10 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಮೌಖಿಕ ಲೈಂಗಿಕತೆ ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ; ಅಲಹಾಬಾದ್ ಹೈಕೋರ್ಟ್

ಮೌಖಿಕ ಲೈಂಗಿಕತೆ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೊ ಕಾಯ್ದೆ) ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾಗಿದ್ದರೂ ಇದು ಪೊಕ್ಸೋ ಕಾಯ್ದೆಯ ಸೆಕ್ಷನ್ 6 ಮತ್ತು 10ರ ಅಡಿಯಲ್ಲಿ ಬರುವ ಉದ್ರಿಕ್ತ ಲೈಂಗಿಕ ದೌರ್ಜನ್ಯ ಎಂದು ಅಲಹಾಬಾದ್ ಹೈಕೋರ್ಟ್ ಶನಿವಾರ ಹೇಳಿತು.

0
211

ಅಲಹಾಬಾದ್: 10 ವರ್ಷದ ಅಪ್ರಾಪ್ತ ಮಗುವಿನೊಂದಿಗೆ ಮೌಖಿಕ ಲೈಂಗಿಕತೆ ನಡೆಸಿದ ಸೋನು ಕುಶ್ವಾಹಾ ಎಂಬ ಅಪರಾಧಿ ವಿಶೇಷ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ದಂಡವನ್ನು ಅಲಹಾಬಾದ್ ಹೈಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದೆ. ಸೋನು ಕುಶ್ವಾಹ ಮಾಡಿದ ಅಪರಾಧ ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅನಿಲ್ ಕುಮಾರ್ ಓಜಾ ನೇತೃತ್ವದ ನ್ಯಾಯಪೀಠ, ಆರೋಪಿಗೆ ನೀಡಿದ್ದ ಶಿಕ್ಷೆಯನ್ನು 10 ವರ್ಷದಿಂದ 7 ವರ್ಷಗಳಿಗೆ ಇಳಿಸಿದರು.

ಮೌಖಿಕ ಲೈಂಗಿಕತೆ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೊ ಕಾಯ್ದೆ) ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾಗಿದ್ದರೂ ಇದು ಪೊಕ್ಸೋ ಕಾಯ್ದೆಯ ಸೆಕ್ಷನ್ 6 ಮತ್ತು 10ರ ಅಡಿಯಲ್ಲಿ ಬರುವ ಉದ್ರಿಕ್ತ ಲೈಂಗಿಕ ದೌರ್ಜನ್ಯ ಎಂದು ಅಲಹಾಬಾದ್ ಹೈಕೋರ್ಟ್ ಶನಿವಾರ ಹೇಳಿತು.

ಆರೋಪಿ ಸಂತ್ರಸ್ತೆಯ ಬಾಯಿಯೊಳಗೆ ಶಿಶ್ನ ಹಾಕಿ, ವೀರ್ಯವನ್ನು ಹೊರಹಾಕುವುದು ಪೋಕ್ಸೋ ಕಾಯ್ದೆಯ ಸೆಕ್ಷನ್ 5/6 ಅಥವಾ ಸೆಕ್ಷನ್ 9/10 ವ್ಯಾಪ್ತಿಗೆ ಬರುತ್ತದೆಯೇ ಎಂದು ನ್ಯಾಯಾಲಯ ಪರಿಶೀಲಿಸಿದ್ದು, ಇದು ಎರಡು ಸೆಕ್ಷನ್‌ಗಳ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಇದು ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಹೇಳಿದೆ.‌

LEAVE A REPLY

Please enter your comment!
Please enter your name here