ಲೇಖನ : ‘ಗಣನಾಯಕ’ ನಾದ ‘ಗಣನಾಕ’

ಲೇಖನ image

ಗಣನಾಕ ಪೇಶ್ವೇ ಒಂದನೇ ಬಾಜೀರಾವ್ (1700-1740) ನ ಸೈನ್ಯದಲ್ಲಿ ಒಬ್ಬ ಸೈನಿಕ. ಕೋಟೆಯ ಮುಖ್ಯ ದ್ವಾರ ಕಾಯುವುದು ಆತನಿಗೆ ಒಪ್ಪಿಸಲಾದ ಕಾರ್ಯ. ಆರಡಿಗೂ ಮಿಕ್ಕಿ ಎತ್ತರದ ದೃಢ ಕಾಯ ಹೊಂದಿದ್ದ ಗಣನಾಕ (ಗಣ್ಯಾ ಮಹಾರ್) ಒಬ್ಬ ಅಪ್ರತಿಮ ಧೈರ್ಯಶಾಲಿ ಆಗಿದ್ದರಿಂದ ಆತನಿಗೆ ಕೋಟೆಯ ರಕ್ಷಣೆಯ ಭಾರವನ್ನು ಹೊರಿಸಲಾಗಿದ್ದು ಸಹಜವೇ ಆಗಿತ್ತು. ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದ ಗಣನಾಕನ ಮೇಲೆ ಅಂತಃಪುರದ ಯುವರಾಣಿಯೊಬ್ಬಳು ಮೋಹಗೊಳ್ಳುತ್ತಾಳೆ ಅದು ಆತನನ್ನು ನೋಡದೆಯೇ ಎನ್ನುವುದು ಆಶ್ಚರ್ಯ ಆದರೂ ಸತ್ಯ. ಲೇಖನ ಓದುವದು […]

ಕ್ರಾಂತಿಕಾರಿ ಸಂತ “ಚೋಖಾಮೇಳ “

ಕ್ರಾಂತಿಕಾರಿ ಸಂತ "ಚೋಖಾಮೇಳ " image

ಎಂಭತ್ತು ತೊಂಭತ್ತರ ದಶಕದಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಸಂಜೆ 6:30 ರ ಸುಮಾರಿಗೆ ಪ್ರಸಾರವಾಗುತ್ತಿದ್ದ ಮರಾಠಿ ಅಭಂಗಗಳನ್ನು ಕೇಳ್ತ ಇದ್ದವರಿಗೆ ಮಹಾರಾಷ್ಟ್ರದ ವಾರಕರಿ ಪಂಥದ ಮತ್ತು ಸಂತರ ಬಗ್ಗೆ ಪರಿಚಯ ಇದ್ದೇ ಇರುತ್ತದೆ. ಆದರೆ ಕರ್ನಾಟಕದ ಬಹಳಷ್ಟು ಜನಗಳಿಗೆ (ಬೆಂಗಳೂರು, ಮೈಸೂರು, ಬಳ್ಳಾರಿ) ಭಾಗಗಳಲ್ಲಿ ವಾರಕರಿ ಪಂಥ ಮತ್ತು ವಾರಕರಿ ಸಂತರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಈ ವಾರಕರಿ ಪಂಥ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಡೆದ ಶರಣ ಪರಂಪರೆಯ ಮುಂದುವರಿದ ಭಾಗ ಎಂದು ಹೇಳಬಹುದು. […]

ಒಂದು ಮಾತು: ಅವಳನ್ನು ದ್ವೇಷಿಸುವ ಮೊದಲು…..!

ಒಂದು ಮಾತು image

ಹೀಗೊಂದು ಮಾತು ಹೇಳಿದರೆ ನಿಮಗೆ ಬೇಸರವಾಗಲಿಕ್ಕಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಿಕ್ಕೆ ಆಗುವುದಿಲ್ಲ. ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಪ್ರತಿಯೊಬ್ಬನಲ್ಲಿಯೂ ದ್ವೇಷದ ಭಾವನೆ ಇದ್ದೇ ಇರುತ್ತದೆ. ನಾವು ದ್ವೇಷವನ್ನು ಇನ್ನೊಬ್ಬರಿಗೆ ಕೊಡುವುದಾದರೆ, ಅದನ್ನು ಪ್ರೀತಿಯಿಂದಲೇ ಕೊಡಬೇಕು. ಆ ದ್ವೇಷವನ್ನು ಸ್ವೀಕರಿಸಲು ಸಾಧ್ಯವಿದೆ. ನಾನೀಗ ಮತ್ತೊಂದು ಮಾತು ಹೇಳಿದರೆ ನಿಮಗೆ ಆಘಾತವಾಗಬಹದು.ಒಂದು ಮಾತು “ಪ್ರೀತಿಯನ್ನು ಪ್ರೀತಿಯಿಂದ ಕೊಟ್ಟರೆ ಈ ಪ್ರಪಂಚದಲ್ಲಿ ಎಷ್ಟೋ ಜನ ದ್ವೇಷಿಸುವವರು ಇದ್ದಾರೆ” ಇದೆಲ್ಲ ಯಾಕೆ ಹೀಗೆ ಆಗುತ್ತದೆ ಎಂದರೆ ನಮ್ಮ ಪ್ರೀತಿಯಲ್ಲಿ ನಮಗೆ ತಿಳಿಯದ […]