ಬಾಗಲಕೋಟೆ: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಡಿಸೆಂಬರ 1 ರಂದು ರವಿವಾರ ಬೆಳಿಗ್ಗೆ 10.30ಕ್ಕೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಕಲಚೇತನರಿಗಾಗಿ ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: Vijayapura News | ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿ | ರೈತರಿಗೆ ಪರಿಹಾರ ನೀಡಲು ಆಗ್ರಹ
ವಿಕಲಚೇತನರ ವಯೋಮಾನವಾರು ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, 6 ರಿಂದ 18 ವಯೋಮಾನದ ಬುದ್ದಿ ಮಾಂದ್ಯತೆಯ ವಿಕಲಚೇತನ ಮಕ್ಕಳಿಗೆ 200 ಮೀಟರ ಓಟ, ಹಗುರವಾದ ಚಂಡು ಎಸೆಯುವುದು, ಲೆಮನ್ ಸ್ಪೂನ್ ಸ್ಪರ್ಧೆ,ಗುಂಪು ನೃತ್ಯ, ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗಾಗಿ ಗುಂಡು ಎಸೆತ, 200 ಮೀಟರ ಓಟ, ಗುಂಪು ನೃತ್ಯ, ದೃಷ್ಠಿದೋóಷ ಮಕ್ಕಳಿಗಾಗಿ ಸಂಗೀತ ಗಾಯನ, ಗುಂಪು ನೃತ್ಯ ಸೇರಿದಂತೆ ವಿವಿಧ ಸ್ಪರ್ಧೇಗಳು ನಡೆಯಲಿದ್ದು ಆಸಕ್ತ ವಿಕಲಚೇತನರು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವೀಗೊಳಿಸಬೇಕು ಎಂದು ಜಿಲ್ಲಾ ವಿಕಚೇತನರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















