ಹೆಣ್ಣು: ಹೆಣೆಯಲೇಬೇಕು ನೂರಾರು ಕಾಲಿನ ಜಡೆ..

500 ಪದದ ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಾಳೆ. ನನ್ನೆದುರಿನ ವೃತ್ತಪತ್ರಿಕೆ ರಾಯಬಾಗದ 17 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಗಿ ಅವಳನ್ನು ಬಾವಿಯಲ್ಲಿ ದೂಡಿ ಹೋದ ಸುದ್ದಿಯನ್ನು ರಾಚುತ್ತಿದೆ. ಅತ್ಯಾಚಾರ ಈ ನೆಲದ ಉದ್ದಗಲಕ್ಕೂ ಸಂಭವಿಸುತ್ತಲೇ ಇದೆ. ಅನಾದಿಯಿಂದ ಭಾರತೀಯ ಮಹಿಳೆ ನಾನಾ ನೆಲೆ, ರೂಪಗಳಲ್ಲಿ ತಾರತಮ್ಯ, ದೌರ್ಜನ್ಯವನ್ನು ಸಹಿಸಿಕೊಂಡು ಬಂದಿದ್ದಾಳೆ. ಯುದ್ಧ, ಕೋಮುದಂಗೆ, ರಕ್ಷಣಾ ಕಾರ್ಯಾಚರಣೆ, ಜಾತಿದೌರ್ಜನ್ಯ, ಅಭಿವೃದ್ಧಿ ಏನೇ ಸಂಭವಿಸಲಿ ಕೊನೆಗದರ ಬಲಿಪಶುವಾಗುವವಳು ಹೆಣ್ಣು. ಹೀಗಿರುತ್ತ ತನ್ನ ಸಹಜೀವಿಯ ಮೇಲೆ […]
ಒಂದು ಮಾತು: ಅವಳನ್ನು ದ್ವೇಷಿಸುವ ಮೊದಲು…..!

ಹೀಗೊಂದು ಮಾತು ಹೇಳಿದರೆ ನಿಮಗೆ ಬೇಸರವಾಗಲಿಕ್ಕಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಿಕ್ಕೆ ಆಗುವುದಿಲ್ಲ. ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಪ್ರತಿಯೊಬ್ಬನಲ್ಲಿಯೂ ದ್ವೇಷದ ಭಾವನೆ ಇದ್ದೇ ಇರುತ್ತದೆ. ನಾವು ದ್ವೇಷವನ್ನು ಇನ್ನೊಬ್ಬರಿಗೆ ಕೊಡುವುದಾದರೆ, ಅದನ್ನು ಪ್ರೀತಿಯಿಂದಲೇ ಕೊಡಬೇಕು. ಆ ದ್ವೇಷವನ್ನು ಸ್ವೀಕರಿಸಲು ಸಾಧ್ಯವಿದೆ. ನಾನೀಗ ಮತ್ತೊಂದು ಮಾತು ಹೇಳಿದರೆ ನಿಮಗೆ ಆಘಾತವಾಗಬಹದು.ಒಂದು ಮಾತು “ಪ್ರೀತಿಯನ್ನು ಪ್ರೀತಿಯಿಂದ ಕೊಟ್ಟರೆ ಈ ಪ್ರಪಂಚದಲ್ಲಿ ಎಷ್ಟೋ ಜನ ದ್ವೇಷಿಸುವವರು ಇದ್ದಾರೆ” ಇದೆಲ್ಲ ಯಾಕೆ ಹೀಗೆ ಆಗುತ್ತದೆ ಎಂದರೆ ನಮ್ಮ ಪ್ರೀತಿಯಲ್ಲಿ ನಮಗೆ ತಿಳಿಯದ […]
Motivational : ಬೇಸರ ಎಂಬ ಬ್ಯಾನಿ

ಮನುಷ್ಯ ಹುಟ್ಟಿನಿಂದ ಸಾಯುವ ತನಕ ಏನೆಲ್ಲ ಅನುಭವಿಸಬೇಕಾಗುತ್ತದೆ. ಮನುಷ್ಯ ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಬದುಕಬೇಕೆನ್ನುತ್ತಾನೆ. ಆದರೆ ಈ ನೆಮ್ಮದಿ ಸಾವಿನ ಕೊನೆಯ ತನಕ ಸಿಗುವುದೇ ಇಲ್ಲ. ಆಗಾಗ ಒಂದಿಷ್ಟು ಸಿಕ್ಕಂತೆ ಮಾಡಿ ಹೊರಟು ಹೋಗುತ್ತದೆ. ಆದರೆ ಬದುಕಿರುವ ತನಕ ಜೀವನ ಸಫಲತೆಯ ಹಾದಿಯಲ್ಲಿ ಮುನ್ನಡೆಯಬೇಕು. ನಮ್ಮ ಪ್ರಯತ್ನ ಸಫಲತೆಯ ಹಾದಿಯಲ್ಲಿ ಮುಂದುವರೆದರೆ, ಮನುಷ್ಯನಿಗೆ ಬೇಸರವಾಗಲಿ, ಆಲಸ್ಯವಾಗಲಿ ಸಮೀಪ ಸುಳಿಯುವುದಿಲ್ಲ. Motivational ಕೆಲವೊಂದು ಸಲ ನಾವು ಎಷ್ಟೇ ಕ್ರೀಯಾಶೀಲವಾಗಿದ್ದರೂ, ಬೇಸರೆಂಬ ಬ್ಯಾನಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ಬೇಸರ ಎಂಬುದು […]
Motivational: ಆತ್ಮೀಯ ಸ್ನೇಹ ಜಿವಿಗಳೇ

ಜೀವನ ಸುಗಮವಾಗಿ ಸಾಗಬೇಕಾದರೆ, ಒಬ್ಬರಿಗೊಬ್ಬರು ಸಹಕರಿಸಬೇಕು. ಸಹಕಾರ ಮನೋಭಾವನೆಯೊಂದು ಇದ್ದು ಬಿಟ್ಟರೆ, ಮನುಷ್ಯ ಎಲ್ಲಿ ಬೇಕಾದರೂ ಬದುಕುತ್ತಾನೆ. ಮನುಷ್ಯ ಜೀವನವನ್ನು ಒಬ್ಬಂಟಿಗನಾಗಿ ಕಳೆಯುವುದು ಸಾಧ್ಯವಿಲ್ಲವೆಂದು ತನ್ನ ಅನುಕೂಲಕ್ಕಾಗಿ ಏನೆಲ್ಲ ಸಂಬಂಧಗಳನ್ನು ಮಾಡಿಕೊಂಡಿದ್ದಾನೆ. ಪ್ರತಿಯೊಂದು ಸಂಬಂಧಗಳನ್ನು ಕಡೆಗಣಿಸುವಂತಿಲ್ಲ. ಎಲ್ಲಕ್ಕೂ ಅಷ್ಟೇ ಮಹತ್ವ ಕೊಡಲಾಗಿದೆ.motivational ಒಂದು ವೇಳೆ ಈ ಮನುಷ್ಯ ಸಂಬಂಧಗಳನ್ನು ಮಾಡಿಕೊಳ್ಳದಿದ್ದರೆ ಸಮಾಜದ ಗತಿ ಬದಲಾಗುತ್ತಿತ್ತು. ಆದಷ್ಟು ಸ್ವಾರ್ಥ ಮನೋಭಾವ ಬೆಳೆಯುತ್ತಿತ್ತು. ಅದೇನೆ ಇರಲಿ ಮನುಷ್ಯ ಮಾಡಿಕೊಂಡ ‘ಗಂಡ ಹೆಂಡತಿ’ ಸಂಬಂಧ ಬಹಳ ಮಹತ್ವವಾದದ್ದು. ಮನುಷ್ಯನ್ನೆಲ್ಲ ಸಂಬಂಧಗಳಲ್ಲಿ ಇದು […]
Motivational: ಮೂರು ದಿನದ ಬದುಕಿಗೆ ನೂರು ದಿನದ ಮನಸು

ಮನುಷ್ಯನ ಎಲ್ಲ ಆಗು ಹೋಗುಗಳಿಗೆ ಮನುಷ್ಯನೇ ಕಾರಣ. ಸಕಲ ಜೀವ ರಾಶಿ ಕುಲವನ್ನು ನೋಡಿದಾಗ ಮನುಷ್ಯನೇ ಅತ್ಯಂತ ಸೋಮಾರಿ. ಈ ಮನುಷ್ಯ ತನ್ನ ಆತ್ಮ ನೆಮ್ಮದಿಗಾಗಿ ಈ ಸೃಷ್ಠಿಯಲ್ಲಿ ಅದೆಷ್ಟೋ ವಸ್ತುಗಳನ್ನು ದ್ವೇಷಿಸುತ್ತಾನೆ, ತಿರಸ್ಕರಿಸುತ್ತಾನೆ. ಇನ್ನು ಅದೆಷ್ಟು ವಸ್ತುಗಳನ್ನು ಪ್ರೀತಿಸುತ್ತಾನೆ, ಆರಂಭಿಸುತ್ತಾನೆ, ಪೂಜ್ಯ ಭಾವನೇ ತಾಳುತ್ತಾನೆ, ಭಕ್ತಿ ಭಾವದಿಂದ ಮುಕ್ತಿ ಮಾರ್ಗಕ್ಕೆ ಹೋಗಲು ಪ್ರಯತ್ನಿಸುತ್ತಾನೆ, ಇಷ್ಟಾದರು ನೆಮ್ಮದಿಯ ಬದುಕು ಇನ್ನು ಸಿಕ್ಕಿಲ್ಲ. ಅದು ಸಿಗುವುದಿಲ್ಲ. Motivational ಇದನ್ನೂ ಓದಿ: ಮೌನದ ಪ್ರೀತಿಯಲಿ ನೆನಪಾದ ನಿನ್ನ ಗುಲಾಬಿ ಯಾಕೆಂದರೆ ನೆಮ್ಮದಿ, […]
Motivational: ಎಲ್ಲ ಸಮಸ್ಯೆಯ ಪರಿಹಾರ ಆತ್ಮ ವಿಶ್ವಾಸ

ಯಾವುದೇ ಒಂದು ಕಾರ್ಯವನ್ನು ಮಾಡಬೇಕಾದರೆ ಒಂದಿಲ್ಲ ಒಂದು ತೊಡಕುಗಳು ಎದುರಾಗುತ್ತವೆ. ಇಂಥ ತೊಡಕುಗಳು ಪದೇ ಪದೇಯಾಗಿ ಬರಲಾರಂಭಿಸಿದರೆ, ಯಾವುದೇ ವ್ಯಕ್ತಿಯಾಗಲಿ ಭಯಭೀತನಾಗುತ್ತಾನೆ. ತಾನು ನಂಬಿಕೆ ಇಟ್ಟುಕೊಂಡ ಕೆಲಸದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾನೆ. ಯಾವುದೇ ವ್ಯಕ್ತಿಯಾಗಿರಲಿ ವಿಶ್ವಾಸ ಕಳೆದುಕೊಂಡಾಗ ಅವನಿಂದ ಯಾವ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಅವನ ಕಾರ್ಯಗಳು ಯಶಸ್ವಿಯಾಗದಿದ್ದಾಗ ಅವನಲ್ಲಿ ನಿರುತ್ಸಾಹ ಭಾವನೆ ಮೂಡುತ್ತದೆ. ಚಿಂತೆಯ ನೆರಳು.Motivational ಆದಾ ಅವನನ್ನು ಕಾಡುತ್ತಲೇ ಇರುತ್ತದೆ. ನಾವು ಯಾವುದೇ ಕಾರ್ಯ ಸಾಧನೆಯಲ್ಲಿ ತೊಡಗಿದಾಗ ನಮ್ಮಿಂದ ಹಲವಾರು ತಪ್ಪುಗಳುಂಟಾಗಿ ಸಮಸ್ಯೆಗಳನ್ನು ಎದುರಿಸುವ ಸಂಧರ್ಬ […]
Motivational: ಬದುಕಿನಲ್ಲಿ ಮನುಷ್ಯ ಹುಡುಕುವುದೇನು?

ಈ ಸೃಷ್ಠಿಯಲ್ಲಿ ಮನುಷ್ಯನ ಉಗಮ ಎಂದಾಯಿತೊ, ಅಂದಿನಿಂದ ಮನುಷ್ಯ ಏನನ್ನೋ ಹುಡುಕುತಲಿದ್ದಾನೆ. ಅದು ಅವನಿಗೆ ಇನ್ನೂ ಸಿಕ್ಕಿಲ್ಲ. ಮನುಷ್ಯ ಬದುಕಿನಲ್ಲಿ ಹುಡುಕುವುದೇ ಬಹಳ ಯಾಕೆಂದರೆ, ಅವನು ಕಳೆದುಕೊಂಡದ್ದು ಬಹಳ. ನಾವು ಜೀವನದಲ್ಲಿ ಏನೇ ಕಳೆದುಕೊಂಡರೂ ಅದು ಮರಳಿ ಸಿಗುವಂತಿರಬೇಕು. ಎಷ್ಟೋ ಜನ ಸುಂದರ ಹೆಂಡತಿಗಾಗಿ ಶೋಧಿಸುತ್ತಾರೆ. ಎಷ್ಟೋ ಜನ ಹಣಕ್ಕಾಗಿ ಶೋಧಿಸುತ್ತಾರೆ. ಎಷ್ಟೋ ಜನ ಕಿರ್ತಿಗಾಗಿ ಶೋಧಿಸುತ್ತಾರೆ. ಎಷ್ಟೋ ಜನ ಅಧೀಕಾರಕ್ಕಾಗಿ ಶೋಧಿಸುತ್ತಾರೆ, ಎಷ್ಟೋ ಜನ ಪ್ರೀತಿಗಾಗಿ ಶೋಧಿಸುತ್ತಾರೆ. ಹೀಗೆ ಮನುಷ್ಯನ ಶೋಧಗಳ ಪಟ್ಟಿ ಮಾಡುತ್ತಾ ಹೋದರೆ, […]
Motivational: ನಿನ್ನೊಳಗೊಂದು ಎನೋ ಕದನವಿದೆಯಲ್ಲ!!!

ಕದನವೆನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲಿರುತ್ತದೆ.ಕದನ ಪ್ರೀತಿಯಿಂದ ಇದ್ದರೆ ಅದು ಯಾರನ್ನು ಸುಡುವುದಿಲ್ಲ. ಕದನ ಕದನದಿಂದ ಕೂಡಿದ್ದರೆ ಅದು ತನ್ನನ್ನು ಅಷ್ಟೆ ಅಲ್ಲ ತನ್ನ ಸುತ್ತಲೂ ಹಣೆದುಕೊಂಡಿರುವವರಿಗೂ ಸುಡುತ್ತದೆ.ಎಲ್ಲರ ಜೀವನದಲ್ಲಿ ಎರಡು ರಂಗಗಳನ್ನು ಗುರುತಿಸಬಹುದು.ಒಂದು ಅಂತರಂಗ ಇನ್ನೊಂದು ಬಹಿರಂಗ, ಬಹಿರಂಗ ವಿಷಯದಲ್ಲಿ ವ್ಯಕ್ತಿ ಕದನ ಮಾಡುತ್ತಿದ್ದರೆ ಅದನ್ನು ತಡೆಗಟ್ಟುವ ಸಾಧ್ಯತೆಯಿದೆ. ಅಥವಾ ಬಹಿರಂಗ ಕದನದಿಂದ ಅವನ ಮನಸ್ಸಿಗೆ ಅಘಾತವಾಗಿದ್ದರೆ ಸಾಧ್ಯವಿದ್ದ ಮಟ್ಟಿಗೆ ಪರಿಹಾರ ನೀಡುವುದು ಕಷ್ಟ. ಅದು ಯಾರು ಎನೆ ಹೇಳಿದರೂ ಅವನಂತರಂಗದಲ್ಲಿ ನಿಲ್ಲುವುದೆ ಇಲ್ಲ. ಇನ್ನೊಬ್ಬರ ವಿಷಯ ಎನಾದರಾಗಲಿ […]