ವಿಜಯಪುರ: ಆರ್ಕೇಸ್ಟ್ರಾ ಕಲಾವಿದರಿಗೂ ಆಹಾರ ಕೀಟ್ ನೀಡಿ; ಜಿಲ್ಲಾಧಿಕಾರಿಗಳಿಗೆ ಮನವಿ

0
295

ವಿಜಯಪುರ ಜೂ.05: ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆರ್ಕೇಸ್ಟ್ರಾ ಕಲಾವಿದರಿಗೆ ಸರ್ಕಾರದಿಂದ ಒಂದು ತಿಂಗಳಿಗಾಗುವಷ್ಟು ಆಹಾರ ಕೀಟ್ ವಿತರಣೆ ಮಾಡಬೇಕೆಂದು ಉತ್ತರ ಕರ್ನಾಟಕ ಕಲಾವಿದರ ಕಲ್ಯಾಣ ವೇದಿಕೆಯಿಂದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಸುಮಾರು 60 ದಿವಸದ ಲಾಕಡೌನ ಆದ ಕಾರಣ ಕಾರ್ಯಕ್ರಮಗಳು ಇಲ್ಲದೆ ಆರ್ಕೆಸ್ಟ್ರಾ ಕಲಾವಿದರು ಯಾವುದೇ ಕಾರ್ಯಕ್ರಮವಿಲ್ಲದೆ ಜಾತ್ರೆ ಕಾರ್ಯಕ್ರಮಗಳು, ಮದುವೆಯ ಕಾರ್ಯಕ್ರಮಗಳು ಯಾವುದು ನಡೆಯುತ್ತಿಲ್ಲ. ಕಲಾವಿದರಿಗೆ ಕಲೆಯನ್ನು ಬಿಟ್ಟು ಬೇರೆ ಯಾವುದೇ ಕೆಲಸವು ಬರುವುದಿಲ್ಲ. ಈಗ ಕಲಾವಿದರ ಪರಿಸ್ಥಿತಿ ಬಹಳ ಹದಗೆಟ್ಟು ಹೋಗಿದೆ. ಕಲಾವಿದರಿಗೆ ಈಗ ಒಂದು ಹೊತ್ತಿನ ಊಟಕ್ಕಾಗಿ ಕೂಡಾ ಪರದಾಡುವ ಪರಿಸ್ಥಿತಿ ಬಂದಿದೆ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ವಿಜಯಪುರದಲ್ಲಿ ಸುಮಾರು 300ಕ್ಕೂ ಹೆಚ್ಚು ಕಲಾವಿದರಿದ್ದು ಇವರಿಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಆದಕಾರಣ ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಆರ್ಕೇಸ್ಟ್ರಾ ಕಲಾವಿದರಿಗೆ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಕರವೇ ನಗರ ಅಧ್ಯಕ್ಷ ಫಯಾಜ ಕಲಾದಗಿ ಮಾತನಾಡಿ, ಕಲಾವಿದರ ಜೀವನ ಕೋವಿಡ್ 19ನಿಂದ ಬಹಳ ತೊಂದರೆಗೆ ಒಳಗಾಗಿದ್ದು, ಇವರಿಗೆ ಸರ್ಕಾರದ ವತಿಯಿಂದ ಆಹಾರದ ಕಿಟ್ ವಿತರಣೆ ಮಾಡಬೇಕೆಂದು ಈ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ಒತ್ತಾಯಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರಶಾಂತ ಚೌಧರಿ, ಅನೀಲ ಚವ್ಹಾಣ, ಪ್ರಕಾಶ ಮಹೇಂದ್ರಕರ್, ರಮೇಶ ರತ್ನಾಕರ್, ಯಾಸೀನ ಜಿಗರ, ಆನಂದ ಹೂಗಾರ, ಶ್ರೀನಿವಾಸ ಮಸೂತಿ, ಪರಸುರಾಮ ವಿಜಯಪುರ, ಶಿವಾನಂದ ಕಂಕಣವಾಗಿ, ಲಕ್ಷ್ಮೀ ಕೋರಿ, ರೇಖಾ ಹೂಗಾರ, ಮೈಬೂಬು ಅತ್ತಾರ, ಭಾರತಿ ಕುಂದನಗಾರ, (ಸೋನಾರ) ಸುನೀಲ ಗುಡಗಂಟಿ, ಸಿದ್ದಾರ್ಥ ಬೈಚಬಾಳ, ರಾಜಶ್ರೀ ಮುಂಜಣ್ಣಿ, ಮಹಾಂತೇಶ ರೂಗಿ, ಸಾದಿಕ ಇನಾಮದಾರ, ರಾಜೇಶ್ವರಿ ಶಕ್ತಿಕುಮಾರ, ಅಲ್ಲಾಭಕ್ಷ ದಫೇದಾರ, ಅಮೀನ ಮೋಮಿನ್, ಗಂಗಾ, ಯಾಸೀನ ಚೀರಲ್‍ದಿನ್ನಿ, ಗಫಾರ, ಶಿವಾನಂದ ಭಜಂತ್ರಿ, ಜುಬೇರ ಸುತಾರ ಮುಂತಾದವರು ಇದ್ದರು.


LEAVE A REPLY

Please enter your comment!
Please enter your name here