ಮಕ್ಕಳು ಈ ದೇಶದ ಆಸ್ತಿ; ವಾಯ್ ಎಸ್ ಗುಣಕಿ

0
122

132 ನೇ ಮಕ್ಕಳ ದಿನಾಚರಣೆ ಹಾಗೂ ಜವಹರಲಾಲ್‌ ರವರ ಜನ್ಮ ದಿನದ ಆಚರಣೆ ಅಂಗವಾಗಿ ಶ್ರೀ ಶಾಂತೇಶ್ವರ ಅರೇವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮವನ್ನು ವಿಜೃಂಭನೆಯಿಂದ ಆಚರಿಸಲಾಯಿತು.

ಜೀವನ ಕಲಿಸುವುದು ಶಿಕ್ಷಣವಾದರೆ ಜೀವ ಉಳಿಸುವುದು ವೈದ್ಯಕೀಯ ವೃತ್ತಿ ಈ ಎರಡು ವೃತ್ತಿಗಳು ಮನುಜ ಕುಲಕ್ಕೆ ಅತಿ ಮುಖ್ಯವಾದದ್ದು ಆದರಿಂದ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂದಾಗ ಮಾತ್ರ ಈ ಜೀವನಕ್ಕೆ ಒಂದು ಅರ್ಥ ಸಿಗುವುದು. ಮಕ್ಕಳ ನೆಚ್ಚಿನ ಚಾಚ ಜವಾಹರಲಾಲ್‌ ನೆಹರೂ ರವರು ‘Tomorrow is yours’ ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು. ಇದರ ಅರ್ಥ ನಾಳೆ ನಿಮ್ಮದು ಎಂದು. ಭಾರತದ ತರುಣ ಪೀಳಿಗೆಯನ್ನು ಉದ್ದೇಶಿಸಿ ಅವರು ಹೀಗೆ ನುಡಿಯುತ್ತಿದ್ದರು. ಭಾರತದ ಸ್ವತಂತ್ರಕ್ಕೆ ಹೋರಾಡಿದ ಪ್ರಮುಖ ನಾಯಕರಲ್ಲಿ ಇವರು ಒಬ್ಬರಾಗಿದ್ದರು.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಹರಲಾಲ ನೆಹರು ಅವರು ಮಕ್ಕಳ ಮೇಲೆ ಅತಿಯಾದ ಪ್ರೀತಿ ಭಾಂದವ್ಯ ಹೊಂದಿದವರು ಹಾಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ನಮಗಾಗಿ ದೇಶ ದೇಶಕ್ಕಾಗಿ ನಾವು, ನಮಗಾಗಿ ದೇಶ ಹತ್ತು ಹಲವು ಸಹಕಾರ ಸವಲತ್ತು ನೀಡಿದೆ ದೇಶಕ್ಕೆ ನಾವೇನು ಕೊಡುಗೆ ನೀಡಿದ್ದಿವಿ ಅನ್ನೊದನ್ನ ಅರಿಯಬೇಕು.

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿ ಮಕ್ಕಳು ಈ ದೇಶದ ಆಸ್ತಿ. ಒಂದು ಕಲ್ಲು ಶಿಲೆಯಾಗಲು ಸಾವಿರಾರು ಉಳಿ ಏಟು ತಿನ್ನುವುದೋ ಹಾಗೆ ವಿದ್ಯಾರ್ಥಿ ಜೀವನವು ಸಾವಿರ ಏರು ಪೇರುಗಳ ಮಧ್ಯೆ ಸಾಗಿಬರುವ ಒಂದು ಮಹತ್ತರವಾದ ಘಟ್ಟವಾಗಿದೆ ಪ್ರತಿಯೊಬ್ಬರಲ್ಲಿಯು ಆತ್ಮ ವಿಶ್ವಾಸದ ಮನೋಭಾವ ಬೆಳೆಸಿಕೊಳ್ಳಬೇಕು. ಓದಿನ ಮೇಲೆ ಗಮನ ಹರಿಸುವ ಮೂಲಕ ತಮ್ಮ ಜೀವನದ ಶೈಕ್ಷಣಿಕ ಉನ್ನತಿಗೆ ಒಂದು ಹೊಸತನದ ದಾರಿಯನ್ನು ಹುಡುಕಿಕೊಂಡು ಸಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ನಮ್ಮನಿಮ್ಮೆಲ್ಲರ ಮೇಲೆ ಇದೆ ಎಂದು ವೈ.ಎಸ್. ಗುಣಕಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ರಮಬಾಯಿ ಪ್ರೌಢ ಶಾಲೆಯ ಮುಖ್ಯೋಪಾದ್ಯಯ ನೀಜಣ್ಣ ಕಾಳೆ, ಬಿ.ಎಸ್. ಮಾಲಿ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಶೀಧರ ವಾಲಿ ಅವರು ಸ್ವಾಗತಿಸಿದರು. ಅಲಮಸ ಕಾರ್ಯಕ್ರಮ ನಿರೂಪಿಸಿದರು. ಡಿ.ಎಸ್. ಮಠಪತಿ ವಂದಿಸಿದರು.


LEAVE A REPLY

Please enter your comment!
Please enter your name here