13 ವರ್ಷದ ಮಗುವಿನ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ

ಕಲಬುರ್ಗಿ: 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 70 ವರ್ಷದ ವ್ಯಕ್ತಿಯನ್ನು ಗುರುವಾರ ಕಲಬುರಗಿ ಜಿಲ್ಲೆಯ ರೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಆರೋಪಿ ಬಾಲಕಿಗೆ ತಿನ್ನಲು ಕೊಡುವದಾಗಿ ಆಸೆ ತೋರಿಸಿ ತನ್ನ ಹೊಲದಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಸಂಜೆ ತಂದೆ-ತಾಯಿ ಕೆಲಸ ಮುಗಿಸಿ ಹಿಂತಿರುಗಿದಾಗ ತಮ್ಮ ಮಗಳು ಅಳುತ್ತಿರುವುದು ಕಂಡು ಬಂತು. ಬಲವಂತದ ನಂತರ, ಮಗು ಭಯಾನಕ ಘಟನೆಯನ್ನು ವಿವರಿಸಿತು ಎಂದು ಹೆತ್ತವರು ತಿಳಿಸಿದ್ದಾರೆ. ಮರುದಿನ ಪೋಷಕರು ದೂರು […]
ನಿರುದ್ಯೋಗಿಗಳಿಗೊಂದು ಅವಕಾಶ

ವಿಜಯಪುರ ಸೆ.12: ಜಿಲ್ಲೆ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ಅವತಾರ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್ಸುಗಳ ಮುಂಗಡ ಟಿಕೆಟ್ ಕೌಂಟರ್ ನೀಡುವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಈ ಮೊದಲು ಟೆಂಡರ್ ಮುಖಾಂತರ ಖಾಸಗಿ ಟಿಕೆಟ್ ಏಜೆಂಟರ್ ನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಹಿಂಪಡೆದು ಪ್ರಸ್ತುತ ಖಾಸಗಿ ಅವತಾರ ಟಿಕೆಟ್ ಏಜೆಂಟರ್ ನ್ನು ವಾಕ್ ಇನ್ ಪದ್ಧತಿಯನ್ವಯ ಆಯ್ಕೆಮಾಡಲಾಗುವುದು ಎಂದು ವಿಜಯಪುರ ವಿಭಾಗ, ಈ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆ ಹಾಗೂ ತಾಲೂಕ ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ಯುವಕ […]
ವಿಜಯಪುರ: ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಧಾಬಾ, ಹೊಟೇಲ್ ಗಳ ಮೇಲೆ ದಾಳಿ; 51 ಜನ ಬಂಧನ

ವಿಜಯಪುರ (ಸಪ್ಟಂಬರ) 07: ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ದಾಬಾ, ಹೋಟೆಲ್ ಗಳ ಮೇಲೆ ದಾಳಿ ಮಾಡಿರುವ ಪೊಲೀಸರು ಒಟ್ಟು 138 ಸ್ಥಳಗಳಲ್ಲಿ ಅಕ್ರಮ ಸರಾಯಿ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. ಮಾರಾಟ ಮಾಡುತ್ತಿರುವವರ ವಿರುದ್ದ ದಾಳಿ ಮಾಡಿ ಕಾನೂನು ಕ್ರಮ ಜರುಗಿಸಿದ್ದು, ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 38 ದಾಬಾ, 05 ಹೋಟೆಲ್ ಹಾಗೂ 06 ಗ್ರಾಮಗಳಲ್ಲಿ ಹೀಗೆ ಒಟ್ಟು 49 ಪ್ರಕರಣಗಳನ್ನು ಅಬಕಾರಿ ಕಾಯ್ದೆಯಡಿಯಲ್ಲಿ ದಾಖಲಿಸಿಕೊಂಡು, 51 ಜನ ಆರೋಪಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 128.74 […]
ಕಲಬುರ್ಗಿಯಲ್ಲಿ ರೌಡಿಶೀಟರ್ ಹತ್ಯೆ: ಸ್ನೇಹಿತರಿಂದಲೇ ಸ್ಕೇಚ್

ಕಲಬುರ್ಗಿ ಜೂನ್ .20: ಕಲಬುರ್ಗಿಯಲ್ಲಿ ರೌಡಿಶೀಟರನನ್ನು ಮಾರಕಾಸ್ರ್ತಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಕಲಬುರ್ಗಿ ನಗರದ ರಿಂಗ್ ರಸ್ತೆಯ ಪೀರ ಬಂಗಾಲಿ ಮೈದಾನದಲ್ಲಿ ಘಟನೆ ನಡೆದಿದೆ. ಕೊಲೆಯಾದ ರೌಡಿಶೀಟರನನ್ನು ಹಸನ್ ಅಲಿ(24) ಎಂದು ಗುರುತಿಸಲಾಗಿದೆ. ಸ್ನೇಹಿತರ ನಡುವೆ ಗಲಾಟೆ ಜೋರಾಗಿ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊಲೆಯಾದ ಹಸನ್ ಅಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ಮೇಲೆ ಕೊಲೆ ಪ್ರಕರಣ, ಬೈಕ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. […]
ಮಾಜಿ ಮುಖ್ಯಮಂತ್ರಿ ಜಯಲಲಿತಾರ 900 ರೂ. ಕೋಟಿ ಆಸ್ತಿ ಯಾರ ಪಾಲಿಗೆ!

ಚನ್ನೈ ಮೇ. 28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ 900 ರೂ. ಕೋಟಿ ಮೌಲ್ಯದ ಆಸ್ತಿಗೆ ಅವರ ಬಂಧುಗಳಾದ ಸೋದರ ಸೊಸೆ ಜೆ.ದೀಪಾ ಹಾಗೂ ಸೋದರ ಅಳಿಯ ಜೆ.ದೀಪಕ್ ‘ಕಾನೂನುಬದ್ಧ ವಾರಸುದಾರರು’ ಎಂದು ಮದ್ರಾಸ್ ಹೈಕೋರ್ಟ್ ಪರಿಗಣಿಸಿದೆ. ಜಯಾಲಲಿತಾರ ಸಾವಿನ ನಂತರ ಅವರ ಆಸ್ತಿಯನ್ನು ಗೆಳತಿ ಶಶಿಕಲಾ ಅನುಭವಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಜಯಾರ ಸೋದರ ಅಳಿಯ ಹೈಕೋರ್ಟ್ ಮೇಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ನ್ಯಾಯಮೂರ್ತಿ ಅಬ್ದುಲ್ ಖೂದ್ದಸ್ ಅವರ ಪೀಠ […]
ವಿಜಯಪುರ: ಮುಂದುವರಿದ ಕೊರೋನಾ ಅಟ್ಟಹಾಸ; ಇಂದು ಐವರಲ್ಲಿ ಪಾಸಿಟಿವ್

ವಿಜಯಪುರ ಮೇ.26: ಮಹಾರಾಷ್ಟ್ರದಿಂದ ಆಗಮಿಸಿದ್ದ 5 ಜನರಲ್ಲಿ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಜಿಲ್ಲೆಗೆ ಆಮಿಸಿರುವ 18 ವರ್ಷದ ವಯೋಮಾನದ ರೋಗಿ ಸಂಖ್ಯೆ 2203 (ಯುವಕ), 34 ವಯೋಮಾನದ ರೋಗಿಸಂಖ್ಯೆ 2204 (ಪುರುಷ), 30 ವರ್ಷ ವಯೋಮಾನದ ರೋಗಿ ಸಂಖ್ಯೆ 2205 (ಪುರುಷ), 60 ವರ್ಷ ವಯೋಮಾನದ ರೋಗಿಸಂಖ್ಯೆ 2206 (ವೃದ್ಧ), 17 ವರ್ಷ ವಯೋಮಾನದ ರೋಗಿಸಂಖ್ಯೆ 2207 (ಯುವಕ) ಈ 5 ಪಾಸಿಟಿವ್ ರೋಗಿಗಳ ಪೈಕಿ ನಾಲ್ವರು ಮಹಾರಾಷ್ಟ್ರದ ಮುಂಬೈಯಿಂದ ಆಮಿಸಿದ್ದು, ಓರ್ವ ಮಹಾರಾಷ್ಟ್ರದ ಸೊಲ್ಲಾಪೂರದಿಂದ ಆಗಮಿಸಿದ್ದಾರೆ. […]
ಕೊರೋನಾ ಸೋಂಕಿನಿಂದ ಗುಣಮುಖ, ಮೂವರು ಆಸ್ಪತ್ರೆಯಿಂದ ಬಿಡುಗಡೆ

ಕಲಬುರಗಿ.ಏ.24: ಕೊರೋನಾ ಸೋಂಕಿಗೆ ತುತ್ತಾಗಿ ಇ.ಎಸ್.ಐ.ಸಿ. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಹಾಬಾದ ಪಟ್ಟಣದ ಇಬ್ಬರು ಮತ್ತು ಕಲಬುರಗಿ ನಗರದ ಓರ್ವ ರೋಗಿ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಗುರುವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ. ನವದೆಹಲಿಯ ತಬ್ಲಿಘಿ ಜಮಾ ಅತ್ ಹೋಗಿ ಬಂದಿದ್ದ ಶಹಾಬಾದ ಪಟ್ಟಣದ ಅಪ್ಪರ ಮಡ್ಡಿ ಪ್ರದೇಶದ ವ್ಯಕ್ತಿಯ ಪತ್ನಿ 60 ವಯಸ್ಸಿನ ಮಹಿಳೆ(ರೋಗಿ ಸಂ-124) ಮತ್ತು ಇವರ ಸೊಸೆ 28 ವರ್ಷದ ಯುವತಿ (ರೋಗಿ ಸಂ-174) ಹಾಗೂ ಕಲಬುರಗಿ […]