ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರು ವಾಪಸ್;‌ ಕೃಷ್ಣರಾಜ್‌ ಸ್ಪಷ್ಟನೆ

0
15

ಬೆಂಗಳೂರು: ಸಂಗೀತ ನಿರ್ದೇಶಕ, ನಾದಾಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ದೂರನ್ನು ಕೃಷ್ಣರಾಜ್ ಎಂಬುವರು ಹಿಂಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಪೇಜಾವರ ಶ್ರೀಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಹಂಸಲೇಖ ವಿರುದ್ದ ದೂರು ದಾಖಲಾಗಿತ್ತು.

ಬ್ರಾಹ್ಮಣ ಸಂಘ ಬಸವನಗುಡಿಯಲ್ಲಿ ಹಂಸಲೇಖಾರ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಕೃಷ್ಣರಾಜ್​​ ಎಂಬುವರು ದೂರವನ್ನು ಹಿಂಪಡೆದುಕೊಂಡಿದ್ದಾರೆ. ಬ್ರಾಹ್ಮಣ ಸಂಘದ ದೂರಿಗೆ ನನ್ನ ಬೆಂಬಲವಿದೆ ಆದ ಕಾರಣ ದೂರನ್ನು ವಾಪಸ್ಸ್‌ ಪಡೆದಿದ್ದೇನೆ ಎಂದು ಸ್ಪಷ್ಪನೆ ನೀಡಿದ್ದಾರೆ.

ಹಂಸಲೇಖರವರು ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ, ದಲಿತರು ಕೋಳಿ ಕೊಟ್ಟರೆ ತಿಂತಾರಾ.? ಕುರಿ ರಕ್ತ ಫ್ರೈ ಮಾಡಿ ಕೊಟ್ಚರೆ ತಿಂತಾರಾ. ಲಿವರ್ ಕೊಟ್ಟರೆ ತಿಂತಾರಾ? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯುವುದು ದೊಡ್ಡ ವಿಷಯ ಎಂದು ಹೇಳಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಂಸಲೇಖ ಅವರು ತಮ್ಮ ಹೇಳಿಕೆ ಸಂಬಂಧ ಕ್ಷಮೆಯಾಚಿಸಿದ್ದರು.


LEAVE A REPLY

Please enter your comment!
Please enter your name here