ವಿಜಯಪುರ: ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಗುರುದೇವಿ ಹಳ್ಳೂರಗೆ (ನಂದಿನಿ ಮ. ಬಿರಾದಾರ) ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ "ಎ ಸ್ಟಡಿ ಆಫ್ ಲರ್ನಿಂಗ್ ಟೀಚಿಂಗ್ ಅಂಡ್ ಥಿಂಕಿಂಗ್ ಸ್ಟೈಲ ಆಫ್ ಪ್ರಾಸ್ಪೆಕ್ಟಿವ್ ಟೀಚರ್ಸ್ ಇನ್ನ ರಿಲೇಶನ್ ಟು ದೇಆರ್ ಟೀಚಿಂಗ್ ಕಾಂಪಿಟನ್ಸ" ಎಂಬ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ. ಇವರಿಗೆ ಮೌಲ್ಯಮಾಪನ ಕುಲ ಸಚಿವ ಹಾಗೂ ಶಿಕ್ಷಣ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಲ್. ಲಕ್ಕಣ್ಣನವರು ಮಾರ್ಗದರ್ಶನ ನೀಡಿದ್ದರು.





