ವಿದ್ಯುತ್ ವ್ಯತ್ಯಯ: ತುರ್ತು ಸೇವಾ ಕೇಂದ್ರ ಸಂಪರ್ಕಕ್ಕೆ ಕಾರ್ಯ ನಿರ್ವಾಹಕ ಅಭಿಯಂತರರ ಮನವಿ

ಮಾ.22ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿಜಯಪುರ: ಮಳೆ ಗಾಳಿಯಿಂದಾಗಿ ತಕ್ಷಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ತುರ್ತು ಸೇವಾ ಕೇಂದ್ರ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-1ಕ್ಕೆ ಸಂಬಂಧಿಸಿದಂತೆ,ನಗರದ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನ ಪ್ರದೇಶಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಂ. ಮೂಲಿಮನಿ ಮೊಬೈಲ್ ಸಂಖ್ಯೆ: 9448370250 ಹಾಗೂ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ:08352-250036, ಮತ್ತು ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-2ಕ್ಕೆ ಸಂಬಂಧಿದಂತೆ ನಗರದ ಗಾಂಧಿ ವೃತ್ತದಿಂದ ದಕ್ಷಿಣ, ನೈಋತ್ಯ ಮತ್ತು ಅಗ್ನಿಯ ದಿಕ್ಕಿನ ಪ್ರದೇಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಕ್ಷರಬಾಶಾ ಕುರಿ ಮೊ. ಸಂಖ್ಯೆ:94483275711, ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 9480882690 ಹಾಗೂ 08352-276940 ಸಂಪರ್ಕಿಸಬಹುದಾಗಿದೆ.
ಜೊತೆಗೆ ಟೊಲ್ ಫ್ರೀ ಅಥವಾ ಹೆಸ್ಕಾಂ, ಸಹಾಯವಾಣಿ 1912 ಸಂಪರ್ಕಿಸಬಹುದು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ತುರ್ತು ಸಂದರ್ಭಕ್ಕೆ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share the Post:

ಇತ್ತೀಚಿನ ಸುದ್ದಿಗಳು