ಐತಿಹಾಸಿಕ ಅವಶೇಷ ಪತ್ತೆ

ಕರಿಜನ ವರದಿ ವಿಜಯಪುರ : ವಿಜಯಪುರದ ಗೌಡಗೆರೆ ಹಳ್ಳಿಯ ಮೂಡಣಕೇರಿಯಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣವಾದ ಶಿವತೀರ್ಥ ಶ್ರೀ ಸ್ವಯಂಭು ವಿನಾಯಕ ದೇವಸ್ಥಾನದ ಮಕರ ತೋರಣದಲ್ಲಿ ಹನುಮದೇವರ ಅಪರೂಪದ ಉಬ್ಬು ಶಿಲ್ಪ ಇದ್ದು ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಉಬ್ಬು ಶಿಲ್ಪವನ್ನು ಸಂಶೋಧಿಸಲಾಗಿದೆ.ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಶಿಲ್ಪ ಪತ್ತೆಯಾಗಿದ್ದು,ಇದನ್ನು ಇತಿಹಾಸ ಸಂಶೋಧಕ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಗುರುತಿಸಿದ್ದಾರೆ.ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಗಿರಿ […]

ಅನುಭವ ಮಂಟಪ ಶರಣ ಚಳವಳಿಯ ಹೃದಯ

Experience Hall

ಕರಿಜನ ವರದಿವಿಜಯಪುರ : ಅನುಭವ ಮಂಟಪವು ಶರಣ ಚಳವಳಿಯ ಹೃದಯವಾಗಿತ್ತು. ಇಲ್ಲಿ ಮಹಿಳೆಯರು ಮೌನ ಶ್ರೋತೃಗಳಾಗಿರಲಿಲ್ಲ. ಅವರು ತರ್ಕಕಾರ್ತಿಯರು ಮತ್ತು ವಚನ ರಚನಾಕಾರರೂ ಆಗಿದ್ದರು ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತೋತ್ಸವ ಪ್ರಯುಕ್ತ ನಡೆದ `ಅಕ್ಕಮಹಾದೇವಿಯ ಚಿಂತನೆಗಳು’ ಎಂಬ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಪುರುಷ ಶರಣರ ಮುಂದೆ ಧೈರ್ಯವಾಗಿ ಮಾತನಾಡಿದರು. ಹೀಗಾಗಿ ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕೇತವಾಗಿದ್ದಾರೆ […]

ಸಮಾಜದ ಉನ್ನತಿಯಲ್ಲಿ ಸ್ತ್ರೀಯ ಪಾತ್ರ ಅನನ್ಯ

ಕರಿಜನ ವರದಿವಿಜಯಪುರ : ಮಹಿಳೆಯ ಸ್ಥಾನ ಅತ್ಯಂತ ಹಿರಿದಾಗಿದ್ದು, ಕುಟುಂಬದ ಅಷ್ಟೇ ಅಲ್ಲ ಸಮಾಜದ ಉನ್ನತಿಗೆ ಆಕೆಯ ಕೊಡುಗೆ ಅಪಾರ ಎಂದು ಖ್ಯಾತ ಪ್ರಸೂತಿ ತಜ್ಞೆ ಡಾ.ಜಯಶ್ರೀ ಮಂಗಲಗಿ ಹೇಳಿದರು.ವಿಜಯಪುರದ ಹಳಕೇರಿ ಗಲ್ಲಿಯಲ್ಲಿರುವ ಗಾಯಿ ಬಡಾವಣೆಯ ಬಕುಲ ಧಾಮದಲ್ಲಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶ್ರೇಯೋಭಿವೃದ್ಧಿ ಸಮಾಲೋಚನಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆ ತ್ಯಾಗದ ಪ್ರತೀಕ, ಕರುಣೆಯ ಗಣಿ, ವಾತ್ಸಲ್ಯದ ಪ್ರತಿಬಿಂಬ, ಮಹಿಳೆ ಸಹನೆಯ ಮೂರ್ತಿ, ಆದರೆ ಅದು […]

ಜೋರಾಪುರ ಪೇಠದಲ್ಲಿ ಶಿವಶರಣ ಹಳಯ್ಯನವರ ಜಯಂತಿ

Birth anniversary of Shiva Sharan Haralayya

ವಿಜಯಪುರ – ನಗರದ ಜೋರಾಪುರ ಪೇಠದಲ್ಲಿ ಶ್ರೀ ಶಿವಶರಣ ಹಳಯ್ಯನವರ ಜಯಂತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಆರ್. ಕಬಾಡೆಯವರು 12ನೇ ಶತಮಾನದ ಮಹಾನ ಶರಣರಾದ ಹರಳಯ್ಯನವರ ಜೀವನ ಮತ್ತು ಸಾಧನೆ ಕುರಿತು ವಿವರವಾಗಿ ಮಾತನಾಡಿದರು. ಇನ್ನೋರ್ವ ಅತಿಥಿ ಶಾಂತಮಲ್ಲಪ್ಪ ಕಟ್ಟಿಮನಿಯವರು ಸಮಾಜದಲ್ಲಿ ಶರಣ ಹರಳಯ್ಯ ಸಮಾಜ ಬಂಧುಗಳು ಒಗ್ಗಟ್ಟಾಗಿ ಇಂತ ಮಹಾ ಕಾಯಕ ಶರಣರ ಜಯಂತ್ಯೋತ್ಸವದಲ್ಲಿ ಭಾಗಿಯಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದು. ಇನ್ನೊರ್ವ ಅತಿಥಿಗಳಾದ ಗಣೇಶ […]

ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು

ABVP Image

ವಿಜಯಪುರ: ಸಿನಿಮಾಗಳಲ್ಲಿ ನಟಿಸುವ ನಟ – ನಟಿಯರು ಹೀರೋಗಳಲ್ಲ ಅವರು ಕೇವಲ ನಟರು ಮಾತ್ರ ನಿಜವಾದ ಹೀರೋಗಳೆಂದರೆ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಹೋರಾಟಗಾರರು ಹಾಗೂ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು ಎಂದು ವಾಗ್ಮಿಗಳಾದ ಬಸವರಾಜ ಹಂಚಲಿ ಮಾತನಾಡಿದರು. ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ […]

ಗುರುದೇವಿ ಹಳ್ಳೂರಗೆ ಪಿ.ಎಚ್.ಡಿ. ಪ್ರದಾನ

PhD Award

ವಿಜಯಪುರ: ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಗುರುದೇವಿ ಹಳ್ಳೂರಗೆ (ನಂದಿನಿ ಮ. ಬಿರಾದಾರ) ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ “ಎ ಸ್ಟಡಿ ಆಫ್ ಲರ್ನಿಂಗ್ ಟೀಚಿಂಗ್ ಅಂಡ್ ಥಿಂಕಿಂಗ್ ಸ್ಟೈಲ ಆಫ್ ಪ್ರಾಸ್ಪೆಕ್ಟಿವ್ ಟೀಚರ್ಸ್ ಇನ್ನ ರಿಲೇಶನ್ ಟು ದೇಆರ್ ಟೀಚಿಂಗ್ ಕಾಂಪಿಟನ್ಸ” ಎಂಬ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ. ಇವರಿಗೆ ಮೌಲ್ಯಮಾಪನ ಕುಲ ಸಚಿವ ಹಾಗೂ ಶಿಕ್ಷಣ ಶಾಸ್ತ್ರ […]

ಕೊಳಗೇರಿ ಮಂಡಳಿ ಎಇಇ ಅಧಿಕಾರಿಯ ಬೇಜವಾಬ್ದಾರಿ

Dalit Swarajya Sena image

ವಿಜಯಪುರ: ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶಿವಾನಂದ ರಾಠೋಡ್ ಅವರಿಗೆ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳ ಪಟ್ಟಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಗೌಡಪ್ಪ ಬಡಿಗೇರ ಹೇಳಿದರು. ಸಮಸ್ಯೆಗಳು ಕೇಳಲು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಬೇಕು ಮತ್ತು ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳೆಲ್ಲವೂ ಆಲಿಸಿದ್ದೇನೆ, ಎಲ್ಲವೂ ಸುಸೂತ್ರ ವಾಗಿದೆ ಎಂದು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನಿಸುತಿದ್ದಾರೆ.ಯಾವ ಕೊಳಚೆ ಪ್ರದೇಶಗಳಿಗೂ ಬೇಟೆ ಕೊಟ್ಟು ವಾಸ್ತವ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಲಭ್ಯವಿರುವುದಿಲ್ಲ. ನಾನು ಕೂಡ […]

ವಿಜಯಪುರದಲ್ಲಿ ಏಪ್ರಿಲ್ ನಿಂದ ಭಾರತ ಜನಗಣತಿ-2027 (Census) ಆರಂಭ

Census image vijaypur

ವಿಜಯಪುರ: ನಮ್ಮ ಜನಗಣತಿ, ನಮ್ಮ ಭವಿಷ್ಯ ಧ್ಯೇಯ ವಾಕ್ಯದಡಿ ಭಾರತ ಜನಗಣತಿ-2027ರ ಮೊದಲ ಹಂತದ ಜನಗಣತಿಯನ್ನು ಏಪ್ರಿಲ್ ನಿಂದ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ. ಮೊದಲ ಹಂತ -1 ಮನೆಪಟ್ಟಿ ಮತ್ತು ಮನೆ ಗಣತಿ (ಎಚ್‍ಎಲ್‍ಒ) ಏಪ್ರಿಲ್ 1ರಿಂದ 15ರವರೆಗೆ ಇದೇ ಮೊದಲ ಬಾರಿಗೆ ಸ್ವಯಂ ಗಣತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸ್ವಯಂ ಗಣತಿ ಐಚ್ಛಿಕವಾಗಿರುತ್ತದೆ. ಕುಟುಂಬಗಳು ಮಾತ್ರ ಸ್ವಯಂ ಗಣತಿ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ. […]

ಜನಗಣತಿಗೆ (Census) ನಿಯೋಜಿಸಿದ ಸಿಬ್ಬಂದಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಿ

Census report image vijayapur

ವಿಜಯಪುರ: ಜಿಲ್ಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಭಾರತ ಜನಗಣತಿ (Census) 2027ರ ಕಾರ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಗೆ ಸೂಕ್ತ ತರಬೇತಿ ನೀಡಿ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಜನಗಣತಿ 2027ರ ಜನಗಣತಿ ಕುರಿತು ಪೂರ್ವಭಾವಿ ಸಿದ್ದತೆ ಹಾಗೂ ತರಬೇತುದಾರರಿಗೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು ಗಣತಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಕಾಲ ಕಾಲಕ್ಕೆ ನೀಡುವ ತರಬೇತಿಯ ಪ್ರಯೋಜನೆ ಪಡೆದುಕೊಂಡು ಗಣತಿ ಕಾರ್ಯವನ್ನು ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯ ನಿರ್ವಹಿಸಬೇಕು. […]

Vijayapura: 3 ದಿನದಲ್ಲಿ ಸಮೀಕ್ಷೆ ವರದಿ: ಡಿಸಿ ಸೂಚನೆ

Vijayapura image

ವಿಜಯಪುರ: ಇತ್ತೀಚಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಕೈಗೊಂಡು ಮೂರು ದಿನದೊಳಗಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು. (Vijayapura) ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಳೆ ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ರಚಿಸಿ […]