ನೈಟ್‌ ಕರ್ಫ್ಯೂ ಹಾಸ್ಯಾಸ್ಪದ ಎಂದ ಕಾಂಗ್ರೇಸ್‌ ಶಾಸಕ ದಿನೇಶ್‌ ಗುಂಡುರಾವ್

0
253

ಬೆಂಗಳೂರು ಡಿ.24: ರಾಜ್ಯ ಸರ್ಕಾರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ವಿಚಾರ ತೀವ್ರ ಟೀಕೆಗೆ ಗುರಿಯಾಗಿದೆ.

ಸರ್ಕಾರದ ನಡೆ ಹಾಸ್ಯಾಸ್ಪದ ಎಂದು ಸಾರ್ವಜನಿಕರು ಹಾಗೂ ವಿಪಕ್ಷ ನಾಯಕರು ಟೀಕಿಸಿದ್ದಾರೆ. ಕಾಂಗ್ರೆಸ್ ಶಾಸಕ ದಿನೇಶ್ ಗುಂಡುರಾವ್, ರೂಪಾಂತರಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರದ ಕ್ರಮಗಳು ಹುಚ್ಚರ ಸಂತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಟಾಚಾರದ ರಾತ್ರಿ ಕರ್ಫ್ಯೂ ಹೇರಿ ಸರ್ಕಾರ ಏನನ್ನು ಸಾಧಿಸಲು ಹೊರಟಿದೆ? ವಿವೇಕಯುತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಇದು? ಈ ಸರ್ಕಾರಕ್ಕೆ ಅರಳು ಮರಳೋ? ಅಥವಾ ಸರ್ಕಾರ ನಡೆಸುವವರಿಗೆ ಅರಳು ಮರಳೋ? ಅರ್ಥವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.


LEAVE A REPLY

Please enter your comment!
Please enter your name here