ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಮನಃಪೂರ್ವಕವಾಗಿ ನೆನೆಯಬೇಕು; ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ

ವಿಜಯಪುರ ಜ.26: ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಧೀಮಂತ ನಾಯಕತ್ವದಲ್ಲಿ ರಚನೆಗೊಂಡ ಸಂವಿಧಾನವು 1950 ರ ಜನೇವರಿ 26 ರಂದು ಭಾರತದ ಗಣತಂತ್ರ ಒಕ್ಕೂಟ ವ್ಯವಸ್ಥೆಯ ಮೂಲಾಧಾರವಾಗಿ ಜಾರಿಗೆ ಬಂದಿತು. ಸರ್ವ ಸಮತೆಯನ್ನು ವಿಧಿವತ್ತಾಗಿ ಪಾಲಿಸಲು ಇಡೀ ದೇಶವೇ ಸಜ್ಜುಗೊಂಡ ದಿನವಿದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಹೇಳಿದರು. ಜಿಲ್ಲೆಯ […]

ಮಾಜಿ ಸೈನಿಕರಿಂದ 72ನೇ ಗಣರಾಜ್ಯೋತ್ಸವ ಆಚರಣೆ

ವಿಜಯಪುರ ಜ.26: 72ನೇ ಗಣರಾಜ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದಲ್ಲಿ ಜಿಲ್ಲೆಯ ಸಮಸ್ತ ಮಾಜಿ ಸೈನಿಕರು 72ನೇ ಗಣರಾಜ್ಯೋತ್ಸವ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಅಧ್ಯಕ್ಷರಾದ ಎಂ.ಬಿ. ತೋಟದ ನೆರವೇರಿಸಿ ಮಾತನಾಡಿದ ಅವರು, ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಕೋರಿದರು. ಹಾಗೂ 1971 ರ ಇಂಡೋ ಪಾಕ್ ಯುದ್ಧದ ವಿಜಯೋತ್ಸವನ್ನು ವಿಜೃಂಭಣೆಯಾಗಿ ಗೋಲ್ಡನ್ ಜುಬ್ಲಿ ಆಚರಿಸುವ ಕುರಿತು ಎಲ್ಲ ಮಾಜಿ ಸೈನಿಕರಿಗೆ ವಿವರಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲೆಯ ಮಾಜಿ ಸೈನಿಕ ಅಧ್ಯಕ್ಷರಾದ ಎಂ.ಬಿ. […]