ಶತಾಯುಷಿ ಸಹೋದರಿಯರು; ಕವಲಗಿ ಗ್ರಾಮಸ್ಥರಿಂದ ಶತಾಯುಷಿಗಳಿಗೆ ಹುಟ್ಟುಹಬ್ಬದ ಸಂಭ್ರಮ

0
121

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು

ಡಾ. ರಾಜ್‌ ಕುಮಾರ ಅವರು ಹಾಡಿದ ಹಾಡಿಗೆ ಅರ್ಥ ಸಿಕ್ಕಂತಾಗಿದೆ. ವಿಜಯಪುರ ನಗರದ ಕವಲಗಿ ಗ್ರಾಮದ ನಿವಾಸಿಗಳಾದ ರಕ್ಮಾಬಾಯಿ ಸಾಳುಂಕೆ (103) ಕಾಶೀಬಾಯಿ ವೆಂ. ಪವಾರ (101) ಅವರ ಹುಟ್ಟುಹಬ್ಬದ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಹಿರಿಯ ಶಿಕ್ಷಕರಾದ ಶಂಕರ ಬಗಲಿ ಮಾತನಾಡಿ, ಸಂಪತ್ತು ಬೇಕಾದರೆ ಯಾರು ಬೇಕಾದರೂ ಗಳಿಸಬಹುದು ಆದರೆ ಒಂದು ಜೀವನದ ಸಾರ್ಥಕತೆಯನ್ನು ಬದುಕಿ ತೋರಿಸವದು ಅಷ್ಟು ಸುಲಭವಲ್ಲ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಇವರು ವಯೋಸಹಜದಂತೆ ಮದುವೆಮಾಡಿ ಕೊಟ್ಟರೂ ಒಬ್ಬರೂ ರುಕ್ಮಾಬಾಯಿ ಅದೆ ಗ್ರಾಮದ ವಿವಾಹ ಆದರೂ ದುರಾದೃಷ್ಟ ಬಹುಬೇಗನೆ ಪತಿಯನ್ನು ಕಳೆದುಕೊಂಡರೂ ಇನ್ನೊಬ್ಬರೂ ಕಾಶೀಬಾಯಿಯವರನ್ನೂ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ದೊಡ್ಡ ರೈತ ಕುಟುಂಬದ ವೆಂಕು ಬಾಳು ಪವಾರ ಇವರ ಜೊತೆ ವಿವಾಹವಾಗಿ ಜೀವನ ಪ್ರಾರಂಬಿಸಿದರು.

ಹತ್ತು ಜನ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟು ಕುಟುಂಬದ ಎಲ್ಲ ಜವಾಬ್ದಾರಿಯನ್ನ ವಹಿಸಿಕೊಳ್ಳುವದರ ಜೊತೆಗೆ ಆರೋಗ್ಯವನ್ನು ಸಹ ಕಾಪಾಡಿಕೊಂಡು ಬಂದಿದ್ದು ಇತಿಹಾಸವೇ ಸರಿ. ಇಬ್ಬರೂ ಅಕ್ಕ ತಂಗಿಯರು ನೂರು ವರ್ಷಾಯುಷ್ಯವನ್ನ ಪೊರೈಸಿದ್ದಕ್ಕೆ ಕವಲಗಿ ಗ್ರಾಮದ ಪವಾರ ಕುಟುಂಬ ಮತ್ತು ಪರಿವಾರ ಹಾಗು ಗ್ರಾಮಸ್ತರು ಸೇರಿ ಇವರಿಗೆ ಶತಮಾನ ಕಂಡ ಸಹೋದರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಕವಲಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಬಾಜಿ ವೆಂ. ಪವಾರ, ಈಶ್ವರ ವೆಂ. ಪವಾರ, ಬಾಳು ವೆಂ.ಪವಾರ, ಬಾಬು ವೆಂ.ಪವಾರ, ಅಮೃತ ವೆಂ.ಪವಾರ, ಏಕತನಾಥ ವಿ. ಪವಾರ, ಆನಂದ ಶಿ. ಪವಾರ, ಮಹೇಶ ಶ್ರೀ. ಪವಾರ, ರಾಜೇಂದ್ರ ನಾ. ಪವಾರ, ರವಿ ತಾ.ಪವಾರ, ಜೀಜಾಬಾಯಿ ಏ. ಢಗೆ, ಸೋನಾಬಾಯಿ ಪಿ. ಭಾರತೆ ಸೇರಿದಂತೆ ಮುಂತಾದವರು ಉಪಸ್ಥಿತಿರಿದ್ದರು.


LEAVE A REPLY

Please enter your comment!
Please enter your name here