ಎರಡನೆ ಹಂತದ ಚುನಾವಣೆಗೆ ಸಕಲ ಸಿದ್ದತೆ

0
245

ವಿಜಯಪುರ ಡಿ.23: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆ -2020 ರ ಎರಡನೆ ಹಂತದ ಚುನಾವಣೆ ನಡೆಯುವ ಸ್ಥಳಗಳಿಗೆ ಸಿಬ್ಬಂದಿಗಳು ದಿನಾಂಕ 26-12-2020 ರಂದು ಬೆಳಿಗ್ಗೆ 6-00 ರಿಂದ 7-00 ಗಂಟೆಯೊಳಗೆ ನಗರದ ದರಬಾರ ಪ್ರೌಢಶಾಲೆಯಿಂದ ಆಯಾ ತಾಲೂಕುಗಳಿಗೆ ತೆರಳಲು ಕೆ.ಎಸ್.ಆರ್.ಟಿ.ಸಿ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಈ ಮತಗಟ್ಟೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ವಿಜಯಪುರ ನಗರದ ದರಬಾರ ಪ್ರೌಢಶಾಲೆಗೆ ಬಂದು ಬಸ್‍ಗಳ ಮೂಲಕ ತಮಗೆ ಹಂಚಿಕೆ ಮಾಡಲಾದ ತಾಲೂಕುಗಳಿಗೆ ತೆರಳಬೇಕು.

ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಎರಡನೇ ಹಂತದಲ್ಲಿ ಇಂಡಿ ಉಪವಿಭಾಗದ ತಾಲ್ಲೂಕುಗಳಾದ ಇಂಡಿ, ಚಡಚಣ, ಸಿಂದಗಿ ಹಾಗೂ ದೇವರ ಹಿಪ್ಪರಗಿ ಗ್ರಾಮ ಪಂಚಾಯತಿಗಳಿಗೆ ದಿನಾಂಕ : 27-12-2020 ರಂದು ಮತದಾನ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here