ಯುವಕ-ಯುವತಿಯನ್ನು ಹಿಂಬಾಲಿಸಿ ಅನೈತಿಕ ಪೊಲೀಸ್‌ ಗಿರಿ; ಆರು ಮಂದಿ ಅಂದರ್‌

0
71

ಮಂಗಳೂರು: ಆರು ಮಂದಿ ಯುವಕರ ಗುಂಪು ಅನೈತಿಕ ಪೊಲೀಸ್‌ ಗಿರಿ ಘಟನೆ ಮಂಗಳೂರು ನಗರದ ಸುರತ್ಕಲ್ ನಲ್ಲಿಂದು ನಡೆದಿದೆ.

ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಮೇಲೆ ಅನೈತಿಕ ಪೊಲೀಸ್ ಗಿರಿಯನ್ನು ಆರು ಮಂದಿ ಗುಂಪು ನಡೆಸಲಾಗಿತ್ತು ಎನ್ನಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಪ್ರಹ್ಲಾದ್, ಪ್ರಶಾಂತ್, ಗುರು ಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಎಂದು ಗುರುತಿಸಲಾಗಿದೆ.

ಯುವಕ – ಯುವತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಫಾಲೋ ಮಾಡಿದ ಯುವಕರ ತಂಡ ಸುರತ್ಕಲ್ ನ ಖಾಸಗಿ ಅಪಾರ್ಟ್ ಮೆಂಟ್ ಬಳಿ ಯುವಕನಿಗೆ ಥಳಿಸಿದ್ದಾರೆ. ಅಲ್ಲದೇ ಅನ್ಯಧರ್ಮಿಯ ಯುವಕನ ಜೊತೆ ಓಡಾಡುತ್ತೀಯ ಎಂದು ಯುವತಿಗೆ ಧಮ್ಕಿ ಹಾಕಿದ್ದರು.


LEAVE A REPLY

Please enter your comment!
Please enter your name here