ವಿಜಯಪುರ : ಮೈಸೂರು ಜಿಲ್ಲಾ ಅಥ್ಲೇಟಿಕ್ ಅಸೋಸಿಯೇಷನ್ ಮೈಸೂರು ಸಂಘಟಿಸಲಿರುವ, ಕರ್ನಾಟಕ ರಾಜ್ಯ ಕಿರಿಯರ ಅಥ್ಲೇಟಿಕ್ ಕ್ರೀಡಾಕೂಟವು, ಕನಾಟಕ ಅಥ್ಲೇಟಿಕ್ ಅಸೋಸಿಯೇಷನ್ ಬೆಂಗಳುರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : 14ರಿಂದ 17 ಸೆಪ್ಟೆಂಬರ್ 2024 ರಂದು ಜಿಲಾ ಕ್ರೀಡಾಂಗಣ ಮೈಸೂರಲ್ಲಿ ನಡೆಯಲಿದ್ದು, (Inter-District State-Level Junior Sports Meet)ಈ ಕ್ರೀಡಾಕೂಟಲದಲ್ಲಿ 14,16,18,20 ಮತ್ತು 23 ವರ್ಷದ ವಯೋ ಮಿತಿಯ ಬಾಲಕ – ಬಾಲಕೀಯರು ಭಾಗವಹಿಸಲು ಅವಕಾಶ ಇರುತ್ತದೆ ಎಎಫ್‍ಐಯುಐಡಿ ನಂಬರ್ ಮತ್ತು ಜನ್ಮ ದಾಖಲೆಯ ಮೂಲ ಪ್ರತಿ ಕಡ್ಡಾಯವಾಗಿರುತ್ತದೆ. ಜಿಲ್ಲೆಯ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿಗೆ ಭಾಜನರಾಗವೇಕು, ಇಂದಿನ ಯುವಕ ಯುವತಿಯರು ಕ್ರೀಡೆಯಲ್ಲಿ ಆಸಕ್ತಿ ತೋರಿಸಬೇಕು. ಆರೋಗ್ಯದ ದೃಷ್ಠಿಯಿಂದಲೂ ಕ್ರೀಡೆ ಉತ್ತಮ. ದಿನಾಲೂ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯದ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಇಂದಿನ ಯುವಕರ ಪಾತ್ರ ತುಂಬಾ ಇದೆ ಎಂದು ಜಿಲ್ಲೆಯ ಅಥ್ಲೇಟಿಕ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಸ್.ಎಸ್. ಹಿರೇಮಠ ಕೋರಿದ್ದಾರೆ.
(Inter-District State-Level Junior Sports Meet) ಈ ರಾಜ್ಯ ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟಟದಲ್ಲಿ ಭಾಗವಹಿಸಲು, ಆಸಕ್ತಿಯುಳ್ಳ ವಿಜಯಪುರ ಜಿಲ್ಲೆಯ ಅಥ್ಲೇಟಿಕ್ಸ್ ಕ್ರೀಡಾಪಟುಗಳು ಬರುವ ರವಿವಾರ ದಿನಾಂಕ : 01-09-2024 ರಂದು ಬೆಳಿಗ್ಗೆ 8.30 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಜಿಲಾ ಕ್ರೀಡಾಂಗಣ ವಿಜಯಪುರದಲ್ಲಿ ಜನನ ಪ್ರಮಾಣ ಪತ್ರ, ಆಧಾರ ಕಾರ್ಡ್, ಮೂರು ಪಾಸಪೋರ್ಟ್ ಸೈಜ್ ಫೋಟೋ ತರಬೇಕು. ಆಯ್ಕೆಯ ಸಂದರ್ಭದಲ್ಲಿ ಪತ್ರದಲ್ಲಿ ತಿಳಿಸಿದ ದಾಖಲೆಯೊಂದಿಗೆ ಭಾಗವಹಿಸಬೇಕು. ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಅಥ್ಲೇಟಿಕ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಸ್.ಎಸ್. ಹಿರೇಮಠ ಮೊಬೈಲ್ ನಂ. 9448110833, ತರಬೇತಿದಾರರಾದ ಗೋಪಾಲ ರಾಠೋಡ ಮೊ : 8904633536, ಅಥವಾ ಬಸು ನಾಗೋಡ, ಮೊ : 8073660074, 7337655935, ರವರನ್ನು ಸಂಪರ್ಕಿಸಲು ಕೋರಿದೆ.
ಇದನ್ನೂ ಓದಿ: ಬಸವಜಯಮೃತ್ಯುಂಜಯ ಸ್ವಾಮೀಜಿ ಪ್ರತಿಜ್ಞೆ : 2ಎ ಮೀಸಲಾತಿ ಹೋರಾಟ ಕೈ ಬಿಡುವುದಿಲ್ಲ