವನ ಬರುಡಾದ ಭೂಮಿಯಾಗಬಲ್ಲುದು. ಇಲ್ಲವೇ ಅನಂತವಾದ ಆನಂದ ಪಡೆಯಲು ತ್ಯಾಗ ಮನೋಭಾವ ಬರಬಹುದು. ಕೆಲವರಿಗೆ ಹೆಂಡತಿ ಎನ್ನುವ ಪದ ಕಿವಿಗೆ ಬಿದ್ದರೆ ಪ್ರಪಂಚವೇ ಮೈಮೇಲೆ ಬಿದ್ದಂತೆ ಮಾಡುತ್ತಾರೆ. ಇನ್ನು ಕೆಲವರು ಪ್ರಪಂಚವೇ ತಮ್ಮ ಅಂಗೈಯೊಳಗೆ ಕುಣಿಯುತ್ತದೆ ಎನ್ನುವಂತೆ ಮಾಡುತ್ತಾರೆ. motivational

ಒಟ್ಟಿನಲ್ಲಿ ಹೆಂಡತಿ ನೊಂದ ಗಂಡನ ಚೇತನವಾಗಬಲ್ಲಳು. ಚೇತನ ತುಂಬಿ ತುಳುಕುವ ಗಂಡನಿಗೆ ಹಗ್ಗವಾಗಿ ಕಟ್ಟಿಹಾಕಬಲ್ಲಳು. ತನ್ನ ಜೀವನವೆಂದರೆ ಹೆಂಡತಿ ಎಂದು ತಿಳಿದವನಿಗೆ ಅಲೆಮಾರಿಯಾಗಿ, ಸೋಮಾರಿಯಾಗಿ ತಿರುಗುವಂತೆ ಮಾಡಬಲ್ಲಳು. ಆದರೂ ಹೆಂಡತಿ ಗಂಡನ ಅಸ್ತಿತ್ವ ಉಳಿಸುವಳು. ಹೆಂಡತಿಯನ್ನು ಎಷ್ಟೆ ಕೆಟ್ಟವಳೆಂದು ಕರೆದರೂ, ಅವಳ ಗಂಡನ ಮೇಲೆ ಪ್ರೀತಿ, ಮಮತೆ ಇದ್ದೇ ಇರುತ್ತದೆ. ಹೆಂಡತಿ ಇಲ್ಲದ ಜೀವನ ಕಾಡಿನಲ್ಲಿ ಸುತ್ತಿದಂತೆ. ಹೆಂಡತಿ ಇದ್ದ ಜೀವನ ಘೋರವಾದ ಕಾಡಿನಲ್ಲಿ, ನಿಟ್ಟಿರುಳಿನಲ್ಲಿ ಸುತ್ತಿದಂತೆ. ಹೆಂಡತಿ ಗಂಡನನ್ನು ಎಷ್ಟೆ ದ್ವೇಷಿಸಿದರೂ, ನಿರಾಕರಿಸಿದರೂ, ಸಾಯಿಸಿದರೂ, ಅದೆಲ್ಲವೂ ಪ್ರೀತಿಯಿಂದಲೇ ಕೂಡಿರುತ್ತದೆ. ಹೆಂಡತಿಯ ಪ್ರೀತಿಯನ್ನರಿತವ ಹೆಂಡತಿಯ ಸುತ್ತ ಸುತ್ತುತ್ತಾನೆ. ಹೆಂಡತಿಯ ಪ್ರೀತಿಯನ್ನರಿಯದವ ಪ್ರಪಂಚವನ್ನು ಸುತ್ತುತ್ತಾನೆ. ಏನಾದರಾಗಲಿ ಒಟ್ಟಿನಲ್ಲಿ ಅರಿತು ನಡೆಯುವ ಹೆಂಡತಿ ಇದ್ದರೆ, ಮೂರ್ಖನ ಬಾಳು ಸಹ ಹಸಿಕಾಬಲ್ಲದು.
ಎಸ್.ಪಿ.ಯಂಭತ್ನಾಳ, ಸಾಹಿತಿ

LEAVE A REPLY

Please enter your comment!
Please enter your name here