Bagalkote News | ಸುಸ್ಥಿರ ಕೃಷಿ, ತೋಟಗಾರಿಕೆಗೆ ಜೀವಾಳ : ಕಲೈಸೆಲ್ವಿ

ಕೃಷಿ ಆದಾಯ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉದಯೋನ್ಮುಖ ಉದ್ಯಮಗಳಿಗೆ ತೋಟಗಾರಿಕೆ ವೈವಿದ್ಯೀಕರಣ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ.

0
30
Kalaiselvi image

ಬಾಗಲಕೋಟೆ: ದೇಶದ ಆರ್ಥಿಕತೆಯ ತೀವ್ರ ಬೆಳವಣಿಗೆಗೆ ತೋಟಗಾರಿಕೆಯು ಸಂಭಾವ್ಯ ಕೃಷಿ ಉದ್ಯಮವಾಗಿ ಹೊರಹೊಮ್ಮಿದ್ದು, ಇದು ಬೆಳೆ ವೈವಿದ್ಯೀಕರಣಕ್ಕಾಗಿ ರೈತರಿಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತಿದೆ ಎಂದು ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಕಾರ್ಯದರ್ಶಿ ಹಾಗೂ ವೈಜ್ಞನಿಕ ಮತ್ತು ಕೈಗಾರಿಕಾ ಅನುಸಂಧಾನ ಪರಿಷತ್‍ನ ಮಹಾ ನಿರ್ದೇಶಕಿ ಡಾ.ಎನ್.ಕಲೈಸೆಲ್ಟಿ (Kalaiselvi) ಹೇಳಿದರು.

ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಪೌಷ್ಠಿಕಾಂಶದ ಸಮರ್ಪಕತೆ, ಉದ್ಯೋಗ ಅವಕಾಶ ಹೆಚ್ಚಿಸುವುದು, ಕೃಷಿ ಆದಾಯ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉದಯೋನ್ಮುಖ ಉದ್ಯಮಗಳಿಗೆ ತೋಟಗಾರಿಕೆ ವೈವಿದ್ಯೀಕರಣ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ (Kalaiselvi) ಎಂದರು.

ಇದನ್ನೂ ಓದಿ: Bagalkote News | ಅಮೂಲ್ಯಗೆ 16 ಚಿನ್ನದ ಪದಕ | ತೋವಿವಿಯಲ್ಲಿ 13ನೇ ಘಟಿಕೋತ್ಸವ |

ಜಾಗತಿಕ ಪರಿಸರ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಸುಸ್ಥಿರ ತೋಟಗಾರಿಕೆಯು ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ. ಸಣ್ಣ ಪ್ರಮಾಣದ ಹಸಿರುವ ಉದ್ಯಾನದಿಂದ ದೊಡ್ಡ ಪ್ರಮಾಣದ ಮರು ಅರಣ್ಯೀಕರಣ ಮತ್ತು ತ್ಯಾಜ್ಯ ಕಡಿತದಂತಹ ಯೋಜನೆಗಳವರೆಗೆ, ಈ ಕ್ಷೇತ್ರದಲ್ಲಿನ ನಾವಿನ್ಯಕಾರರು ನಮ್ಮ ಪರಿಸರ ವ್ಯವಸ್ಥೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಮಿತಿಗೊಳಿಸುವಾಗ ಇಳುವರಿಯನ್ನು ಹೆಚ್ಚಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ಪರಿಕಲ್ಪಣೆಯ ಸೌಂದರ್ಯವು ವಿಸ್ತಾರವಾದ ಕೃಷಿ ಭೂಮಿಯಿಂದ ಹಿಡಿದು, ಹಿತ್ತಲು ಮತ್ತು ಮೇಲ್ಚಾವಣಿಗಳವರೆಗೆ ಮೈಕ್ರೋ ಮತ್ತು ಸೂಕ್ಷ್ಮ ಮಟ್ಟದಲ್ಲಿ ಅನ್ವಯಿಸಲ್ಪಡುತ್ತದೆ ಎಂದರು.

ತೋಟಗಾರಿಕೆಯಿಂದ ಜೈವಿಕ ವೈವಿದ್ಯತೆಯ ಸಂರಕ್ಷಣೆ ಮತ್ತು ಅವಶ್ಯಕ ಪರಿಸರ ವ್ಯವಸ್ಥೆಯ ಪೂರ್ವ ಸಿದ್ದತೆಗೆ ಕೊಡುಗೆ ನೀಡುತ್ತದೆ. ವಿವಿಧ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆವಾಸ ಸ್ಥಾನಗಳನ್ನು ರಚಿಸುವ ಮೂಲಕ ಪರಾಗಸ್ಪರ್ಶ, ನೈಸರ್ಗಿಕ ಕೀಟ ನಿಯಂತ್ರಣ ಮತ್ತು ನೀರಿನ ಶೋಧನೆಯಂತಹ ಅಗತ್ಯ ಪ್ರಕ್ರಿಯೆಗಳನ್ನು ಬೆಂಬಲಿಸುವ ಸಮತೋಲಿತ ಪರಿಸರ ವ್ಯವಸ್ಥೆಗಳನ್ನು ನಿರ್ವಹಿಸಲು ತೋಟಗಾರಿಕೆ ಸಹಾಯ ಮಾಡುತ್ತದೆ ಎಂದರು.

ಇದನ್ನೂ ಓದಿ: ವಿಜಯಪುರ ಗ್ರಾಮ ಪಂಚಾಯತ ನೌಕರರ ಸಂಘದಿಂದ ‘ಸಚಿವರ ಮನೆ ಚಲೋ’ ಪ್ರತಿಭಟನೆ

ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲದೇ ಸದೃಡ ರಾಷ್ಟ್ರ ನಿರ್ಮಾಣಕ್ಕೂ ದೊಡ್ಡ ಆಸ್ತಿಯಾಗಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಅವರು ಸಂಪಾದಿಸಿದ ಕೌಶಲ್ಯಗಳ ಸದ್ವಿನಿಯೋಗವನ್ನು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವಲ್ಲಿ ಬಳಸಿಕೊಳ್ಳತ್ತಾರೆ ಎಂದು ನಾನು ಬಲವಾಗಿ ನಂಬಿದ್ದೇನೆ. ತಂತ್ರಜ್ಞಾನವನ್ನು ಪ್ರೀತಿಸುವ ವಿದ್ಯಾರ್ಥಿಗಳಿಗೆ, ಸಸ್ಯ-ಸಂಬಂಧಿತ ವಿವರವನ್ನು ಪ್ರಮಾಣೀಕರಿಸುವ ಸಂವೇದಕಗಳನ್ನು ಸ್ಥಾಪಿಸುವ ಸಾಮಥ್ರ್ಯವನ್ನು ನಾವು ಹೊಂದಿದ್ದೇವೆ ಎಂದರು.

ನಮ್ಮ ಸಮಾಜವು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿದೆ. ನಮ್ಮ ಹಿಂದಿನ ದಾಖಲೆಯನ್ನು ಮೀರಿಸುವಂತೆ ಸುಸ್ಥಿರ ತೋಟಗಾರಿಕೆಯ ಅವಕಾಶಗಳು ಮತ್ತು ಲಾಭಗಳು ನಮಗೆ ದೊರೆಯುತ್ತಿದೆ. ಉತ್ತಮ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಗುಣಮಟ್ಟದ ಜೀವವೈವಿದ್ಯವನ್ನು ಉತ್ತೇಜಿಸಬಹುದು ಮತ್ತು ಮಣ್ಣಿನ ಆರೋಗ್ಯವನ್ನು ಸುದಾರಿಸಬಹುದಾಗಿದೆ. ಇದು ಹೆಚ್ಚು ಸದೃಡವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಇದು ಆರೋಗ್ಯಕರ ಮತ್ತು ಸದೃಡ ಸಸ್ಯಗಳನ್ನು ಉತ್ಪಾದಿಸುತ್ತದೆ ಎಂದರು.

ಇದನ್ನೂ ಓದಿ: ವಿಜಯಪುರ | ಭಗತ್ ಸಿಂಗ್‌ರ ದೇಶ ಪ್ರೇಮ ಯುವಕರಿಗೆ ಪ್ರೇರಣೆ | ಮಲ್ಲಿಕಾರ್ಜುನ್ ಭೃಂಗಿಮಠ

ಘಟಿಕೋತ್ಸವದ ಅಧ್ಯಕ್ಷತೆಯನ್ನು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪ್ರಾರಂಭದಲ್ಲಿ ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಸ್ವಾಗತಿಸಿ ಪ್ರಗತಿ ವರದಿಯನ್ನು ಹೇಳಿದರು. ಕಾರ್ಯಕ್ರಮದಲ್ಲಿ ತೋವಿವಿಯ ವಿಸ್ತರಣಾ ನಿರ್ದೇಶಕ ಮಹಾದೇವ ಮುರಗಿ ಸೇರಿದಂತೆ ವ್ಯವಸ್ಥಾಪನಾ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here