ಪ್ರಧಾನಿ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ಗುಟ್ಟು

ಟೆಲಿಪ್ರಾಂಪ್ಟರ್ _ ಹೌದು ಇಷ್ಟು ದಿವಸ ಮೋದಿಯವರು ಅಧ್ಬುತ ಭಾಷಣ ಕಲೆ ಹೊಂದಿದ್ದಾರೆ ಎಂದುಕೊಂಡಿದ್ದ ಭಾರತಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನಿ ಮೋದಿಯವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವ ಮಾಹಿತಿ ಇದೀಗ ಬಹಿರಂಗವಾಗಿದೆ.

0
88
ಸುರೇಂದ್ರ ಉಗಾರೆ, RTI ಕಾರ್ಯಕರ್ತರು

ಭಾರತ ವಾಸಿಗಳಿಗೆ ಪ್ರಧಾನಿ ಮೋದಿಯವರ ಭಾಷಣ ಅಪರಿಚಿತ ಏನಲ್ಲ. ಮೋದಿಯವರು ಭಾಷಣ ಕೇಳುವ ಪ್ರತಿಯೊಬ್ಬ ವ್ಯಕ್ತಿ ಕಿವಿ ಗಡಚಿಕ್ಕುವಂತೆ ಕರತಾಡನ ಮಾಡದೇ ಇರಲಾರ ಎನ್ನುವಷ್ಟರಮಟ್ಟಿಗೆ ಮೋದಿಯವರ ಭಾಷಣ ರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಇದೀಗ ಮೋದಿಯವರ ಭರ್ಜರಿ ಭಾಷಣದ ಹಿಂದಿರುವ ರಹಸ್ಯ ಬಯಲಾಗಿದೆ.

ಟೆಲಿಪ್ರಾಂಪ್ಟರ್ _ ಹೌದು ಇಷ್ಟು ದಿವಸ ಮೋದಿಯವರು ಅಧ್ಬುತ ಭಾಷಣ ಕಲೆ ಹೊಂದಿದ್ದಾರೆ ಎಂದುಕೊಂಡಿದ್ದ ಭಾರತಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಅದೇನೆಂದರೆ ಪ್ರಧಾನಿ ಮೋದಿಯವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುವ ಮಾಹಿತಿ ಇದೀಗ ಬಹಿರಂಗವಾಗಿದೆ.

ಬೆಳಗಾವಿ ಜಿಲ್ಲೆಯ ನ್ಯಾಯವಾದಿ ಮತ್ತು RTI ಕಾರ್ಯಕರ್ತರಾದ ಸುರೇಂದ್ರ ಉಗಾರೆ ಅವರು ದಿನಾಂಕ 21-10-2021 ರಂದು ನವದೆಹಲಿಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿಯವರು ಸಾರ್ವಜನಿಕ ಭಾಷಣಗಳಲ್ಲಿ ಬಳಸುವ ಟೆಲಿಪ್ರಾಂಪ್ಟರ್ ನ ಬಗ್ಗೆ ಮತ್ತು ಅದರ ನಿರ್ವಹಣಾ ವೆಚ್ಚದ ವಿವರ ನೀಡುವಂತೆ ಕೋರಿದ್ದರು. ಅಲ್ಲದೆ ಟೆಲಿಪ್ರಾಂಪ್ಟರ್ ಬಳಕೆಯಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿ ಮತ್ತು ಅವರುಗಳ ನಿರ್ವಹಣಾ ವೆಚ್ಚ ಇತರೆ ಮಾಹಿತಿ ನೀಡುವಂತೆಯೂ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರೀಯೆ ನೀಡಿದ ದೂರದರ್ಶನ ವಿಭಾಗದ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ‘ಅಖಿಲೇಶ ಕುಮಾರ ಶರ್ಮಾ’ ಅವರು ಪ್ರಧಾನಿಯವರು “ಅಟೋ ಸ್ಕ್ರಿಪ್ಟ್ ” ಕಂಪನಿಯ ಟೆಲಿಪ್ರಾಂಪ್ಟರ್ ಉಪಯೋಗಿಸುತ್ತಿರುದಾಗಿ ಮತ್ತು ದೆಹಲಿ ದೂರದರ್ಶನ ಕೇಂದ್ರದ ಮಾಹಿತಿ ತಂತ್ರಜ್ಞಾನ ನಿರ್ವಹಣಾ ವಿಭಾಗದ ಸಿಬ್ಬಂದಿಯನ್ನೇ ಪ್ರಧಾನಿಗಳ ಟೆಲಿಪ್ರಾಂಪ್ಟರ್ ಸೇವೆ ಒದಗಿಸಲು ಬಳಸಲಾಗುತ್ತಿದ್ದು 7ನೇ ವೇತನ ಆಯೋಗದ ಪ್ರಕಾರ ಅವರಿಗೆ ವೇತನ ಭತ್ಯೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಒದಗಿಸಿದ್ದಾರೆ.

ಏನಿದು ಟೆಲಿಪ್ರಾಂಪ್ಟರ್ ? ಟೆಲಿಪ್ರಾಂಪ್ಟರ್ ಒಂದು ಪಾರದರ್ಶಕ( Transparent) ಗಾಜು ಅಥವಾ ಪರದೆ ಅಂತ ಹೇಳಬಹುದು. ಇದನ್ನು ಅಂತರಾಷ್ಟ್ರೀಯ ಸೆಮಿನಾರ್ ಗಳಲ್ಲಿ ಮತ್ತು Electronic ಮಾಧ್ಯಮಗಳಲ್ಲಿ ಸುದ್ದಿ ವಾಚಕರಿಗಾಗಿ ಬಳಸಲಾಗುತ್ತದೆ. ಇದರ ಎದುರಿಗೆ ನಿಂತ ವ್ಯಕ್ತಿ ನೇರವಾಗಿ ಈ ಪರದೆಯ ಮೇಲೆ ಮೂಡುವ ಅಕ್ಷರಗಳನ್ನು ಓದುತ್ತ ಇದ್ದರೂ ನೋಡುಗರಿಗೆ ಗೊತ್ತಾಗುವುದಿಲ್ಲ. ಇದೀಗ ಇಂತಹ ಟೆಲಿಪ್ರಾಂಪ್ಟರ್ ಅನ್ನು ಪ್ರಧಾನಿಯವರು ಸಾರ್ವಜನಿಕ ಭಾಷಣಗಳಲ್ಲಿ ಬಳಸುತ್ತ ಇರುವುದು ಮತ್ತು ಅದಕ್ಕಾಗಿ ದೂರದರ್ಶನದ ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿರುವುದು ಮಾಹಿತಿಯಿಂದ ಬಹಿರಂಗಗೊಂಡಿದೆ.

ವರದಿಗಾರ.


LEAVE A REPLY

Please enter your comment!
Please enter your name here