ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಬೀದರ್ ನಲ್ಲಾದ ATM ದರೋಡೆ, (ATM robbery) ಚಾಮರಾಜಪೇಟೆ; ನಂಜನಗೂಡಿನಲ್ಲಿ ಹಸುವಿನ ಮೇಲೆ ದುಷ್ಕರ್ಮಿಗಳಿಂದ ದಾಳಿ ಸೇರಿದಂತೆ ಸಾಲು, ಸಾಲು ದರೋಡೆ, ಕಳ್ಳತನ ನಡೆಯುತ್ತಿದ್ದರೂ ಸಹ ಗೃಹ ಸಚಿವರು ಅಪರಾಧಿಗಳು ‘ಮಾನಸಿಕ ಅಸ್ವಸ್ಥರು’, ‘ಘಟನೆ ಆಗಬಾರದಿತ್ತು’ ಹೀಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ.
ಇದನ್ನೂ ಓದಿ:Vijayapura News | ಗೃಹ ಸಚಿವ ಅಮಿತ್ ಶಾ ಹೇಳಿಕೆ ಸಮರ್ಥನೆ ಮಾಡಿಕೊಂಡ ಉಮೇಶ ಕಾರಜೋಳ ಕ್ಷಮೆಯಾಚನೆಗೆ ಆಗ್ರಹ
ಮೂಕ ಪ್ರಾಣಿಗಳ ಮೇಲೆ, ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿ, ಸಂಘಟನೆಗಳ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಉಡಾಫೆ ಹೇಳಿಕೆಗಳಿಗೆ ಸೀಮಿತವಾಗಿರುವುದು ಗೃಹ ಇಲಾಖೆಯಲ್ಲಿ ಸಮರ್ಥನೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತದೆ. ಸಂಪುಟದ ಹಿರಿಯ ಸಚಿವರುಗಳು ಸಿ.ಎಂ. ಖುರ್ಚಿಗೆ ಪೈಪೋಟಿ ಮಾಡುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಸರಿ ಪಡಿಸಲಿ. ಪೊಲೀಸರಿಗೆ ಕೊಟ್ಟಿರುವ ಆಯುಧಗಳನ್ನು ಉಪಯೋಗಿಸಿ ದುರುಳರನ್ನು ಹೆಡೆಮುರಿಕಟ್ಟಲಿ ಎಂದು ಟ್ವಿಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.