‘ನಿವಾರ್ ಸೈಕ್ಲೋನ್’ ರೆಡ್ ಅಲರ್ಟ್

ಮೈಸೂರು ನ.25: ನಿವಾರ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿ ದಾಟಿ ಬರುವ ಮುನ್ಸೂಚೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ನೇಚರಿಕಾ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ‘ನಾವು ಚಂಡಮಾರುತವನ್ನು ನಿಲ್ಲಿಸಬಹುದೇ ? ಸಾಧ್ಯವಿಲ್ಲ . ಗರಿಷ್ಕ ಹಾನಿಗಳನ್ನು ತಪ್ಪಿಸಲು ತಡೆಗಟ್ಟುವ ಕ್ರಮ ಕೈಗೊಳ್ಳುವ ಕೆಲಗಳನ್ನು ಮಾಡಬಹುದು , ಕರಾವಳಿ ಕರ್ನಾಟಕದಲ್ಲಿ ರೆಡ್ ಅಲರ್ಟ್ ಘೋಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ವೇಳೆ ಕ್ಯಾಬಿನೆಟ್ ವಿಸ್ತರಣೆ ಸಂಬಂಧಿಸಿದಂತೆ […]
ನಿರುದ್ಯೋಗಿಗಳಿಗೊಂದು ಅವಕಾಶ

ವಿಜಯಪುರ ಸೆ.12: ಜಿಲ್ಲೆ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ಅವತಾರ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್ಸುಗಳ ಮುಂಗಡ ಟಿಕೆಟ್ ಕೌಂಟರ್ ನೀಡುವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಈ ಮೊದಲು ಟೆಂಡರ್ ಮುಖಾಂತರ ಖಾಸಗಿ ಟಿಕೆಟ್ ಏಜೆಂಟರ್ ನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಹಿಂಪಡೆದು ಪ್ರಸ್ತುತ ಖಾಸಗಿ ಅವತಾರ ಟಿಕೆಟ್ ಏಜೆಂಟರ್ ನ್ನು ವಾಕ್ ಇನ್ ಪದ್ಧತಿಯನ್ವಯ ಆಯ್ಕೆಮಾಡಲಾಗುವುದು ಎಂದು ವಿಜಯಪುರ ವಿಭಾಗ, ಈ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕ ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ಯುವಕ […]
ವಿಜಯಪುರ: ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಧಾಬಾ, ಹೊಟೇಲ್ ಗಳ ಮೇಲೆ ದಾಳಿ; 51 ಜನ ಬಂಧನ

ವಿಜಯಪುರ (ಸಪ್ಟಂಬರ) 07: ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ದಾಬಾ, ಹೋಟೆಲ್ ಗಳ ಮೇಲೆ ದಾಳಿ ಮಾಡಿರುವ ಪೊಲೀಸರು ಒಟ್ಟು 138 ಸ್ಥಳಗಳಲ್ಲಿ ಅಕ್ರಮ ಸರಾಯಿ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. ಮಾರಾಟ ಮಾಡುತ್ತಿರುವವರ ವಿರುದ್ದ ದಾಳಿ ಮಾಡಿ ಕಾನೂನು ಕ್ರಮ ಜರುಗಿಸಿದ್ದು, ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 38 ದಾಬಾ, 05 ಹೋಟೆಲ್ ಹಾಗೂ 06 ಗ್ರಾಮಗಳಲ್ಲಿ ಹೀಗೆ ಒಟ್ಟು 49 ಪ್ರಕರಣಗಳನ್ನು ಅಬಕಾರಿ ಕಾಯ್ದೆಯಡಿಯಲ್ಲಿ ದಾಖಲಿಸಿಕೊಂಡು, 51 ಜನ ಆರೋಪಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 128.74 […]
ಮನೆಗಳಲ್ಲೇ ಯೋಗಾಭ್ಯಾಸ ಮಾಡುವವರಿಗಾಗಿ ಅರಮನೆ ಆವರಣದಲ್ಲಿ ಪ್ರದರ್ಶನ, ಫೇಸ್ಬುಕ್ ಲೈವ್ ನಲ್ಲಿ ನೇರ ಪ್ರಸಾರ

ಮೈಸೂರು ಜೂನ್.21: ಕೋವಿಡ್-೧೯ ಹಿನ್ನಲೆಯಲ್ಲಿ ಮನೆ ಮನೆಗಳಲ್ಲೇ ಯೋಗಾಸನ ಮಾಡುವ ಮೂಲಕ ಮೈಸೂರಿನಲ್ಲಿ 6ನೇ ಅಂತಾರಾಷ್ಟ್ರೀಯ ಯೋಗದಿನ ಆಚರಿಸಲಾಯಿತು. ಮನೆಗಳಲ್ಲಿ ಯೋಗಾಭ್ಯಾಸ ಮಾಡುವವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಆವರಣದಲ್ಲಿ ಭಾನುವಾರ ಯೋಗಾಸನ ಪ್ರದರ್ಶನ ಆಯೋಜಿಸಿ ಫೇಸ್ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಯಿತು. ಈ ವೇಳೆಯಲ್ಲಿ ಜಿಎಸ್‌ಎಸ್ ಯೋಗ ಫೌಂಡೇಶನ್‌ನ ಶ್ರೀಹರಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಅರಮನೆಯ ಆವರಣದಲ್ಲಿ ಸಾವಿರಾರು ಯೋಗ ಪಟುಗಳೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಆದರೆ […]
ಮಾಜಿ ಮುಖ್ಯಮಂತ್ರಿ ಜಯಲಲಿತಾರ 900 ರೂ. ಕೋಟಿ ಆಸ್ತಿ ಯಾರ ಪಾಲಿಗೆ!

ಚನ್ನೈ ಮೇ. 28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ 900 ರೂ. ಕೋಟಿ ಮೌಲ್ಯದ ಆಸ್ತಿಗೆ ಅವರ ಬಂಧುಗಳಾದ ಸೋದರ ಸೊಸೆ ಜೆ.ದೀಪಾ ಹಾಗೂ ಸೋದರ ಅಳಿಯ ಜೆ.ದೀಪಕ್ ‘ಕಾನೂನುಬದ್ಧ ವಾರಸುದಾರರು’ ಎಂದು ಮದ್ರಾಸ್ ಹೈಕೋರ್ಟ್ ಪರಿಗಣಿಸಿದೆ. ಜಯಾಲಲಿತಾರ ಸಾವಿನ ನಂತರ ಅವರ ಆಸ್ತಿಯನ್ನು ಗೆಳತಿ ಶಶಿಕಲಾ ಅನುಭವಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಜಯಾರ ಸೋದರ ಅಳಿಯ ಹೈಕೋರ್ಟ್ ಮೇಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ನ್ಯಾಯಮೂರ್ತಿ ಅಬ್ದುಲ್ ಖೂದ್ದಸ್ ಅವರ ಪೀಠ […]
ಐದನೇ ಹಂತದ ಲಾಕ್ ಡೌನ್ ಜಾರಿಯಾಗುತ್ತಾ ?

ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳು, ಹಿರಿಯರು, ವಯಸ್ಕರು ಹೀಗೆ ಯಾರನ್ನೂ ಬಿಡದೆ ತನ್ನ ಸುಳಿಗೆ ಸೆಳೆಯುತ್ತಿದೆ ಕೊರೋನಾ ಎಂಬ ಮಹಾ ವೈರಸ್. ಈ ವೈರಸನ್ನು ಕಟ್ಟಿಹಾಕಲು ಇಡೀ ದೇಶವನ್ನೇ ನಾಲ್ಕು ಸಲ ಲಾಕ್ ಡೌನ್ ಮಾಡಿದರೂ ವೈರಸ್ ನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ ದೇಶದ ಜನ. ಮೇ 31 ಕ್ಕೆ ನಾಲ್ಕನೇ ಲಾಕ್ ಡೌನ್ ಅಂತ್ಯವಾಗಬೇಕಿದೆ. ಲಾಕ್ ಡೌನ್ ಸಮಯದಲ್ಲಿ ಒಂದು ಹಂತಕ್ಕೆ ಇದ್ದ ಸೋಂಕಿತರ ಸಂಖ್ಯೆ, ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾದ […]