ಸಿಂದಗಿ ವಿಧಾನಸಭಾ ಉಪ ಚುನಾವಣೆ : ಶಸ್ತ್ರಾಸ್ತ್ರ ಲೈಸನ್ಸ್ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳಿಂದ ಆದೇಶ

0
123

ವಿಜಯಪುರ: ಜಿಲ್ಲೆಯ ಸಿಂದಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಎಲ್ಲಾ ಆಯುಧ ಲೈಸನ್ನದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಅಂದರೆ ಎಸ್.ಬಿ.ಬಿ.ಎಲ್/ಡಿ.ಬಿ.ಬಿ,ಎಲ್ ಬಂದೂಕು, ರೈಫಲ್ ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸನ್ನಗಳನ್ನು ದಿನಾಂಕ:28-09-2021 ರಿಂದ 05-11-2021 ರ ಅವಧಿವರೆಗೆ (ಎರಡು ದಿನಗಳು ಸೇರಿ) ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಶಸ್ತ್ರಾಸ್ತ್ರಗಳ ಅಧಿನಿಯಮ-1989 ರ ಕಲಂ-21 ರನ್ವಯ ಸಿಂದಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಸ್ತ್ರಾಸ್ತ್ರ ಹೊಂದಿದವರು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಅವರು ಹೊಂದಿದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ಜಮೆ ಮಾಡಬೇಕು.

ಈ ಆದೇಶವು ಬ್ಯಾಂಕುಗಳು ಮತ್ತು ಫ್ಯಾಕ್ಟರಿಗಳು ಭದ್ರತೆಗೋಸ್ಕರ ತೆಗೆದುಕೊಂಡಿರುವ ಆಯುಧಗಳಿಗೆ ಅನ್ವಯಿಸುವುದಿಲ್ಲ. ಪೊಲೀಸ ಇಲಾಖೆಯು ತಮ್ಮಲ್ಲಿ ತಂದಿರಿಸಿದ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ಅಭಿರಕ್ಷೆಯಾಡುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಶಸ್ತ್ರಾಸ್ತ್ರಗಳನ್ನು ತಂದಿಡುವ ಲೈಸನ್ನದಾರರಿಗೆ ಸೂಕ್ತ ರಶೀದಿಯನ್ನು ಕೊಡಬೇಕು.

ಶಸ್ತ್ರಾಸ್ತ್ರಗಳ ಅಧಿನಿಯಮ-1959 ರ ಕಲಂ:25 (1-2) (ಎಚ್) ರನ್ವಯ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ನಿಗದಿತ ಅವಧಿಯೊಳಗೆ ಸಂಬಂಧಿಸಿದ ಪೊಲೀಸ ಠಾಣೆಯಲ್ಲಿ ಜಮೆ ಮಾಡದಿದ್ದಲ್ಲಿ (ಎರಡು ವರ್ಷಗಳ ವರೆಗೆ ಆದರೆ ಐದು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡ ಕಟ್ಟುವ ಹೊಣೆ) ಕಾರಾಗೃಹ ಶಿಕ್ಷೆ ಮತ್ತು ಅಲ್ಲಾನೆಯ ದಂಡನೆಗಳಿಗೆ ಒಳಪಡುವ ನಿಯಮಗಳನ್ನು ಸಂಬಂಧಿಸಿದ ಲೈಸನ್ನದಾರರು ಗಮನಿಸಬೇಕು.

ಈ ಲೈಸನ್ಸ ಸ್ಥಗಿತಗೊಳಿಸಿದ ಆದೇಶವು ಮೇಲ್ಕಂಡ ಅವಧಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ದಿನಾಂಕ. 08-11-2021 ರ ನಂತರ ತನ್ನಿಂದ ತಾನೇ ರದ್ದಾಗುತ್ತದೆ. ಎಲ್ಲ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ಸಂಬಂಧಿಸಿದ ಲೈಸನ್ನದಾರರಿಗೆ ದಿನಾಂಕ: 06-11-2021 ರಂದು ಮರಳಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here