ಉದ್ಯಾನವನ, ವಾಟರ್ ಫ್ರಂಟ್ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್

0
37
ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ. ಜುಲೈ 29: ಭೂತನಾಳ ಕೆರೆ ವ್ಯಾಪ್ತಿಯ ಉದ್ಯಾನವನ ಹಾಗೂ ವಾಟರ್ ಫ್ರಂಟ್  ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ  ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಭೂತನಾಳ ಕೆರೆ  ಪಕ್ಕದ ಉದ್ಯಾನವನ ಹಾಗೂ ವಾಟರ್ ಫ್ರಂಟ್ ಅಭಿವೃದ್ಧಿ ಕಾಮಗಾರಿಗಳನ್ನು ನಿನ್ನೆ ಪರಿಶೀಲಿಸಿದ ಅವರು ಉದ್ಯಾನವನ ಹಾಗೂ ವಾಟರ್ ಫ್ರಂಟ್ ಈ ಕಾಮಗಾರಿಗಳನ್ನು ಆಧ್ಯತೆ ಮೇಲೆ ಪೂರ್ಣಗೊಳಿಸುವಂತೆ ಪಾಲಿಕೆಯ ಅಭಿಯಂತರರಿಗೆ ಸೂಚಿಸಿದರು.

ಪ್ರಸ್ತುತ ಕಾಮಗಾರಿಯು 9 ಕೋಟಿ ರೂ ಅಂದಾಜು ಮೊತ್ತದಲ್ಲಿ ಪಾಥವೇ, ಲ್ಯಾಂಡ್ ಸ್ಟೆಪ್ಪಿಂಗ್, ಕಾರಂಜಿ, ಫುಡ್ ಕೋರ್ಟ್, ಶೌಚಾಲಯ,ಟಿಕೆಟ್ ಕೌಂಟರ್, ಚಿಕ್ಕ ಮಕ್ಕಳ ಉದ್ಯಾನವನ ಹಾಗೂ ಇತರೆ ಘಟಕಗಳು ಇರುವುದಾಗಿ ಮತ್ತು ಹೆಚ್ಚುವರಿ ಅಂದಾಜು 4  ಕೋಟಿ ರೂಗಳಲ್ಲಿ ವಾಕ್ ವೇ, ಸೋಲಾರ್, ಲೈಟ್ ಸಿಸ್ಟಮ್, ಪಾಕಿರ್ಂಗ್, ಬ್ಯಾರಿಕೇಡ್ ಗಳಿಗೆ ಟೆಂಡರ್ ಕರೆಯುವುದಾಗಿ ಸಹಾಯಕ ಕಾರ್ಯಪಾಲಕ  ಅಭಿಯಂತರರಾದ ಕೋಲ್ಹಾರ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರು ಶ್ರೀ ವಿಜಯ್ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಲರಾಮ್ ಲಮಾಣಿ, ಹಾಗೂ ಪಾಲಿಕೆಯ ಅಭಿಯಂತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here