ಕೊವೀಡ್‌ ಲಸಿಕೆ ತಯಾರಿಕಾ ಸೂತ್ರ ಇತರ ಕಂಪನಿಗಳ ಜೊತೆ ಹಂಚಿಕೊಳ್ಳಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ

0
219
ಅರವಿಂದ ಕೆಜ್ರೀವಾಲ್‌, ದೆಹಲಿ ಸಿಎಂ

ನವದೆಹಲಿ ಮೇ 11: ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲು ದೇಶದ ಇತರ ಕಂಪನಿಗಳೊಂದಿಗೆ ತಯಾರಿಕಾ ಲಸಿಕೆ ಸೂತ್ರವನ್ನು ಕೇಂದ್ರ ಸರ್ಕಾರ ಹಂಚಿಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

ದೇಶದಲ್ಲಿ ಲಸಿಕೆ ಕೊರತೆ ಇದ್ದು, ಕೆಲವು ತಿಂಗಳುಗಳಲ್ಲಿ ಎಲ್ಲರಿಗೂ ಲಸಿಕೆ ನೀಡುವ ರಾಷ್ಟ್ರೀಯ ನೀತಿಯನ್ನು ಅಭಿವೃದ್ಧಿಪಡಿಸಲು ಸಮರೋಪಾದಿಯಲ್ಲಿ ಲಸಿಕೆಯ ಉತ್ಪಾದನೆ ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೇಶದ ಎಲ್ಲಾ ಲಸಿಕೆ ಉತ್ಪಾದನಾ ಘಟಕಗಳು ಕೋವಿಡ್ ಲಸಿಕೆ ಉತ್ಪಾದಿಸಲು ಪ್ರಾರಂಭಿಸುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು.

ಕೊರೋನಾ ವೈರಸ್ ಮೂರನೇ ಅಲೆ ಪ್ರಾರಂಭವಾಗುವ ಮುನ್ನವೇ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.


LEAVE A REPLY

Please enter your comment!
Please enter your name here