ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ ಡೇನಲ್ಮ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಕ್ಕೆ ಇಂಟರ್‍ನಶಿಪ್ ತರಬೇತಿಗಾಗಿ ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ: ಡಿಸಿ ಕರೆ, ಪಿಓಪಿ ಮಾರಾಟ ನಿಷೇಧ
ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾದಲ್ಲಿ ವ್ಯಾಸಂಗ ಪೂರ್ಣಗೊಂಡು 2020-21ನೇ ಸಾಲಿನ ನಂತರ ಪದವಿ ಹೊಂದಿದ ಆಸಕ್ತ ಅಭ್ಯರ್ಥಿಗಳು ಪಾಲಿಕೆ ಡೇನಲ್ಮ ಅಭಿಯಾನ ಕ್ಕೆ ಆಧಾರ ಕಾರ್ಡ, ಕಾಲೇಜ್ ಐಡಿ, ಆದಾಯ ಮತ್ತು ಜಾತಿ ಆದಾಯ ಪ್ರಮಾಣ ಪತ್ರ, ಪದವಿ-ಸ್ನಾತಕೋತ್ತರ ಪದವಿ- ಡಿಪ್ಲೋಮಾ ಅಂಕಪಟ್ಟಿಯೊಂದಿಗೆ ದಿನಾಂಕ : 29-08-2024ರ ಬೆಳಿಗ್ಗೆ 11-30ರೊಳಗಾಗಿ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಡೇ-ನಲ್ಮ ಶಾಖೆಯನ್ನು ಸಂಪರ್ಕಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಂಗ್ ಪ್ರೋಫೆಸನಲ್ ಹುದ್ದೆ ತಾತ್ಕಾಲಿಕ ನೇಮಕಾತಿಗೆ ನೇರ ಸಂದರ್ಶನ
ವಿಜಯಪುರ, ಆಗಸ್ಟ್ 25 (ಕರ್ನಾಟಕ ವಾತೆ): ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಖಿಲ ಭಾರತ ಸಮನ್ವಿತ ಒಣ ಬೇಸಾಯ ಯೋಜನೆಯಡಿಯಲ್ಲಿ ಯಂಗ್ ಫ್ರೋಫೆಸನಲ್-2 ಒಂದು ಹುದ್ದೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಸಹ ಸಂಶೋಧನಾ ನಿರ್ದೇಶಕರು, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಹಿಟ್ನಳ್ಳಿ ಫಾರ್ಮ, ವಿಜಯಪುರದಲ್ಲಿ ಆ.27ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ಏರ್ಪಡಿಸಲಾಗಿದೆ.
ಆಸಕ್ತರು ವಿದ್ಯಾರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್‍ಸೈಟ್ https://sites;google.com/a/uasd.in/news/ad-hoc-appointment-notification ಸಂಪರ್ಕಿಸ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ
ವಿಜಯಪುರ: 2024-25ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ,ಚೇತನಾ,ಧನಶ್ರೀ,ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.21ಕೊನೆಯ ದಿನವಾಗಿದೆ.
ಅರ್ಜಿಯನ್ನು ಹತ್ತಿರದ ಬಾಪೂಜಿ ಸೇವಾ ಕೇಂದ್ರ,ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಅಭಿವೃದ್ಧಿ ನಿರೀಕ್ಷಕರು,ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ,ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08352-295353 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿ