Belagavi News : ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಸಂವಿಧಾನ ಜಾರಿಯಾಗಿ 75 ವರ್ಷ ಆಯ್ತು. 75 ವರ್ಷಗಳಲ್ಲಿ ಬಡವರು ಬಡವರಾಗಿಯೇ ಉಳಿಯಬೇಕಾ..? ಎಲ್ಲರಿಗೂ ಸಮಾನತೆ ಬರಬೇಕು. ಇನ್ನೂ ಜಾತಿಗೆ ಅಂಟಿಕೊಂಡೇ ಇರಬೇಕಾ.? ಮುಸ್ಲಿಂರು, ಹಿಂದುಳಿದವರು ಸೇರಿ ಎಲ್ಲ ಜಾತಿಯವರಿಗೆ ಶಿಕ್ಷಣ ಸಿಗಬೇಕಾ ಬೇಡವಾ..? ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಬೇಕೋ ಬೇಡವೋ ಎಂದು ಪ್ರಶ್ನಿಸುವ ಮೂಲಕ ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ siddaramaiah ಸಮರ್ಥಿಸಿಕೊಂಡರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ಜಾತಿಗೂ ಅನ್ಯಾಯ ಆಗಬಾರದು […]
ಪ್ರಧಾನಿ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ಗುಟ್ಟು

ಭಾರತ ವಾಸಿಗಳಿಗೆ ಪ್ರಧಾನಿ ಮೋದಿಯವರ ಭಾಷಣ ಅಪರಿಚಿತ ಏನಲ್ಲ. ಮೋದಿಯವರು ಭಾಷಣ ಕೇಳುವ ಪ್ರತಿಯೊಬ್ಬ ವ್ಯಕ್ತಿ ಕಿವಿ ಗಡಚಿಕ್ಕುವಂತೆ ಕರತಾಡನ ಮಾಡದೇ ಇರಲಾರ ಎನ್ನುವಷ್ಟರಮಟ್ಟಿಗೆ ಮೋದಿಯವರ ಭಾಷಣ ರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ರಹಸ್ಯ ಬಯಲಾಗಿದೆ. ಟೆಲಿಪ್ರಾಂಪ್ಟರ್ _ ಹೌದು ಇಷ್ಟು ದಿವಸ ಮೋದಿಯವರು ಅಧ್ಬುತ ಭಾಷಣ ಕಲೆ ಹೊಂದಿದ್ದಾರೆ ಎಂದುಕೊಂಡಿದ್ದ ಭಾರತಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನಿ ಮೋದಿಯವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವ […]
ಪ್ರಧಾನಿ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ಗುಟ್ಟು

ಭಾರತ ವಾಸಿಗಳಿಗೆ ಪ್ರಧಾನಿ ಮೋದಿಯವರ ಭಾಷಣ ಅಪರಿಚಿತ ಏನಲ್ಲ. ಮೋದಿಯವರು ಭಾಷಣ ಕೇಳುವ ಪ್ರತಿಯೊಬ್ಬ ವ್ಯಕ್ತಿ ಕಿವಿ ಗಡಚಿಕ್ಕುವಂತೆ ಕರತಾಡನ ಮಾಡದೇ ಇರಲಾರ ಎನ್ನುವಷ್ಟರಮಟ್ಟಿಗೆ ಮೋದಿಯವರ ಭಾಷಣ ರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ರಹಸ್ಯ ಬಯಲಾಗಿದೆ. ಟೆಲಿಪ್ರಾಂಪ್ಟರ್ _ ಹೌದು ಇಷ್ಟು ದಿವಸ ಮೋದಿಯವರು ಅಧ್ಬುತ ಭಾಷಣ ಕಲೆ ಹೊಂದಿದ್ದಾರೆ ಎಂದುಕೊಂಡಿದ್ದ ಭಾರತಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನಿ ಮೋದಿಯವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವ […]
ಅಥಣಿ ತಾಲೂಕಾ ಗೃಹರಕ್ಷಕ ಸಿಬ್ಬಂದಿಯಿಂದ ಹೀಗೊಂದು ಶ್ಲಾಘನೀಯ ಕಾರ್ಯ

ಬೆಳಗಾವಿ ಮೇ 17: ಪ್ರಕೃತಿ ವಿಕೋಪ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಜನಸೇವೆ ಸಲ್ಲಿಸುವಲ್ಲಿ ಯಾವತ್ತೂ ಮುಂಚೂಣಿಯಲ್ಲಿ ಇರುವ ಒಂದು ಇಲಾಖೆ ಅಂದರೆ ಅದು ನಿಸ್ಸಂದೇಹವಾಗಿ ಗೃಹರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆ ಎಂದು ಹೇಳಬಹುದು. ಏಕೆಂದರೆ ಪೋಲಿಸ್ ಇಲಾಖೆಗೆ ಹೆಚ್ಚಿನ ಒತ್ತಡ ಇರುವ ಸಂದರ್ಭಗಳಲ್ಲಿ ಅವರ ನೆರವಿಗೆ ಬರುವುದೇ ಗೃಹರಕ್ಷಕರು.ಇದೀಗ ದೇಶದಲ್ಲಿ ಕೋವಿಡ್ ನ ಎರಡನೆ ಅಲೆ ಭೀಕರ ಸ್ವರೂಪ ಪಡೆದಿರುವ ಈ ಸಂದರ್ಭದಲ್ಲಿ ರಾಜ್ಯ ಗೃಹರಕ್ಷಕ ದಳ ಇಡೀ ಕರ್ನಾಟಕದಾದ್ಯಂತ ನಿಷ್ಕಾಮ ಸೇವೆ (ಸಂಬಳ ರಹಿತ) […]
ಸುವರ್ಣ ಸೌಧವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ: ಸರ್ಕಾರಕ್ಕೆ ಶಾಸಕಿ ಅಂಜಲಿ ನಿಂಬಾಳಕರ್ ಪತ್ರ

ಬೆಳಗಾವಿ ಮೇ 07: ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಬೆಳಗಾವಿಯ ಸುವರ್ಣ ಸೌಧವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆ ಮಾಡಿಕೊಳ್ಳುವಂತೆ ಕಾಂಗ್ರೆಸ್ ನ ಬೆಳಗಾವಿ ಖಾನಾಪುರ ಕ್ಷೇತ್ರದ ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳಕರ್ ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ದಿನದ ಸೋಂಕಿತರ ಸಂಖ್ಯೆ ಸಾವಿರ ಸಮೀಪಕಕೆ ಬಂದಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಯುಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಅಧಿವೇಶನಗಳನ್ನು ನಡೆಸದೆ ವ್ಯರ್ಥವಾಗಿ ಕೋಟ್ಯಂತರ ರೂಪಾಯಿ […]
ಅರಿಶಿನ ಲಾರಿ ದರೋಡೆ: 7 ಜನರ ಬಂದನ

ಬೆಳಗಾವಿ ಜೂ.16: ಏಳು ಜನ ದರೋಡೆಕೋರರನ್ನು ಬಂಧಿಸುವ ಮೂಲಕ ಅರಿಶಿನ ಲಾರಿ ಕಳ್ಳತನ ಹಾಗೂ ದರೋಡೆಗೆ ಸಂಬಂಧಿಸಿದಂತೆ ಬಂಧಿತರಿಂದ 1.3 ಕೋಟಿ ಮೌಲ್ಯದ ವಸ್ತುಗಳನ್ನು ಚಿಕ್ಕೋಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರು ಅಥಣಿ ತಾಲೂಕಿನ ಸಂಬರಗಿ ಗ್ರಾಮದವರು ಎಂದು ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಕುರಿತು ಮಾಹಿತಿ ನೀದ್ದಾರೆ. ಜೂ.07 ರಂದು ತಮಿಳುನಾಡಿನ ಎಂ. ಚಿನ್ನಸ್ವಾಮಿ ಎಂಬುವರು ಅರಿಶಿಣ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುವಾಗ ಕಬ್ಬೂರದಿಂದ 2 ಕಿ.ಮೀ ದೂರದಲ್ಲಿ ದರೋಡೆಕೋರರು ಚಾಲಕ ಮತ್ತು ಕ್ಲೀನರ್‍ನನ್ನು […]
ಐದನೇ ತರಗತಿಯವರೆಗೆ ಮಾತ್ರ ಆನ್ ಲೈನ್ ಶಿಕ್ಷಣ ರದ್ದು: ಸಚಿವ ಸುರೇಶ ಕುಮಾರ

ಬೆಂಗಳೂರು ಜೂ.11. ಏಳನೇ ತರಗತಿಯವರೆಗಿನ ಆನ್‍ಲೈನ ಶಿಕ್ಷಣವನ್ನು ನೀಡುವಂತಿಲ್ಲ ಎಂದು ಸರಕಾರ ತಿರ್ಮಾನಿಸಿದೆ ಎಂಬಂತಹ ಸುದ್ದಿಯನ್ನು ಶಿಕ್ಷಣ ಸಚಿವ ಸುರೇಶ ಕುಮಾರ ತಳ್ಳಿಹಾಕಿದ್ದಾರೆ. ನರ್ಸರಿ ಮತ್ತು ಒಂದರಿಂದ ಐದನೇ ತರಗತಿಯವರೆಗೆ ಮಾತ್ರ ಆನ್‍ಲೈನ್ ತರಗತಿಗಳನ್ನು ನಿಷೇಧಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಏಳನೇ ತರಗತಿವರೆಗೆ ಆನ್‍ಲೈನ್ ಕ್ಲಾಸಗಳಿಗೆ ಅವಕಾಶ ನೀಡಬಾರದು ಎಂದು ಕೆಲ ಸಂಪುಟ ಸಚಿವರ ಸಲಹೆಯಾಗಿದೆ ಎಂದು ತಮ್ಮ ಟ್ವೀಟ್‍ನಲ್ಲಿ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ. Karnataka Govt has decided to stop […]
ಮಾಜಿ ಮುಖ್ಯಮಂತ್ರಿ ಜಯಲಲಿತಾರ 900 ರೂ. ಕೋಟಿ ಆಸ್ತಿ ಯಾರ ಪಾಲಿಗೆ!

ಚನ್ನೈ ಮೇ. 28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ 900 ರೂ. ಕೋಟಿ ಮೌಲ್ಯದ ಆಸ್ತಿಗೆ ಅವರ ಬಂಧುಗಳಾದ ಸೋದರ ಸೊಸೆ ಜೆ.ದೀಪಾ ಹಾಗೂ ಸೋದರ ಅಳಿಯ ಜೆ.ದೀಪಕ್ ‘ಕಾನೂನುಬದ್ಧ ವಾರಸುದಾರರು’ ಎಂದು ಮದ್ರಾಸ್ ಹೈಕೋರ್ಟ್ ಪರಿಗಣಿಸಿದೆ. ಜಯಾಲಲಿತಾರ ಸಾವಿನ ನಂತರ ಅವರ ಆಸ್ತಿಯನ್ನು ಗೆಳತಿ ಶಶಿಕಲಾ ಅನುಭವಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಜಯಾರ ಸೋದರ ಅಳಿಯ ಹೈಕೋರ್ಟ್ ಮೇಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ನ್ಯಾಯಮೂರ್ತಿ ಅಬ್ದುಲ್ ಖೂದ್ದಸ್ ಅವರ ಪೀಠ […]
ವಿಜಯಪುರ: ಮುಂದುವರಿದ ಕೊರೋನಾ ಅಟ್ಟಹಾಸ; ಇಂದು ಐವರಲ್ಲಿ ಪಾಸಿಟಿವ್

ವಿಜಯಪುರ ಮೇ.26: ಮಹಾರಾಷ್ಟ್ರದಿಂದ ಆಗಮಿಸಿದ್ದ 5 ಜನರಲ್ಲಿ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಜಿಲ್ಲೆಗೆ ಆಮಿಸಿರುವ 18 ವರ್ಷದ ವಯೋಮಾನದ ರೋಗಿ ಸಂಖ್ಯೆ 2203 (ಯುವಕ), 34 ವಯೋಮಾನದ ರೋಗಿಸಂಖ್ಯೆ 2204 (ಪುರುಷ), 30 ವರ್ಷ ವಯೋಮಾನದ ರೋಗಿ ಸಂಖ್ಯೆ 2205 (ಪುರುಷ), 60 ವರ್ಷ ವಯೋಮಾನದ ರೋಗಿಸಂಖ್ಯೆ 2206 (ವೃದ್ಧ), 17 ವರ್ಷ ವಯೋಮಾನದ ರೋಗಿಸಂಖ್ಯೆ 2207 (ಯುವಕ) ಈ 5 ಪಾಸಿಟಿವ್ ರೋಗಿಗಳ ಪೈಕಿ ನಾಲ್ವರು ಮಹಾರಾಷ್ಟ್ರದ ಮುಂಬೈಯಿಂದ ಆಮಿಸಿದ್ದು, ಓರ್ವ ಮಹಾರಾಷ್ಟ್ರದ ಸೊಲ್ಲಾಪೂರದಿಂದ ಆಗಮಿಸಿದ್ದಾರೆ. […]
ಐದನೇ ಹಂತದ ಲಾಕ್ ಡೌನ್ ಜಾರಿಯಾಗುತ್ತಾ ?

ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳು, ಹಿರಿಯರು, ವಯಸ್ಕರು ಹೀಗೆ ಯಾರನ್ನೂ ಬಿಡದೆ ತನ್ನ ಸುಳಿಗೆ ಸೆಳೆಯುತ್ತಿದೆ ಕೊರೋನಾ ಎಂಬ ಮಹಾ ವೈರಸ್. ಈ ವೈರಸನ್ನು ಕಟ್ಟಿಹಾಕಲು ಇಡೀ ದೇಶವನ್ನೇ ನಾಲ್ಕು ಸಲ ಲಾಕ್ ಡೌನ್ ಮಾಡಿದರೂ ವೈರಸ್ ನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ ದೇಶದ ಜನ. ಮೇ 31 ಕ್ಕೆ ನಾಲ್ಕನೇ ಲಾಕ್ ಡೌನ್ ಅಂತ್ಯವಾಗಬೇಕಿದೆ. ಲಾಕ್ ಡೌನ್ ಸಮಯದಲ್ಲಿ ಒಂದು ಹಂತಕ್ಕೆ ಇದ್ದ ಸೋಂಕಿತರ ಸಂಖ್ಯೆ, ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾದ […]