ವಿಜಯಪುರ: Kittoor Rani Channama ಬುಧವಾರ 23-10-2024 ರಂದು ವಿಜಯಪುರ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಜಾನೆ 9-00ಕ್ಕೆ ಚನ್ನಮ್ಮನವರ ಮೂರ್ತಿಗೆ ಪೂಜೆ ನೆರವೇರಿಸುವದು ನಂತರ 9-30 ಘಂಟೆಯಿಂದ 10-30 ರತನಕ ಶ್ರೀ ಸಿದ್ದೇಶ್ವರ ದೇವಾಲಯದಿಂದ ಕಂದಗಲ ಹಣಮಂತರಾಯ ರಂಗಮಂದಿರವರೆಗೆ ಭಾವಚಿತ್ರ ಮೆರವಣಿಗೆ ನಡೆಯುವುದು.
11-00 ಘಂಟೆಗೆ ರಂಗಮಂದಿರದಲ್ಲಿ ವಿಜಯೋತ್ಸವ ಕಾರ್ಯಕ್ರಮ ಜರುಗುವುದು ಕಾರಣ ಜಿಲ್ಲೆಯ ಸಚಿವರು ಶಾಸಕರು ಹಾಗೂ ರಾಜಕೀಯ ಧುರೀಣರು ಜಿಲ್ಲಾ ಘಟಕದ ಎಲ್ಲ ಪದಾಧಿಕಾರಿಗಳು ಎಲ್ಲ ತಾಲೂಕಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಜಿಲ್ಲಾ ನೌಕರರ ಘಟಕ, ಮಹಿಳಾ ಘಟಕ, ಯುವ ಘಟಕ, ಸಮಾಜದ ಹಿರಿಯರು, ಮುಖಂಡರು ಮತ್ತು ಬೇರೆ ಬೇರೆ ಸಮಾಜದ ಎಲ್ಲ ಗುರುಹಿರಿಯರು ಮತ್ತು ಸರ್ವಧರ್ಮದ ಸಮಾಜ ಬಾಂಧವರು ವಿಜಯೋತ್ಸವದ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮತ್ತು ಜಿಲ್ಲೆಯಲ್ಲಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಹಾಗೂ ಮಣೆಗಳಲ್ಲಿ ಚನ್ನಮ್ಮನವರ ಮೂರ್ತಿಗೆ ಪೂಜೆ ನೆರವೇರಿಸಬೇಕೆಂದು ಜಿಲ್ಲಾ ಅಧ್ಯಕ್ಷರಾದ ಗುರುಶಾಂತ ಬಿ. ನಿಡೋಣಿಯವರು ಪತ್ರಿಕಾ ಪತ್ರಣೆಯಲ್ಲಿ ತಿಳಿಸಿದ್ದಾರೆ. Kittoor Rani Channama