ವಿಜಯಪುರ - ನಗರದ ಜೋರಾಪುರ ಪೇಠದಲ್ಲಿ ಶ್ರೀ ಶಿವಶರಣ ಹಳಯ್ಯನವರ ಜಯಂತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಆರ್. ಕಬಾಡೆಯವರು 12ನೇ ಶತಮಾನದ ಮಹಾನ ಶರಣರಾದ ಹರಳಯ್ಯನವರ ಜೀವನ ಮತ್ತು ಸಾಧನೆ ಕುರಿತು ವಿವರವಾಗಿ ಮಾತನಾಡಿದರು.
ಇನ್ನೋರ್ವ ಅತಿಥಿ ಶಾಂತಮಲ್ಲಪ್ಪ ಕಟ್ಟಿಮನಿಯವರು ಸಮಾಜದಲ್ಲಿ ಶರಣ ಹರಳಯ್ಯ ಸಮಾಜ ಬಂಧುಗಳು ಒಗ್ಗಟ್ಟಾಗಿ ಇಂತ ಮಹಾ ಕಾಯಕ ಶರಣರ ಜಯಂತ್ಯೋತ್ಸವದಲ್ಲಿ ಭಾಗಿಯಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದು. ಇನ್ನೊರ್ವ ಅತಿಥಿಗಳಾದ ಗಣೇಶ ಕಬಾಡೆ ವಕೀಲರು ಸಮಾಜದ ಜನರಿಗೆ ಮಾರ್ಗದರ್ಶನ ಮಾಡಿದರು. ತಬ್ಬನ್ಣ ಹೊನ್ನಕಸ್ತೂರಿ ಅವರು ವೇದಿಕೆ ಮೇಲಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಮುಖಂಡರಾದ ಶ್ರೀನಿವಾಸ ಶಹಾಪೂರ ಅವರು ಆಯೋಜಿಸಿದರು. ಕಾರ್ಯಕ್ರಮದಲ್ಲಿ ರಾಘವೇಂದ್ರ ಹೊನ್ನಮೊರೆ ಚಿದಾನಂದ ಶಹಾಪೂರ ಬಸರಾಜ ಸರ್ಜಾಪೂರ, ರಾಜು ಕಬಾಡೆ, ಅನಿಲ ಕಬಾಡೆ, ನಾಗರಾಜ ಕಬಾಡೆ ಮುತ್ತಣ್ಣ ನಾಗಠಾಣ, ಸಾಬು ಕಬಾಡೆ, ಶಿವಾನಂದ ಸಾತಪುತೆ ಆನಂದ ಕಾಂಬಳೆ ಅಪ್ಪುರಾಜ ನಿಆದಾರ ವೆಂಕಟೇಶ ಸೌದಾಗರ, ಅರೂಢಸ್ವಾಮಿ ಕಬಾಡೆ, ರಮೇಶ ಸೌದಾಗರ, ಶಂಖರ ಸಾತಪುತೆ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಶ್ರೀನಿವಾಸ ಶಹಾಪುರ ಅವರು ಅಲ್ಪೋಪಹಾರ ವ್ಯವಸ್ಥೆ ಕಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಸಂತೋಷ ಕಬಾಡೆ ನೆರವೇರಿಸಿದರು. ಕೊನೆಯಲ್ಲಿ ವಂದಿಸಿದರು.







