ವಿಜಯಪುರ: ವಿಶ್ವದ ಕಾರ್ಮಿಕರು ಮಳೆ ಬಿಸಿಲು ಚಳಿಯನ್ನದೆ ಹಗಲಿರಳು ದುಡಿಯುತ್ತಿರುವದರಿಂದ ವಿಶ್ವದ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದ್ದಾರೆ. ವಿಶ್ವದ ಜನಸಂಖ್ಯೆ ಅಪಾರವಾಗಿ ಬೆಳೆಯುತ್ತಿದ್ದರು ಕೌಶಲ್ಯಯುತ ಕಾರ್ಮಿಕರ ಕೊರತೆ ವಿಶ್ವಕ್ಕೆ ಕಾಡುತ್ತಿದೆ. ಎಂದು ವಿಶ್ರಾಂತ ಪ್ರಾಚಾರ್ಯ ಬಿ ಎಮ್ ಆಜೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕುರಿತು ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರ ಹಕ್ಕು ಮತ್ತು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕಾರ್ಮಿಕರ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಿದೆ. ಕಾರ್ಮಿಕರಿಗೆ ಅನ್ಯಾಯವಾದರೆ ಕಾನೂನು ಹಾಗೂ ನ್ಯಾಯಾಲಯ ಸ್ಥಾಪನೆ ಮಾಡಿದೆ. ಹನ್ನೇರಡನೆಯ ಶತಮಾನದ ಶರಣರು ಕಾಯಕ ಸಿದ್ಧಾಂತ ಪ್ರತಿಪಾದಿಸಿದ್ದಾರೆ ಎಂದರು.
ಇದನ್ನೂ ಓದಿ: Vijayapura News : ಮೇ.09ಕ್ಕೆ ಜಿಲ್ಲೆಯಲ್ಲಿ ಉದ್ಯೋಗ ಮೇಳ
ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣ ಚಿಂತಕ ಎಂ ಬಿ ಕಟ್ಟಿಮನಿ ಮಾತನಾಡಿ ಶ್ರಮ ವಹಿಸಿ ದುಡಿಯುವವರೆ ಕಾರ್ಮಿಕರು. ಕಾರ್ಮಿಕರ ಕೊಡುಗೆ ಅಪಾರ. ಶರಣರು ಬೇದವಿಲ್ಲದ ಕಾರ್ಮಿಕರ ಶ್ರೇಷ್ಠತೆ ಕುರಿತು ಅನೇಕ ವಚನಗಳನ್ನು ಬರೆದು ಕಾಯಕ ಮಾಡುವ ಕಾರ್ಮಿಕರಿಗೆ ಅತ್ಯಂತ ಗೌರವ ನೀಡಿದವರು ಬಸವಾದಿ ಶರಣರು ಎಂದರು.
ಕಾಯಕ ತತ್ವ ಪರಿಪಾಲಿಸಲು ಶರಣೆಯರ ಸಂದೇಶ ಕುರಿತು ಪ್ರವಚನಗಾರ್ತಿ ಸುಖದೇವಿ ಅಲಬಾಳಮಠ ಉಪನ್ಯಾಸ ನೀಡಿ ಅಕ್ಕಮಹಾದೇವಿ, ಸತ್ಯಕ್ಕಾ, ನಿಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಕಲ್ಯಾಣಮ್ಮ ಮುಂತಾದ ಶರಣೆಯರು ದುಡಿದು ತಿನ್ನುವ ವರ್ಗವನ್ನು ಕೊಂಡಾಡಿದ್ದಾರೆ ಎಂದರು.
ಬಸವಾದಿ ಶರಣರ ಕಾಯಕ ಸಿದ್ಧಾಂತ ಕುರಿತು ಉಪನ್ಯಾಸ ನೀಡಿದ ಡಾ ಶೈಲಾ ಬಳಗಾನೂರ ಬಸವಣ್ಣ, ಅಂಬಿಗೇರ ಚೌಡಯ್ಯ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವರು, ನೂಲಿ ಚಂದಯ್ಯ, ಮಾದಾರ ಚನ್ನಯ್ಯ ಮುಂತಾದ ಶರಣರು ಬೇದವಿಲ್ಲದೆ ಕಾರ್ಮಿಕರ ಕಾಯಕವನ್ನು ಮಾಡಿಯೆ ಪ್ರಸಾದ ಮಾಡಬೇಕು ಗುರುವಾದರು ಕಾಯಕ ಮಾಡಬೇಕು. ಸತ್ಯ ಶುದ್ಧ ಕಾಯಕ ಮಾಡಬೇಕೆಂಬ ಹಂಬಲ ವ್ಯಕ್ತ ಪಡಿಸಿದರು ಎಂದರು.
ಇದನ್ನೂ ಓದಿ: Vijayapura News : ಸಂಯಮ ಕಳೆದುಕೊಂಡ ಮುಖ್ಯಮಂತ್ರಿ ; ಶರಣು ಸಬರದ
ಮಲ್ಲಿಕಾರ್ಜುನ ಎಚ್ ಟಿ, ಗೋಪಾಲ ಬಿರಾದಾರ, ಅಕ್ರಮ ಮಾಶ್ಯಾಳಕರ, ರಶ್ಮಿ ಬದ್ನೂರ, ವಿಠ್ಠಲ ತೇಲಿ ಮಾತನಾಡಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪದಾಧಿಕಾರಿಗಳಾದ ಚಕ್ರವರ್ತಿ, ಅರ್ಜುನ ಶಿರೂರ, ಭಾಗೀರಥಿ ಸಿಂಧೆ, ರಾಜೇಸಾಬ ಶಿವನಗುತ್ತಿ, ಸಿದ್ರಾಮಯ್ಯ ಲಕ್ಕುಂಡಿಮಠ, ಅಶೋಕ ಸಿರಗುಪ್ಪಿ, ಕೆ ಎಸ್ ಹಣಮಾಣಿ, ಶಾಂತಾ ವಿಭೂತಿ, ಜಿ ಎಸ ಬಳ್ಳೂರ, ಅಬ್ದುಲರಜಾಕ ಮುಲ್ಲಾ, ಶೋಭಾ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಸುನಂದಾ ಕೋರಿ ಪ್ರಾರ್ಥಿಸಿದರು. ಪರವೀನ ಶೇಖ ಸ್ವಾಗತಿಸಿದರು. ರೇವತಿ ಬೂದಿಹಾಳ ನಿರೂಪಿಸಿದರು ಡಾ: ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದಗೌಸ ಹವಾಲ್ದಾರ ವಂದಿಸಿದರು.