ವಿಜಯಪುರ: District Kannada literature ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕೀರ್ತಿ ಮಹಾತ್ಮಾ ಗಾಂಧೀಜಿಯವರಿಗೆ ಸಲ್ಲುತ್ತದೆ. ದತ್ತಿ ಗೋಷ್ಠಿಯ ಮೂಲಕ ಇಂದು ಗಾಂಧೀಜಿಯವರ ಚಿಂತನೆಗಳನ್ನು ಕುರಿತು ಅತ್ಯಂತ ಮಾರ್ಮಿಕವಾದ ಉಪನ್ಯಾಸವನ್ನು ಏರ್ಪಡಿಸಿ ದತ್ತಿಗೋಷ್ಠಿಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಸಾಹಿತ್ಯಕ ಮತ್ತು ಸಾಂಸ್ಕøತಿಕ ವಾತಾವರಣವನ್ನು ನಿರ್ಮಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾದದ್ದು ಎಂದು ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಮಾಜಿ ರಾಜ್ಯಾಧ್ಯಕ್ಷರಾದ ಬಾಪುಗೌಡ ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ, ತಾಲೂಕು ಹಾಗೂ ನಗರ ಘಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಮಹಾತ್ಮಾಗಾಂಧೀಜಿ ದತ್ತಿ. ದತ್ತಿ ದಾನಿಗಳು ಅಧ್ಯಕ್ಷರು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆ, ವಿಜಯಪುರ. ವಿಷಯ ಮಹಾತ್ಮಾ ಗಾಂಧೀಜಿಯವರ ಕುರಿತು ಚಿಂತನೆ. ಹಾಗೂ ದಿ. ಶಮಶುದ್ದೀನಪಟೇಲ ಹುಸೇನ್ ಪಟೇಲ್ ಪಾಟೀಲ (ಗಣಿಹಾರ) ದತ್ತಿ. ದತ್ತಿ ದಾನಿಗಳು ಎ.ಎಸ್ ಪಾಟೀಲ (ಗಣಿಹಾರ) ವಿಷಯ: “ಕನ್ನಡ ಸಾಹಿತ್ಯದಲ್ಲಿ ಭಾವೈಕ್ಯತೆಯ ಸಂದೇಶಗಳು” ಎಂಬ ದತ್ತಿನಿಧಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತ, ನಮ್ಮ ಜಿಲ್ಲೆಯಲ್ಲಿಯೂ ಸಹ ಇಂದು ಗಾಂಧೀ ಭವನವನ್ನು ನಿರ್ಮಿಸಿದ್ದು, ಅಲ್ಲಿಯೂ ಸಹ ಗಾಂಧೀಜಿಯವರ ಚಿಂತನೆಗಳನ್ನು ನಿರಂತರ ನಡೆಯುವಂತಾಗಲಿ ಎಂದು ಆಶಿಸಿದರು.
ಇದನ್ನೂ ಓದಿ: Vijayapura News : ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ಸಿಬ್ಬಂದಿಗಳ ಕುಂದುಕೊರತೆ ಬಗ್ಗೆ ರಾಜ್ಯಮಟ್ಟದ ಕಾರ್ಯಾಗಾರ
District Kannada literature ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್ ಪಾಟೀಲ (ಗಣಿಹಾರ) ಅವರು ಮಾತನಾಡುತ್ತಾ, ಕನ್ನಡವನ್ನು ಉಳಿಸಿ ಬೆಳೆಸುವ ಕಾಯಕವನ್ನು ಪ್ರತಿಯೊಬ್ಬ ಕನ್ನಡಿಗರು ಕಡ್ಡಾಯವಾಗಿ ಮಾಡಲೇಬೇಕು ಎಂಬ ಸಂದೇಶ ನೀಡುತ್ತಾ, ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ತನ್ನ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿರುವುದು ನಮಗೆಲ್ಲ ಸಂತೋಷ ತರುವ ಸಂಗತಿ ಎಂದರು.
“ಮಹಾತ್ಮಾ ಗಾಂಧೀಜಿಯವರ ಕುರಿತು ಚಿಂತನೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ತಿಕೋಟಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡುತ್ತಾ, ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ದೇಶದ ಒಬ್ಬ ಶಿಕ್ಷಣ ಚಿಂತಕರಾಗಿ, ಶ್ರೇಷ್ಠ ತತ್ವಜ್ಞಾನಿಗಳಾಗಿ, ರಾಜಕೀಯ ಮುತ್ಸದ್ದಿಯಾಗಿ ಇಡೀ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಶ್ರೇಯಸ್ಸು ಮಹಾತ್ಮಾ ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದರು.
ಇದನ್ನೂ ಓದಿ: Vijayapura News : ಸನಸೈನ್ ಪ್ರೊಡೆಕ್ಷನ್ & ನೃತ್ಯ ತಂಡದಿಂದ ದಾಂಡಿಯಾ – ಗರಬಾ ಕಾರ್ಯಕ್ರಮ ಆಯೋಜನೆ
ಇಂದು ನಾವೆಲ್ಲರೂ ಗಾಂಧೀಜಿಯವರು ಸೂಚಿಸಿದ ಸಪ್ತ ಸೂತ್ರಗಳಾದ ಚಾರಿತ್ರ್ಯವಿಲ್ಲದ ಶಿಕ್ಷಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ತತ್ವರಹಿತ ರಾಜಕಾರಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಇವುಗಳ ಕುರಿತು ಚಿಂತನೆ ಮಾಡಬೇಕಾಗಿದೆ ಅಷ್ಟೇ ಅಲ್ಲದೇ ಗಾಂಧೀಜಿಯವರ ಚಿಂತನೆಗಳನ್ನು ಹಲವಾರು ಆಯಾಮಗಳ, ನಿದರ್ಶನಗಳ ಮೂಲಕ ನೆರೆದಿದ್ದ ಸಾಹಿತ್ಯಾಭಿಮಾನಿಗಳಿಗೆ ತಿಳಿಸಿಕೊ ಟ್ಟರು.
“ಕನ್ನಡ ಸಾಹಿತ್ಯದಲ್ಲಿ ಭಾವೈಕ್ಯತೆಯ ಸಂದೇಶಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕರಾದ ಯಮನಪ್ಪ ಪವಾರ ಮಾತನಾಡುತ್ತಾ, ಭಾವ ಭಾವಗಳು ಒಂದಾಗುವುದೇ ಭಾವೈಕ್ಯತೆ. ಜಗತ್ತಿನ ಎಲ್ಲ ಧರ್ಮಗಳ ಸಾರ ಒಂದೇ ಶಾಂತಿಯಿಂದ ಬದುಕಿ ನೆಮ್ಮದಿಯ ಜೀವನ ನಡೆಸುವುದು. ಜಗತ್ತಿಗೆ ಅಪಾರವಾದ ಅನುಭವಗಳನ್ನು ಕಟ್ಟಿಕೊಟ್ಟ ಧಾರ್ಮಿಕ ಮುಖಂಡರು, ಸಾಧು ಸಂತರು, ಸೂಫಿಗಳು ಹಲವಾರು ನಿದರ್ಶನಗಳ ಮೂಲಕ ನಮಗೆಲ್ಲ ಭಾವೈಕ್ಯತೆಯ ಸಂದೇಶಗಳನ್ನು ತಿಳಿಸಿ ಹೋಗಿದ್ದಾರೆ ಆ ಎಲ್ಲ ಅಂಶಗಳನ್ನು ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಇದನ್ನೂ ಓದಿ: Bagalkote News : ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪ್ರಧಾನ ಸಮಾರಂಭ
ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ ತಾಲೂಕಿನ ಅನೇಕ ದೇವಸ್ಥಾನಗಳ ದರ್ಗಾಗಳ ದೃಷ್ಟಾಂತಗಳ ಮೂಲಕ ಇಂದಿಗೂ ಸಹ ಹಲವಾರು ಹಳ್ಳಿಗಳಲ್ಲಿ ಮೊಹರಂ ಆಚರಣೆ, ಹೆಜ್ಜೆ ಆಟ ಆಡುವ ಸಂದರ್ಭದಲ್ಲಿ ನಾವು ಭಾವೈಕ್ಯತೆಯನ್ನು ಗುರುತಿಸಬಹುದು ಎನ್ನುತ್ತ ಹುಬ್ಬಳ್ಳಿಯ ಸಿದ್ಧಾರೂಢರ ಹಾಗೂ ಕಬೀರರ ಹಾಗೂ ಗುರು ಗೋವಿಂದಭಟ್ಟರ ಮತ್ತು ಶಿಶುನಾಳ ಶರೀಫರ ಅನೇಕ ನಿದಶನಗಳನ್ನು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಗೀತಾಂಜಲಿ ಪಾಟೀಲ, ರಾಜು ಕಂಬಾಗಿ, ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶಾಂತಾ ವಿಭೂತಿ ನೆರವೇರಿಸಿದರು.
ಮಮತಾ ಮುಳಸಾವಳಗಿ ಸ್ವಾಗತಿಸಿ ಪರಿಚಯಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಸಾಧಕರ ಸನ್ಮಾನವನ್ನು ಡಾ. ಮಾಧವ ಗುಡಿ ನೆರವೇರಿಸಿದರು. ಸುರೇಶ ಜತ್ತಿ ಕಾರ್ಯಕ್ರಮ ನಿರೂಪಿಸಿದರು. ಕಮಲಾ ಮುರಾಳ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಅರುಣ ಲಿಂಗಣ್ಣ ಸಿಂಪಿ, ಕಲ್ಪನಾ ಅರುಣ ಸಿಂಪಿ, ಮಡಿವಾಳಮ್ಮ ನಾಡಗೌಡ, ಮರಲಿಂಗಪ್ಪ ಹೊರಗಿನಮನಿ, ಸರ್ವಮಂಗಲಾ ಹೂಗಾರ, ಮಹಮ್ಮದ ರಹಿಮಾನ ಇನಾಮದಾರ, ಸಂಗಮೇಶ ಜಂಗಮಶೆಟ್ಟಿ ಹಾಗೂ ಸುಭಾಷಚಂದ್ರ ನಾವಿ ಮುಂತಾದ ಗಣ್ಯ ಸಾಧಕರನ್ನು ಸಾಹಿತ್ಯ ಪರಿಷತ್ತಿನಿಂದ ಗೌರವ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಇದನ್ನೂ ಓದಿ: Vijayapura News : ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ
ಆಶಾ ಬಿರಾದಾರ. ರಮೇಶ ಜಾಧವ. ಕಮಲಾ ಮುರಾಳ. ಅಲ್ಲಮಪ್ರಭಮಲ್ಲಿಕಾರ್ಜುನಮಠ.ಅಣ್ಣುಗೌಡ ಬಿರಾದಾರ. ಅಜುನ ಶಿರೂರ. ಸಂಗಮೇಶ ಚೂರಿ ವಿಜಯಲಕ್ಷೀ ಹಳಕಟ್ಟಿ. ಜಿ ಎಸ್ ಬಳ್ಳೂರ. ಶ್ರೀಕಾಂತ ನಾಡಗೌಡ. ಜಯಶ್ರೀ ತೆಲಗ. ಅಮೋಘಸಿದ್ಧ ಪೂಜಾರಿ. ರವಿ ಕಿತ್ತೂರ. ಶಿವಾಜಿ ಮೋರೆ. ಕೆ ಎಸ್ ಹಣಮಾಣಿ. ಗಂಗಮ್ಮ ರೆಡ್ಡಿ. ಲಕ್ಷ್ಮಿ ಬಿರಾದಾರ. ಗುರುಬಾಯಿ ಮಣೂರ. ದೇವೇಂದ್ರ ಬಡಿಗೇರ. ಕಾಶಿನಾಥ ಗೋಬ್ಬಣ್ಣವರ. ಪ್ರೀತಿ ನಾಡಗೇರಿ. ರಾಜಶೇಖರ ಹಿರೇಮಠ. ಮುಂತಾದವರು ಉಪಸ್ಥಿತರಿದ್ದರು.