ಕೇಂದ್ರ ಸರಕಾರದ 3 ಕೃಷಿ ತಿದ್ದುಪಡಿ ಕಾಯ್ದೆ ವಾಸ್

0
121
ನರೇಂದ್ರ ಮೋದಿ

ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ಚಳಿಗಾಲದ ಸಂಸತ್ತ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಲಿ, ರೈತರ ಆದಾಯವು ದ್ವಿಗುಣವಾಗೊಳಿಸಲು ಕೃಷಿ ಕಾಯ್ದೆಯನ್ನ ಜಾರಿಗೆ ತಂದೆವು. ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ ಎಂದು ಮೋದಿ ಸ್ಪಷ್ಟಪಡಿಸಿದರು.

ದೇಶವನ್ನುದ್ದೇಶಿಸಿ ಮಾತನಾಡಿ ಮೋದಿ ರೈತಪರ ಯೋಜನೆಗಳ ಜೊತೆ ರೈತರಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಲು ಸಮಿತಿ ರಚನೆ ಮಾಡಲಾಗುವದು ರಾಜ್ಯ ಸರಕಾರ, ವಿಜ್ಞಾನಿಗಳು ಮತ್ತು ರೈತರು ಸದಸ್ಯರಾಗಲಿದ್ದಾರೆ ಎಂದು ಹೇಳಿದರು.

ಒಂದು ವರ್ಷದಿಂದ ರೈತರು ನಿರಂತರ ಹೋರಾಟದ ಫಲವಾಗಿ ಇಂದು ಕೃಷಿ ಕಾಯ್ದೆಯನ್ನು ಮೋದಿ ಸರಕಾರ ವಾಪಸ್ಸು ಪಡೆದಿದ್ದು ರೈತರಿಗೆ ಸಂತಸ ತಂದಿದೆ. ಸಂಯುಕ್ತ ಕಿಸಾನ್ ಮೋರ್ಚಾ, ’ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೋದಿ ಸರ್ಕಾರದ ನಿರ್ಧಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ಸ್ವಾಗತಿಸುತ್ತದೆ. ಸಂಸತ್ತಿನ ಕಾರ್ಯವಿಧಾನಗಳ ಮೂಲಕ ಕಾನೂನುಗಳನ್ನು ಹಿಂಪಡೆಯುವ ಘೋಷಣೆಗಾಗಿ ಕಾಯುತ್ತೇವೆ. ಇದು ನಡೆದರೆ ಭಾರತದಲ್ಲಿ ಒಂದು ವರ್ಷದ ರೈತರ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಂತಾಗುತ್ತದೆ’ ಎಂದು ತಿಳಿಸಿದೆ.


ambedkar image

LEAVE A REPLY

Please enter your comment!
Please enter your name here