Vijayapura News : (Folk literature) ಜಾನಪದ ಸಾಹಿತ್ಯಕ್ಕೆ ಸಂಸ್ಕøತಿಯೇ ಮೂಲ, ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ

ಜಾನಪದ ಸಾವಿರಾರು ವರ್ಷಗಳ ಸುದೀರ್ಘ ಸಾಂಸ್ಕøತಿಕ ಇತಿಹಾಸ ಹೊಂದಿದೆ ಅದನ್ನು ಉಳಿಸಿ ಬೆಳೆಸುವುದು. ನಮ್ಮ ಕರ್ತವ್ಯವಾಗಬೇಕು ಸಾಹಿತ್ಯಕ್ಕೆ ಜಾನಪದವೇ ಮೂಲ.

0
4
ವಿಜಯಪುರ – ಜಾನಪದ ಸಾವಿರಾರು ವರ್ಷಗಳ ಸುದೀರ್ಘ ಸಾಂಸ್ಕøತಿಕ ಇತಿಹಾಸ ಹೊಂದಿದೆ ಅದನ್ನು ಉಳಿಸಿ ಬೆಳೆಸುವುದು. ನಮ್ಮ ಕರ್ತವ್ಯವಾಗಬೇಕು ಸಾಹಿತ್ಯಕ್ಕೆ ಜಾನಪದವೇ ಮೂಲ. Folk literature ಕನ್ನಡ ಕನ್ನಡಿಗರ ಜೀವನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಸಾಹಿತಿ ಸಂಗಮೇಶ ಬದಾಮಿ ಹೇಳಿದರು.
ನಗರದ ನವಬಾಗದಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಹಮ್ಮಿಕೊಂಡ ಜಾನಪದ ಉತ್ಸವ-2025 ನಮ್ಮ ಸಂಸ್ಕøತಿ ನಮ್ಮ ಹೆಮ್ಮೆ.ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ರೈತರಾಗಲಿ ಮನೆಗೆಲಸ ಮಾಡುವ ಹೆಣ್ಣು ಮಕ್ಕಳಾಗಿರಲಿ ತಮ್ಮ ಕಷ್ಟ-ಸುಖಗಳನ್ನು ಕಳೆಯಲು ಬೀಸುಕಲ್ಲು ಹಾಡು, ಕುಟ್ಟುವುದು ಹಂತಿ ಪದ, ಜಾನಪದ ಗೀತೆಗಳನ್ನು ಆಡು ಭಾಷೆಯಲ್ಲಿ ತಾಳಬದ್ಧವಾಗಿ ಹಾಡಿ ರಂಜಿಸುತ್ತಿದ್ದರು. ಹಬ್ಬ, ಜಾತ್ರೆ ಬಂತೆಂದರೆ ಸಂಭ್ರಮದಿಂದ ಕುಣಿದು, ನಲಿದು ಆಚರಿಸುತ್ತಿದ್ದರು. ಆ ಸಂಪ್ರದಾಯ ಇಂದಿಗೂ ಹಳ್ಳಿಗಳಲ್ಲಿ ಮುಂದುವರೆದಿದೆ.
ಸಾಂಸ್ಕøತಿಕವಾಗಿ ವೈವಿದ್ಯತೆಯನ್ನು ಹೊಂದಿರುವ ಸಮಾಜದಲ್ಲಿ ಶಿಕ್ಷಣವು ಐಕ್ಯತೆ ಮತ್ತು ಭಾವೈಕ್ಯತೆಯನ್ನು ಸಾಧಿಸುವಂತಹ ಸಾರ್ವತ್ರಿಕ ನಿರಂತರ ಮೌಲ್ಯಗಳನ್ನು ನಮ್ಮ ಯುವ, ಯುವತಿಯರಲ್ಲಿ ಬೆಳೆಸಲು ಪ್ರಯತ್ನಿಸಬೇಕಾಗಿದೆ. ಮೌಲ್ಯಯುತ ಶಿಕ್ಷಣವು ಧಾರ್ಮಿಕ ಅಂದಶೃದ್ದೆ, ಹಿಂಸೆ, ಮೂಢನಂಬಿಕೆ ಇವುಗಳನ್ನು ತೊಡೆದು ಹಾಕಲು ಸಹಾಯ ಮಾಡಬೇಕಾಗಿದೆ ಎಂದರು.
Folk literature ಪ್ರಾಂಶುಪಾಲ ಡಾ. ಎ.ಐ. ಹಂಜಗಿ ಮಾತನಾಡಿ ಮನುಷ್ಯ ಜೀವನದಲ್ಲಿ ಸಿದ್ದಿ ಸಾಧನೆಗಳನ್ನು ಮಾಡಬೇಕು. ಮನಸ್ಸಿಲ್ಲದೇ ಕೆಲಸ ಯಶಸ್ಸು ತರಲಾರದು. ಕ್ರೀಯಾಶೀಲ ಬದುಕು ಜೀವನದ ಉನ್ನತಿಗೆ ಕಾರಣ ಮರೆತು ಹೋದ ಸಂಸ್ಕøತಿಯನ್ನು ಮುಂಬರುವ ದಿನಗಳಲ್ಲಿ ಕಾಲೇಜಿನ ಚಟುವಟಿಕೆಗಳನ್ನು ಜಾನಪದ ಹಬ್ಬದಂತೆ ಮತ್ತಷ್ಟು ಅರ್ಥಪೂರ್ಣವಾಗಿ ಜನಸ್ನೇಹಿಯಾಗಿ ಮಾಡಲು ಪ್ರಯತ್ನಿಸೋಣ ಉಪನ್ಯಾಸಕ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಕಾರ ತುಂಬಾ ಅವಶ್ಯಕತೆ ಇದೆ ಎಂದರು.
ಸಂಚಾಲಕ ಬಸವನಗೌಡ ಎನ್. ಶಾಡಹಳ್ಳಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಜಾನಪದ ಹಾಡು, ಕುಣಿತದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಪ್ರೊ. ಆರ್. ಎಸ್. ಕುರಿ, ಸರ್ವಶ್ರೀ ಚಟ್ಟೇರ, ದಾಕ್ಷಾಯಣಿ ಟಕ್ಕಳಕಿ, ಎಂ.ಎಸ್. ಕೊದ್ನಾನಪುರ ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಜಿಲ್ಲಾ ಜಾನಪದ ಕಾರ್ಯದರ್ಶಿ ಡಾ|| ರಮೇಶ ತೇಲಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸುನೀಲ ಹತ್ತಿ ವಂದಿಸಿದರು.


LEAVE A REPLY

Please enter your comment!
Please enter your name here