ವಿಜಯಪುರ ಯೋಧ ಹೃದಯಾಘಾತದಿಂದ ಸಾವು; ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕೊಲ್ಹಾರ ಗ್ರಾಮದ ಸಿ.ಆರ್.ಪಿ.ಎಫ್ ಯೋಧ ಸಬ್ ಇನ್ಸಪೆಕ್ಟರ್ ಭೀಮಪ್ಪ ಮ. ಕೋಲ್ಕಾರ ಹೃದಯಾಘಾತವಾಗಿ ವೀರಮರಣ ಹೊಂದಿದ್ದಾರೆ.

0
66

ವಿಜಯಪುರ: ಕೊಲ್ಹಾರ ಗ್ರಾಮದ ಸಿ.ಆರ್.ಪಿ.ಎಫ್ ಯೋಧ ಸಬ್ ಇನ್ಸಪೆಕ್ಟರ್ ಭೀಮಪ್ಪ ಮ. ಕೋಲ್ಕಾರ ಅವರು ಆಸ್ಸಾಂನ ಜೈಸಾಗರ, ಶಿವಸಾಗರ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನ.30 ರಂದು ಮಧ್ಯಾಹ್ನ 3-30 ಕ್ಕೆ ಹೃದಯಾಘಾತವಾಗಿ ವೀರಮರಣ ಹೊಂದಿದ್ದಾರೆ ಮೃತರಿಗೆ ಪತ್ನಿ ಒರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಇದ್ದಾರೆ.

ಮೃತರ ಅಂತ್ಯಕ್ರಿಯೆ ವಿಜಯಪುರದಲ್ಲಿ ಇಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತ, ಪೋಲಿಸ ಇಲಾಖೆ, ಹಾಗೂ ಯಲಹಂಕ ಸಿ.ಆರ್.ಪಿ.ಎಫ್ ಗ್ರೂಪ್ ಸೆಂಟರ್‍ನ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿ ಮೃತರಿಗೆ ಗೌರವ ವಂದನೆಗಳನ್ನು ಸಲ್ಲಿಸಲಾಯಿತು. ನಗರ ಶಾಸಕರಾದ ಬಸನಗೌಡ ಪಾಟೀಲ(ಯತ್ನಾಳ), ವಿಜುಗೌಡ ಪಾಟೀಲ, ತಹಶೀಲ್ದಾರ ಸಿದ್ದು ಭೋಸಗಿ, ಆರ್.ಎಸ್.ಐ ಎಸ್.ಜಿ ಸಂಬರಗಿ, ಮಹಿಳಾ ಪಿ.ಎಸ್.ಐ ಚೌರ, ಪಿ.ಎಸ್.ಐ ಮುಶಾಪುರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು.


LEAVE A REPLY

Please enter your comment!
Please enter your name here