ಕೊಲೆ ಮಾಡಿದವರನ್ನು ಬಂಧಿಸಿ; ವೀರಶೈವ ಲಿಂಗಾಯತ, ಪಂಚಮಸಾಲಿ, ಹೋರಾಟಗಾರರ ಸಂಘದಿಂದ ಒತ್ತಾಯ

0
77

ವಿಜಯಪುರ : ಅಣ್ಣಪ್ಪ ಮಾವಿನಗಿಡದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಬಾಗಿಯಾದ ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಿಂದು ವೀರಶೈವ ಲಿಂಗಾಯತ, ಪಂಚಮಸಾಲಿ, ಹೋರಾಟಗಾರರ ಸಂಘ ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಣ್ಣಪ್ಪ ಮಾವಿನಗಿಡದ,(54) ಪ್ರಗತಿನಗರ ಆಶ್ರಮ ರಸ್ತೆ, ಇವರನ್ನು ದಿನಾಂಕ : 10-11-2021 ರಂದು ಅಪಹರಣ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಇವತ್ತಿಗೆ ಒಂಬತ್ತು ದಿನಗಳು ಕಳೆದರು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸದೇ ಹೋದರೆ ನಾವು ಎಸ್.ಪಿ. ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು. ಈಗಿನ ಸರ್ಕಾರದಲ್ಲಿ ಸಮಸ್ತ ಲಿಂಗಾಯತರಿಗೆ ಅಸುರಕ್ಷತೆ ಎಂಬ ಭಾವನೆ ಮೂಡಲು ಪ್ರಾರಂಭವಾಗಿದೆ. ಇದೇ ರೀತಿ ಮುಂದುವರೆದರೆ ಉಗ್ರವಾಗಿ ಹೋರಾಡಲು ಸಿದ್ಧರಿದ್ದೇವೆ.

ಇದರ ಜೊತೆ ಕೆಳದ ಆರು ವರ್ಷಗಳಿಂದ ಆದ ಹಿಂದು ವೀರಶೈವ ಲಿಂಗಾಯತರ ಮೇಲೆ ಆದ ಕೊಲೆ, ಅಪಹರಣ, ದೌರ್ಜನ್ಯ ಹಾಗೂ ಇನ್ನಿತರ ಅಪರಾಧಗಳನ್ನು ಕೂಡಲೇ ಬೇದಿಸಿ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೆಕೇಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸುರೇಶ ಬಿರಾದಾರ, ಸಿದ್ದು ಮಾವಿನಗಿಡದ, ಎಸ್.ಟಿ. ಮಾವಿನ ಗಿಡದ, ಶ್ರೀಶೈಲ ಪಾಟೀಲ, ಆರ್.ಎಂ.ಮಣೂರ, ರಾಜುಗೌಡ ಪೊಲೀಸ್ ಪಾಟೀಲ, ಡಾ. ರೇಶ್ಮೀ, ಪ್ರದೀಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here