ವಿಜಯಪುರ: ಲಘು ಭೂಕಂಪನ ಬೆಚ್ಚಿಬಿದ್ದ ಜನ

0
274

ವಿಜಯಪುರ ಸೆ.17: ಬಸವನಬಾಗೇವಾಡಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ.

ಮನಗೂಳಿ ಮತ್ತು ಇತರ ಹತ್ತಿರದ ಹಳ್ಳಿಗಳಲ್ಲಿ ವಾಸಿಸುವ ಜನರು ಬುಧವಾರ ರಾತ್ರಿಯ ಭೂಮಿ ಕಂಪಿಸಿದ ಅನುಭವಕ್ಕೆ ಬಂದಿದ್ದು, ಭೂಮಿ ಕಂಪಿಸುತ್ತಿದ್ದಂತೆ ನಿವಾಸಿಗಳು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಮನೆಯಲ್ಲಿದ್ದ ವಸ್ತುಗಳು ಕೆಳಕ್ಕೆ ಬಿದ್ದಿದ್ದವೆಂದು ಹೇಳಿರುವ ಗ್ರಾಮಸ್ಥರು ಕೆಲ ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ್ದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಮನೆಗಳಿಗೆ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here