ಸ್ಮಾರಕಗಳ ಸಂರಕ್ಷಣೆ ಜೊತೆಗೆ ನಗರ ಸೌಂದರ್ಯ ಮುಖ್ಯ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

0
153

ವಿಜಯಪುರ : ನಗರದ ಸೌಂದರೀಕರಣ, ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗಾಗಿ ಕಸದ ಸೂಕ್ತ ವಿಲೇವಾರಿಯ ಜೊತೆಗೆ ಸ್ವಚ್ಛತೆಯೂ ಬಹಳ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರ ಇರುವ ಕರಿಮುದ್ದಿನ್ ಮಸೀದಿ, ಕೋಟೆ ಗೋಡೆ ಆವರಣ ಹಾಗೂ ಇತರೆ ಸ್ಮಾರಕಗಳಲ್ಲಿ ವಿಜಯಪುರ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಇಂದು ಹಮ್ಮಿಕೊಳ್ಳಲಾದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಹೆರಿಟೇಜ್ ವಾಕ್‍ನಲ್ಲಿ ಮಾತನಾಡುತ್ತಾ ಅವರು ನಗರದಲ್ಲಿ ಸ್ಮಾರಕಗಳ ಸಂರಕ್ಷಣೆಗೆ ಹಾಗೂ ಅವುಗಳ ಸರಿಯಾದ ನಿರ್ವಹಣೆಗಾಗಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದ್ದು, ಮಹಾನಗರ ಪಾಲಿಕೆಯಿಂದ ನಗರದಲ್ಲಿ ಅದರಲ್ಲೂ ವಿಶೇಷವಾಗಿ ಸ್ಮಾರಕಗಳು ಹಾಗೂ ಕೋಟೆ ಗೋಡೆ ಆವರಣದಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯಕೈಗೊಳ್ಳುವ ಮೂಲಕ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.

ಅದರಂತೆ ಆದಷ್ಟು ಬೇಗನೇ ಕೋಟೆಗೋಡೆಗಳ ಸುತ್ತಮುತ್ತಲೂ ಬೆಳೆದು ನಿಂತಿರುವ ಮುಳ್ಳಿನ ಗಿಡಗಂಟೆಗಳನ್ನು ತೆಗೆದುಹಾಕಿ, ಕೋಟೆಗೋಡೆ ಆವರಣದ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಇದು ಬಹಳ ಅಗತ್ಯವಾಗಿದ್ದು, ಈ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.

ಗಗನ್ ಮಹಲ್ ಹಾಗೂ ಕರಿಮುದ್ದಿನ್ ಮಸೀದಿ ಹತ್ತಿರದ ರಸ್ತೆಯನ್ನು ಮುಂಜಾನೆಯ ಹೊತ್ತು ವಾಹನಗಳ ದಟ್ಟನೆ ತಪ್ಪಿಸಿ, ಟ್ರಾಫಿಕ್ ಮುಕ್ತಗೊಳಿಸಿ, ಜನರಿಗೆ ವಾಕಿಂಗ್ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಯು ಒಂದು ಸವಾಲಾಗಿದ್ದು, ಆದರೆ ಅದನ್ನು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಲಾಗುವುದು. ಅಲ್ಲದೇ ಸ್ಮಾರಕಗಳ ಸುತ್ತಲೂ ಸ್ಚಚ್ಛತೆಗಾಗಿ ಯಾವುದೇ ಸ್ಮಾರಕಗಳಿಗೆ ಧಕ್ಕೆಯಾಗದಂತೆ ಕಾರ್ಯಕೈಗೊಳ್ಳಲಾಗುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ರೂಪದಲ್ಲಿ ನಿಧಿಸಂಗ್ರಹಿಸಿ, ಅದನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾಡಳಿತ ಕೈಗೊಂಡಿರುವ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವೂ ಬಹಳ ಅಗತ್ಯವಾಗಿದ್ದು, ನಗರದ ಸಾರ್ವಜನಿಕರೂ ಇದಕ್ಕೆ ಕೈಜೋಡಿಸಿ, ನಗರದ ಸ್ವಚ್ಛತೆ ಹಾಗೂ ಸ್ಮಾರಕಗಳ ಸಂರಕ್ಷಣೆಗೆ ತಮ್ಮ ಕೊಡುಗೆಯನ್ನೂ ನೀಡಬೇಕು. ಅಂತೆಯೇ ಸ್ವಚ್ಛ ಸರ್ವೇಕ್ಷಣಾ ಸರ್ವೇಯಲ್ಲಿ ನಗರದ ಜನರು ಪಾಲ್ಗೊಂಡು ಓಟಿಂಗ್ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ರೂಟ್ ಮ್ಯಾಪ್‍ಗಾಗಿ ಕುದುರೆ ಟಾಂಗಾ ಏರಿ ನಗರ ಸಂಚರಿಸಿದ ಜಿಲ್ಲಾಧಿಕಾರಿ : ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ಹೊರಗಿನಿಂದ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಿಸುವ ಹಾಗೂ ಪ್ರವಾಸೋದ್ಯಮವನ್ನು ಇನ್ನಷ್ಟು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಟಾಂಗಾ ರೂಟ್ ಮ್ಯಾಪ್‍ಗಾಗಿ ತಾವೇ ಖುದ್ದಾಗಿ ಅಧಿಕಾರಿಗಳೊಂದಿಗೆ ಟಾಂಗಾ ಏರಿ ನಗರದ ಪ್ರಮುಖ ಪ್ರವಾಸಿ ತಾಣಗಳ ರಸ್ತೆಗಳಲ್ಲಿ ಸಂಚರಿಸಿದರು.

ಟಾಂಗಾ ರೂಪ್‍ಗಾಗಿ ಗೋಲಗುಂಜಬ್‍ದಿಂದ ಬಾರಾಕಮಾನ್, ಜೋಡಗುಮ್ಮಟದಿಂದ ದಖನಿ ಇದ್ಗಾ, ಇಬ್ರಾಹೀಂ ರೋಜಾ, ತಾಜಬಾವಡಿ, ಉಪ್ಪಲಿ ಬುರ್ಜ, ಜುಮ್ಮಾ ಮಸೀದಿ ಸೇರಿದಂತೆ ಸ್ಮಾರಕಗಳ ಹತ್ತಿರದ ಇನ್ನೀತರ ರಸ್ತೆಗಳಲ್ಲಿ ಸಂಚರಿಸಿದರು.
ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ನಗರದ ರಸ್ತೆಗಳನ್ನು ದುರಸ್ಥಿಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಹದಗೆಟ್ಟ ರಸ್ತೆಗಳ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಕೈಗೊಂಡು, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಹಾಗೆಯೇ ಈ ಮಾರ್ಗಗಳಲ್ಲಿ ಸೂಕ್ತ ಟಾಂಗಾರೂಟ್ ಮ್ಯಾಪ್ ನಿರ್ಮಿಸುವಂತೆ ಹಾಗೂ ಕೆಲವು ಕಡೆಗಳಲ್ಲಿ ಇನ್ನಷ್ಟು ಗೈಡ್‍ಗಳನ್ನು ನಿಯೋಜಿಸಿ, ಅವರಿಗೆ ಅಗತ್ಯ ತರಬೇತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಪೀಟರ್ ಅಲೆಗ್ಸಾಂಡರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಮಲೋಚಕ ಅನಿಲಕುಮಾರ್ ಬಣಜಿಗೇರ್, ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ್, ಉಪ ಆಯುಕ್ತ ಮಹಾವೀರ ಬೊರನ್ನವರ್, ವಿಠ್ಠಲ್ ಹೊನ್ನಳ್ಳಿ, ಮಹಾನಗರ ಪಾಲಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು


ambedkar image

LEAVE A REPLY

Please enter your comment!
Please enter your name here