ವಿಜಯಪುರ: ಕೆಪಿಟಿಸಿಎಲ್ ವಿಜಯಪುರ ಇವರ ಮೂಲಕ 220/110/11 ಕೆ.ವ್ಹಿ ಬೇ ಗಳ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, 220/110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಜುಮನಾಳ, ವಿಜಯಪುರ ನಗರ(ಸಿಟಿ), ಕೆಐಎಡಿಬಿ, ಹಾಗೂ ಭೂತನಾಳ ಉಪ ಕೇಂದ್ರದಲ್ಲಿಯೂ ಮತ್ತು 110/11 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರ ಮಮದಾಪುರ, ಬೆಳ್ಳುಬ್ಬಿ, ದೇವರಗೆಣ್ಣೂರ, ಶಿರಬೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ, ಹಾಗೂ ನಿಡೋಣಿ ಮತ್ತು 110/33/11 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರ ತಿಕೋಟ, ತೊರವಿ, ಟಕ್ಕಳಕಿ, ಕನಮಡಿ ಹಾಗೂ ಹೊನವಾಡ ವಿದ್ಯುತ್ ಕೇಂದ್ರಗಳಿಂದ ಹೊರಹೋಗುವ ಎಲ್ಲಾ 11 ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಮಾರ್ಚ್ 22ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಕಾರಣ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





