ವಿಜಯಪುರ: ಹನ್ನೆರಡನೆಯ ಶತಮಾನದಲ್ಲಿ ಶರಣರು ತಮ್ಮ ವಚನಗಳ (sharanar Vachangalu) ಮೂಲಕ ಸನ್ನಡತೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಅದರಲ್ಲಿ ಕಾಯಕ, ದಾಸೋಹ, ಮಾಧರಿಯಾಗಬೇಕು. ಬಸವಾದಿ ಶರಣರ ಚಿಂತನೆಯಿಂದ ಅವರ ಅನುಭವದ ನುಡಿಗಳೇ ಬದುಕು ಸಮೃದ್ದಿ ಎಂದು ಸಹಾಯಕ ಪ್ರಾಧ್ಯಾಪಕ ಡಾ. ಎಮ.ಎಸ್. ಮಾಗಣಗೇರಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಅಂಗವಾಗಿ ಚನ್ನಬಸವಣ್ಣನವರ ಅನುಭಾವ ಕುರಿತು ಉಪನ್ಯಾಸ ನೀಡಿದ ಅವರು ಅಜಾತ ವಿಚಾರ ಜ್ಞಾನದ ಅರಿವು ನಿಸ್ವಾರ್ಥ ಬದುಕನ್ನು ಬಾಳಿ ತತ್ವ ಆದರ್ಶಗಳಿಂದ ಸತ್ಯ, ನಿಷ್ಠೆ, ಕಾಯಕದಿಂದ ಸಾಕ್ಷಾತ್ಕಾರ ಪಡೆದವರು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ಬಸವಣ್ಣನವರ ವಚನದಿಂದ ಪ್ರಭಾವಿತರಾಗಿ ಅರಿವೇ ಗುರು ಎಂಬುದನ್ನು ತನ್ನಲ್ಲಿ ಅಳವಡಿಸಿಕೊಂಡು, ಸ್ವಜ್ಞಾನ, ಷಡಸ್ಥಲ ಜ್ಞಾನ ಅಭಿಪ್ರಾಯದಿಂದ ಅನುಭವ ಪಡೆದು ಅರಿವು, ಅಚಾರಗಳಿಂದ ಅರಿತವರು ಅಲ್ಲಮ ಪ್ರಭವಿನ ನಂತರದ ಸ್ಥಾನ ಚನ್ನಬಸವಣ್ಣನವರದು, ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ ಕೆಲಸ ತುಂಬಾ ಅಮೋಘ, ಅವರು ರಚಿಸಿದ 1777 ವಚನಗಳು ಲಭ್ಯವಾಗಿವೆ ಎಂದರು.
ಇದನ್ನೂ ಓದಿ: Vijayapura News | ಜಿಲ್ಲೆಯ ಮಠಾಧೀಶರಿಂದ ರೈತರ ಉಳಿವಿಗಾಗಿ, ವಕ್ಫ್ ಮಂಡಳಿ ರದ್ದಾಗುವಂತೆ ಆಗ್ರಹ | ಪ್ರಭು ಸಾರಂಗ ದೇವರು
(sharanar Vachangalu) ಮುಖ್ಯ ಅತಿಥಿಯಾಗಿ ವಿದ್ಯಾವತಿ ಅಂಕಲಗಿ ಮಾತನಾಡುತ್ತ ನಡೆ, ನುಡಿ ಪರಿಶುದ್ಧವಾಗಿರಬೇಕು. ಮನಸ್ಸು ಶಾಂತವಾಗಿರಬೇಕು, ಶರಣರ ಅನುಭವದ ನುಡಿಗಳು, ಆಳ, ಅಗಲ ನಿಲುಕಲು ಸಾಥ್ಯವಿಲ್ಲ ಚನ್ನಬಸವಣ್ಣನವರ ಅನುಭವದ ಅನುಭಾವದಿಂದ ಕೂಡಿದಂತಹದು ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಅಧ್ಯಕ್ಷತೆವಹಿಸಿ ಚನ್ನಬಸವಣ್ಣನವರು ಕೇವಲ 24 ವರ್ಷ ಮಾತ್ರ ಬದುಕಿನದವರು ಪ್ರಾಯದಲ್ಲಿ ಅವರ ಕೀರ್ತಿ ಜ್ಞಾನ ಅಪಾರವಾದುದು, ಅನುಭವ ಮಂಟಪದ ಪರಿಸರದಲ್ಲಿ ಬೆಳೆದವರು. ವಚನ ಸಾಹಿತ್ಯದ ಮೂಲಕ ಜಲ, ತಪಗಳ ಪೂಜೆ ಬೇಕಾಗಿಲ್ಲ, ಮತ್ತು ಕೃತಿಗೂ ವ್ಯತ್ಯಾಸವಾಗಬಾರದು, ಅವರ ವಚನದ ನುಡಿಗಳು ತುಂಬಾ ಶ್ರೇಷ್ಠ ಎಂದರು.
ಇದನ್ನೂ ಓದಿ: Vijayapura News | ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನ ಪ್ರತಿಕೃತಿ ಅನಾವರಣ
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀಮತಿ ದ್ರಾಕ್ಷಾಯಣಿ ಬಿರಾದಾರವನ್ನು ಜಿಲ್ಲಾಧ್ಯಕ್ಷರು ಸನ್ಮಾನಿಸಿ ಗೌರವಿಸಲಾಯಿತು. ಶರಣೆ ಅಕ್ಕಮಹಾದೇವಿ ಬುರ್ಲಿ, ವಿಠ್ಠಲ ತೇಲಿ, ಸಹದೇವ ನಾಡಗೌಡರ, ಅಮರಣ್ಣವರ, ಎಸ್.ಎನ್. ಶಿವಣಗಿ,ಮಹಾದೇವ ಹಾಲಳ್ಳಿ, ಶಿವಪುತ್ರ ಪೋಳ, ಈಶ್ವರಗೊಂಡ ಬಸವರಾಜ ಒಂಟಗೂಡಿ, ತಾಲೂಕಾ ಅಧ್ಯಕ್ಷ ಬಸವರಾಜ ಇಟ್ಟಂಗಿ ಮ.ನು. ಪತ್ತಾರ, ಕಾಶಿನಾಥ ಅಣೆಪ್ಪನವರ, ಉಪಸ್ಥಿತರಿದ್ದರು. ವಿಠ್ಠಲ ತೇಲಿ ಸ್ವಾಗತಿಸಿದರು. ಎಂ.ಜಿ. ಯಾದವಾಡ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರ್ವಹಿಸಿದರು.






